ಬೆಂಗಳೂರು: ಹೆಣ್ಣುಮಕ್ಕಳಿಗೆ ಹಾಗೂ ಮಹಿಳೆಯರಿಗೆ ನಮ್ಮ ದೇಶದಲ್ಲಿ ಬಗೆಬಗೆಯ ಶಾಸ್ತ್ರ ಸಂಪ್ರದಾಯ ಮಾಡುವುದು ಸರ್ವೆ ಸಾಮಾನ್ಯ. ಆದರೆ ಇಲ್ಲೊಂದು ಗ್ರಾಮದಲ್ಲಿ ಪುರುಷನಿಗೆ ಮಹಿಳೆಯರಿಗೆ ಮಾಡುವ ಶಾಸ್ತ್ರ ಸಂಪ್ರದಾಯ ಮಾಡಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ದೃಶ್ಯ ಕಳೆದ ಮೂರು ದಿನದ ಹಿಂದೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಭಕ್ತನಪಾಳ್ಯದಲ್ಲಿ ನಡೆದಿದೆ. ಈ ಗ್ರಾಮದ ಲೋಕೇಶ್ ಎಂಬುವವರ ಮನೆಯಲ್ಲಿ ಯುವತಿಗೆ ಆರತಿ ಶಾಸ್ತ್ರವನ್ನ ಹಮ್ಮಿಕೊಂಡಿದ್ದರು.
Advertisement
Advertisement
ಈ ಹಿಂದೆಯೂ ಈ ಕುಟುಂಬದಲ್ಲಿ ಈ ಸಂಪ್ರದಾಯ ಮಾಡಲಾಗಿತ್ತು. ಹೀಗಾಗಿ ಕುಟುಂಬದಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನ ಉಳಿಸುವ ನಿಟ್ಟಿನಲ್ಲಿ ಈ ರೀತಿಯಲ್ಲಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಲೋಕೇಶ್ ಎಂಬುವವರಿಗೆ ಅರಿಶಿನ ಕುಂಕುಮ, ಹೂ ಮುಡಿಸಿ ಮಹಿಳೆಯರಿಗೆ ಮಾಡುವ ಎಲ್ಲಾ ರೀತಿಯ ಶಾಸ್ತ್ರವನ್ನ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಒಂದು ರೀತಿಯಲ್ಲಿ ನೋಡುಗರಲ್ಲಿ ಕುತೂಹಲ ಮೂಡಿಸಿದೆ.
Advertisement
https://www.youtube.com/watch?v=rvN29942JPg