ಬೆಂಗಳೂರು: ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಮಾಡಿರೋ ಮೀ ಟೂ ಆರೋಪ ದಿನಕ್ಕೊಂದು ರೂಪ ಪಡೆಯುತ್ತಾ ಮುಂದುವರೆಯುತ್ತಿದೆ. ಈ ಪ್ರಕರಣದ ಬಗ್ಗೆ ರಾಜ್ಯ ಮಹಿಳಾ ಆಯೋಗ ಇತ್ತೀಚೆಗೆ ಸ್ವಯಂಪ್ರೇರಿತ ದೂರು ದಾಖಲಿಸಿತ್ತಲ್ಲಾ? ಇದೀಗ ಖುದ್ದು ಮಹಿಳಾ ಆಯೋಗವೇ ಶ್ರುತಿ ಹರಿಹರನ್ ವಿರುದ್ಧ ಅಸಹನೆಗೊಂಡಿರೋ ಸುದ್ದಿಯೊಂದು ಹೊರಬಿದ್ದಿದೆ.
ಹೀಗೊಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಮಹಿಳಾ ಆಯೋಗ ಈ ಬಗ್ಗೆ ಹೇಳಿಕೆ ಕೊಡುವಂತೆ ಶ್ರುತಿ ಹರಿಹರನ್ ಗೆ ಸೂಚಿಸಿತ್ತು. ಆದರೆ ಶ್ರುತಿ ಅದಕ್ಕೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ. ಇದಲ್ಲದೇ ಆಯೋಗದ ಫೋನ್ ಕರೆ, ಸಂದೇಶಗಳಿಗೂ ಶ್ರುತಿ ಪ್ರತಿಕ್ರಿಯಿಸುತ್ತಿಲ್ಲವಂತೆ. ಇದುವೇ ಮಹಿಳಾ ಆಯೋಗದ ಅಸಹನೆಗೆ ಕಾರಣವಾಗಿದೆ.
Advertisement
Advertisement
ಇದೆಲ್ಲದರಿಂದಾಗಿ ಮಹಿಳಾ ಆಯೋಗ ಶ್ರುತಿಗೊಂದು ಖಡಕ್ಕು ಸಂದೇಶ ರವಾನಿಸಿದೆಯಂತೆ. ಇದನ್ನು ಕಂಡು ಕಸಿವಿಸಿಗೊಂಡ ಶ್ರುತಿ ಕ್ಷಮೆ ಯಾಚಿಸಿ ಸೋಮವಾರ ಹಾಜರಾಗಿ ಹೇಳಿಕೆ ಕೊಡೋದಾಗಿ ಹೇಳಿದ್ದಾರಂತೆ. ಶ್ರುತಿ ಮಹಿಳಾ ಆಯೋಗದ ಮುಂದೆ ಹೋಗಿ ಹೇಳಿಕೆ ಕೊಡಲು ಯಾಕೆ ಮೀನ-ಮೇಷ ಎಣಿಸುತ್ತಿದ್ದಾರೆಂಬ ಪ್ರಶ್ನೆಯೂ ಸಹಜವಾಗಿಯೇ ಕಾಡುತ್ತದೆ!
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews