ಬೆಂಗಳೂರು: ಮಹಿಳಾ ಉದ್ಯೋಗಿಗಳೇ ಹುಷಾರ್. ನಿಮ್ಮ ಫೋಟೊಗಳನ್ನ ಸ್ನೇಹಿತರು ಎಂದು ಯಾರಿಗಾದರು ಕೊಟ್ಟೀರಾ ಜೋಕೆ. ಏಕೆಂದರೆ ಫೋಟೊಗಳಿಗೆ ನಗ್ನ ದೇಹಗಳನ್ನ ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ.
ಹೌದು. ಆ್ಯಡ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಮಹಿಳೆಯ ಫೋಟೊ ಪಡೆದು, ಪರಿವರ್ತಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯನ್ನು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ.
Advertisement
ನಾರಾಯಣ ಪ್ರಭು ಬಂಧಿತ ಆರೋಪಿ. ಈತ ಇನ್ಫೆಂಟ್ರಿ ರಸ್ತೆಯಲ್ಲಿರೋ ಫ್ರಾಂಕ್ ಫಿನ್ ಇನ್‍ಸ್ಟಿಟ್ಯೂಟ್ ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಮೂರು ತಿಂಗಳ ಹಿಂದೆ ಇದೇ ಕಂಪನಿಗೆ ಮಹಿಳೆಯೊಬ್ಬರು ಕೆಲಸಕ್ಕೆ ಸೇರಿದ್ದರು. ಆರೋಪಿ ನಾರಾಯಣ ಪ್ರಭು ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ನಂತರ ಆ್ಯಡ್ ಕಂಪನಿಯಲ್ಲಿ ಕೆಲಸ ಕೊಡಿಸೋದಾಗಿ ಮಹಿಳೆಯಿಂದ ಫೋಟೊಗಳನ್ನ ಪಡೆದಿದ್ದಾನೆ.
Advertisement
Advertisement
ಆ ಬಳಿಕ ನನ್ನ ಜೊತೆ ಹಾಸಿಗೆ ಹಂಚಿಕೊಳ್ಳಬೇಕು, ಇಲ್ಲ ಹಣ ಕೊಡಬೇಕು. ನಿನ್ನ ಫೋಟೋಗಳನ್ನ ಪರಿವರ್ತಿಸಿ ನಗ್ನ ದೇಹಕ್ಕೆ ನಿನ್ನ ಮುಖ ಹಾಕಿ ಫೇಸ್ಬುಕ್ ಮತ್ತು ವಾಟ್ಸಾಪ್‍ಗಳಲ್ಲಿ ಹರಿಯಬಿಡುತ್ತೇನೆ. ಅಲ್ಲದೇ ನಿನ್ನ ಗಂಡನಿಗೂ ಕಳಿಸುತ್ತೇನೆ ಎಂದು ಹೆದರಿಸಿದ್ದಾನೆ. ಅಲ್ಲದೇ ಒಂದು ಬಾರಿ ಮಹಿಳೆಯ ಪತಿಗೂ ಕರೆ ಮಾಡಿದ್ದಾನೆ.
Advertisement
ಇದೀಗ ನೊಂದ ಮಹಿಳೆ ಕಮರ್ಷಿಯಲ್ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದು, ಆರೋಪಿ ನಾರಾಯಣ ಪ್ರಭುವನ್ನು ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಅಟ್ಟಿದ್ದಾರೆ.