ಸ್ಯಾನಿಟರಿ ಪ್ಯಾಡ್ ಗಾಗಿ 40 ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಹಾಸ್ಟೆಲ್ ವಾರ್ಡನ್!

Public TV
1 Min Read
STUDENT

ಭೋಪಾಲ್: ಹಾಸ್ಟೆಲ್ ಕಾರಿಡಾರ್ ನಲ್ಲಿ ಬಳಸಿ ಬಿಸಾಡಿದ ಸ್ಯಾನಿಟರಿ ನ್ಯಾಪ್ಕಿನ್ ಪತ್ತೆಯಾಗಿದ್ದಕ್ಕೆ ಮಹಿಳಾ ವಾರ್ಡನ್ ಹಾಸ್ಟೆಲ್ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಪರಿಶೀಲನೆ ನಡೆಸಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಸಾಗರ್ ನಲ್ಲಿರುವ ಡಾ.ಎಚ್.ಎಸ್.ಗೌರ್ ಸೆಂಟ್ರಲ್ ಯೂನಿವರ್ಸಿಟಿ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ವಿದ್ಯಾರ್ಥಿನಿಯರು ಉಪಕುಲಪತಿ ಪ್ರೊಫೆಸರ್ ಆರ್.ಪಿ ತಿವಾರಿ ಅವರಲ್ಲಿ ವಾರ್ಡನ್ ವಿರುದ್ಧ ದೂರು ನೀಡಿದ್ದಾರೆ. ಈಗ ವಿವಿ ಘಟನೆ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದೆ.

ಭಾನುವಾರ ಹಾಸ್ಟೆಲ್ ನ ಕಾರಿಡಾರ್ ನ ವಾಶ್‍ರೂಮ್ ಬಳಿ ನ್ಯಾಪ್ಕಿನ್ ಸಿಕ್ಕಿದೆ. ಇದರಿಂದ ಅಲ್ಲಿ ಯಾರು ನ್ಯಾಪ್ಕಿನ್ ಎಸೆದವರು ಎಂದು ಪತ್ತೆ ಮಾಡಲು ಮಹಿಳಾ ವಾರ್ಡನ್ ಮುಂದಾಗಿದ್ದಾರೆ. ಆಗ ಯಾರಿಗೆ ಋತುಸ್ರಾವ ಆಗಿದೆ ಎಂದು ಪರಿಶೀಲಿಸಲು ವಿದ್ಯಾರ್ಥಿನಿಯರನ್ನು ಒಬ್ಬೊರಂತೆ ಕರೆದು ವಿವಸ್ತ್ರಗೊಳಿಸಿದ್ದಾರೆ.

sanitary napkins.

ಈ ಘಟನೆ ನಡೆದ ನಂತರ ಸುಮಾರು 40 ವಿದ್ಯಾರ್ಥಿನಿಯರು ಈ ಬಗ್ಗೆ ವಿಸಿಗೆ ದೂರು ನೀಡಿದ್ದಾರೆ. ಈ ಬಗ್ಗೆ ವಾರ್ಡನ್ ಜೊತೆ ಮಾತನಾಡಿದ್ದೇವೆ. ಆದರೆ ವಾರ್ಡನ್ ಈ ಆರೋಪವನ್ನು ನಿರಾಕರಿಸುತ್ತಿದ್ದು, ತನಗೆ ಈ ಬಗ್ಗೆ ಮಾಹಿತಿಯೇ ತಿಳಿದಿಲ್ಲ ಅಂತಾ ಹೇಳಿದ್ದಾರೆ. ಇನ್ನು ಮೂರು ದಿನದೊಳಗೆ ಸಮಿತಿಯು ವಿಚಾರಣೆ ನಡೆಸಿ ವರದಿ ಸಲ್ಲಿಸುತ್ತದೆ. ನಂತರ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಪ್ರೊ. ತಿವಾರಿ ಹೇಳಿದ್ದಾರೆ.

ಹಾಸ್ಟೆಲ್ ನ ಉಸ್ತುವಾರಿ ಸಂಧ್ಯಾ ಪಟೇಲ್, ಯಾವುದೇ ವಿದ್ಯಾರ್ಥಿಯನ್ನೂ ಪರಿಶೀಲನೆ ಮಾಡಿಲ್ಲ ಎಂದು ಹೇಳಿದ್ದಾರೆ. ಹಾಸ್ಟೆಲ್ ವಾರ್ಡನ್ ಚಂಡಾ ಬೈನ್ ಕೂಡ ನನಗೆ ಈ ಘಟನೆ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಆದರೆ ಪರಿಶೀಲನೆಯ ನಂತರ 40 ವಿದ್ಯಾರ್ಥಿನಿಯರು ದೂರು ನೀಡಲು ವಿಸಿ ಮನೆಗೆ ಹೋಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *