– ನೇಹಾ ಹತ್ಯೆಯಾದ ದಿನ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ಕೊಡ್ತೀವಿ: ಶ್ರೀರಾಮಸೇನೆ ನಾಯಕ
ಹುಬ್ಬಳ್ಳಿ: ಮಹಿಳೆಯರು ಬ್ಯಾಗ್‌ನಲ್ಲಿ ತ್ರಿಶೂಲ ಇಟ್ಟುಕೊಳ್ಳಿ. ಅತ್ಯಾಚಾರಿಗಳು, ಕೊಲೆಗಡುಕರು, ಲವ್ ಜಿಹಾದ್ ಮಾಡುವವರಿಗೆ ತ್ರಿಶೂಲದಿಂದ ಚುಚ್ಚಿ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನೇಹಾ ಹಿರೇಮಠ ಹತ್ಯೆಯಾಗಿ ಏ.18 ಕ್ಕೆ ಒಂದು ವರ್ಷ ಆಗುತ್ತೆ. ಅಂದು ಶ್ರೀರಾಮಸೇನೆ ಒಂದು ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲಿದೆ. ಮಹಿಳೆಯರು ತಮ್ಮ ಬ್ಯಾಗ್‌ನಲ್ಲಿ ಈ ತ್ರಿಶೂಲ ಇಟ್ಟುಕೊಳ್ಳಲಿ. ಇಂತಹವರು ಯಾರಾದ್ರು ಬಂದ್ರೆ ಚುಚ್ಚಿ. ಅತ್ಯಾಚಾರಿಗಳು, ಕೊಲೆಗಡುಕರು, ಲವ್ ಜಿಹಾದ್ ಮಾಡುವವರಿಗೆ ಚುಚ್ಚಿ. ಕಾಂಗ್ರೆಸ್ ಮಹಿಳೆಯರ ರಕ್ಷಣೆ ಮಾಡಲ್ಲ. ಕಾಂಗ್ರೆಸ್ ಇರೋದು ಮುಸ್ಲಿಮರ ರಕ್ಷಣೆಗಾಗಿ, ಅವರ ವೋಟ್‌ಗಾಗಿ ಜೊಲ್ಲು ಸುರಿಸುತ್ತಾರೆ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ಅನ್ಯಕೋಮಿನ ಯುವಕನ ಟಾರ್ಚರ್‌ನಿಂದ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಯುವತಿಯನ್ನು ಮುತಾಲಿಕ್ ಭೇಟಿಯಾದರು. ಯುವತಿ ಆರೋಗ್ಯದ ಬಗ್ಗೆ ವಿಚಾರಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಕಳೆದ ಎರಡು ದಿನಗಳ ಹಿಂದೆ ಅನ್ಯಕೋಮಿನ ಯುವಕ ಸಿರಾಜ್ ಯುವತಿಗೆ ಟಾರ್ಚರ್ ನೀಡುತ್ತಿದ್ದ. ಧಾರವಾಡ ಜಿಲ್ಲೆಯ ಕುಂದಗೋಳ ನಿವಾಸಿ ಯುವತಿಗೆ ಟಾರ್ಚರ್ ನೀಡಿದ್ದ. ಖಾಸಗಿ ಫೋಟೊ ಇಟ್ಕೊಂಡು ಬ್ಲಾö್ಯಕ್‌ಮೇಲ್ ಮಾಡಿದ್ದ. ಇದರಿಂದ ಮನನೊಂದು ಯುವತಿ ಆತ್ಮಹತ್ಯೆಗೆ ಯತ್ನಸಿದ್ದಳು. ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬAಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಡೀ ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ಇರುವುದು ಬಿಜೆಪಿ ಪಕ್ಷ ಒಂದೆ. ಆದರೆ ಕರ್ನಾಟಕದಲ್ಲಿ ಹಿಂದುತ್ವ, ಹಿಂದೂ ಸಂಘಟನೆಗಳನ್ನು ಸರಿಯಾಗಿ ಗಮನಿಸಿಲ್ಲ. ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲಿನ ಕೇಸ್ ವಾಪಸಾತಿ ಮಾಡಿಲ್ಲ. ಬಿಜೆಪಿ ಆಡಳಿತದಲ್ಲೇ ಹಿಂದೂ ಸಂಘಟನೆ ಮುಖ್ಯಸ್ಥರ ಕೊಲೆಯಾಯಿತು. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಬಿಜೆಪಿ ನೆಲಕ್ಕೆ ಬಿದ್ದಿದೆ. ಯತ್ನಾಳ್ ಅವರು ಹಿಂದೂ ಪಕ್ಷ ಕಟ್ಟುವುದಕ್ಕಿಂತ ಬಿಜೆಪಿಯನ್ನೇ ಪ್ರಬಲ ಹಿಂದೂಪಕ್ಷ ಮಾಡೋದು ಒಳ್ಳೆಯದು. ಯತ್ನಾಳ್‌ರನ್ನು ವಾಪಸಾತಿ ಮಾಡಲೇಬೇಕು. ರಾಜ್ಯ ಬಿಜೆಪಿಯಲ್ಲಿ ಭ್ರಷ್ಟಾಚಾರ ರಹಿತ, ವಂಶದ ರಹಿತ ಆಡಳಿತ ನಡೆಸುವ ಪ್ರಕ್ರಿಯೆ ಮಾಡಬೇಕು. ರಾಜ್ಯದಲ್ಲಿ ಮುಂದೆ ಬಿಜೆಪಿ ಒಳ್ಳೆಯ ಭವಿಷ್ಯಯಿದೆ ಎಂದು ತಿಳಿಸಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಸ್ವಾಗತಿಸಿದ ಮುತಾಲಿಕ್, ವಕ್ಫ್ ಬೋರ್ಡ್ ಹೆಸರಿನಲ್ಲಿ ಸರ್ಕಾರಿ ಜಾಗ, ರೈತರ, ಮಠಮಾನ್ಯಗಳ, ದಲಿತರ ಜಾಗ, ಎಂಎಲ್‌ಎ, ಎಂಪಿಗಳ ಜಾಗವನ್ನು ಅತಿಕ್ರಮಣ ಮಾಡಿ ವಕ್ಫ್ ಬೋರ್ಡ್ ಲೂಟಿ ಮಾಡುತ್ತಿತ್ತು. ಇದರ ವಿರುದ್ಧ ಬಿಲ್ ಪಾಸ್ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಅಭಿನಂದನೆ. ಇದನ್ನು ವಿರೋಧ ಮಾಡುತ್ತಿರುವವರು ದೇಶದ್ರೋಹಿಗಳು. ಬರೀ ವೋಟ್‌ಬ್ಯಾಂಕ್, ಅಧಿಕಾರ ಒಂದೇ ಅಲ್ಲ. ದೇಶ, ಜನ ಇದ್ದಾರೆ. ಆದರೆ ಲೂಟಿಕೋರರ ಪರವಾಗಿ ನಿಲ್ಲತ್ತಾರೆ ಕನಿಷ್ಠ ಪ್ರಜ್ಞೆ ಇಲ್ವ. ಸಂವಿಧಾನದ ಮೀರಿ ಕಾಂಗ್ರೆಸ್ ಕಾನೂನು ತಂದಿದೆ. ಅವರಿಗೆ ನಾಚಿಕೆ ಆಗಬೇಕು. ಸಂವಿಧಾನದ ಧಿಕ್ಕರಿಸಿ ವಕ್ಫ್ ಬೋರ್ಡ್ಗೆ ಪವರ್ ನೀಡಿದ್ದರು ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್‌ನವರು ನೀತಿಗೆಟ್ಟವರು, ನೀಚ ಕಾಂಗ್ರೆಸ್ಸಿಗರು. ವಕ್ಫ್ ಬೋರ್ಡ್ ಕೆಲ ಮೌಲ್ವಿಗಳು ವ್ಯವಸ್ಥಿತವಾಗಿ ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡುತ್ತಿದ್ದರು. ಮಲ್ಲಿಕಾರ್ಜುನ ಖರ್ಗೆ ವಕ್ಫ್ ಬೋರ್ಡ್ ಹೆಸರಿನಲ್ಲಿ ನೂರಾರು ಎಕರೆ ಲೂಟಿ ಮಾಡಿರುವ ಆರೋಪ ಹೊರಬಂದಿದೆ. ಅನ್ವರ್ ಮಾನ್ಪಡಿ ವರದಿಯಲ್ಲಿ ದಾಖಲೆ ಸಮೇತ ಇದೆ ಇದಕ್ಕೆಲ್ಲಾ ಕರ್ನಾಟಕ ಬಿಜೆಪಿ ಕಾರಣ. ಕರ್ನಾಟಕ ಬಿಜೆಪಿಯವರು ಅನ್ವರ್ ಮಾನ್ಪಡಿ ವರದಿಯನ್ನು ತಮ್ಮ ಕುರ್ಚಿ ಬುಡದಲ್ಲಿ ಇಟ್ಟುಕೊಂಡು ಈಗ ವಕ್ಫ್ ಬೋರ್ಡ್ ಬಗ್ಗೆ ಮಾತನಾಡುತ್ತಾರೆ. ಕರ್ನಾಟಕ ಬಿಜೆಪಿಗೆ ನಾಚಿಕೆ ಆಗಬೇಕು. ಎಷ್ಟು ರೀತಿಯ ಡೀಲಿಂಗ್, ವ್ಯವಹಾರ ಆಗಿದೆ. ಕರ್ನಾಟಕ ಬಿಜೆಪಿಗೆ ವಕ್ಫ್ ಬೋರ್ಡ್ ಬಿಲ್ ಬಗ್ಗೆ ಮಾತನಾಡಬೇಡಿ. ಓವೈಸಿ ಮತ್ತು ಮುಸ್ಲಿಂ ಎಂಪಿಗಿಂತ ಹಿಂದೂ ಎಂಪಿಗಳು ವಿರೋಧ ಮಾಡಿದರು. ಇವರಿಗೆ ಮಾನ, ಮರ್ಯಾದೆ ಇದೆಯಾ? ಮೋದಿಯವರು ತೆಗೆದುಕೊಂಡ ಕ್ರಮ ಅತ್ಯಂತ ಶ್ರೇಷ್ಠವಾಗಿದೆ ಎಂದು ತಿಳಿಸಿದ್ದಾರೆ.