ಚಿಕ್ಕಮಗಳೂರು: ಅಚಾನಕ್ಕಾಗಿ ಮೂರು ಗುಡಿಸಲಿಗೆ ಬೆಂಕಿ ಬಿದ್ದ ವೇಳೆ ಮಹಿಳೆಯರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಸಿನಿಮಿಯ ರೀತಿಯಲ್ಲಿ ಇಬ್ಬರ ಜೀವ ಉಳಿಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ (Kadur Taluku) ಅಂತರಘಟ್ಟೆ ಸಮೀಪದ ಗುಮ್ಮನಹಳ್ಳಿ ಸಮೀಪದ ಬೋವಿ ಕಾಲೋನಿಯಲ್ಲಿ ನಡೆದಿದೆ.
ಬೋವಿ ಕಾಲೋನಿಯಲ್ಲಿ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದರು. ಕಾಲೋನಿಯಲ್ಲಿದ್ದ ಪುರುಷರು ಮೃತಪಟ್ಟಿದ್ದ ವ್ಯಕ್ತಿಯ ಅಂತ್ಯಸAಸ್ಕಾರಕ್ಕೆ ತೆರಳಿದ್ದರು. ಈ ವೇಳೆ ಕಾಲೋನಿಯಲ್ಲಿದ್ದ ಶಶಿ, ಕಲ್ಲೇಶ್ ಹಾಗೂ ಹನುಮಂತ ಎಂಬವರ ಮೂರು ಗುಡಿಸಲಿಗೆ ಅಚಾನಕ್ಕಾಗಿ ಬೆಂಕಿ ಬಿದ್ದಿತ್ತು. ಈ ವೇಳೆ ಕಲ್ಲೇಶ್ ಮನೆಯಲ್ಲಿ ಆರು ವರ್ಷದ ಮಗು ಕೂಡ ಮಲಗಿತ್ತು. ಹನುಮಂತ ಮನೆಯಲ್ಲಿ ಹನುಮಂತ ಕೂಡ ಮದ್ಯ ಸೇವಿಸಿ ಮನೆಯಲ್ಲೇ ಮಲಗಿದ್ದರು.
Advertisement
Advertisement
ಬೆಂಕಿ ಹತ್ತುತ್ತಿದ್ದಂತೆ ಬೆಂಕಿಯ ಕೆನ್ನಾಲಿ ಬಿಸಿಲ ಧಗೆಗೆ ಮತ್ತಷ್ಟು ಜೋರಾಗಿತ್ತು. ನೋಡ-ನೋಡ್ತಿದ್ದಂತೆ ಮೂರು ಗುಡಿಸಲು ಹೊತ್ತಿ ಉರಿದಿತ್ತು. ಈ ವೇಳೆ ಪುರುಷರು ಕೂಡ ಮನೆಯಲ್ಲಿ ಇರಲಿಲ್ಲ. ಆಗ ಬೆಂಕಿಯ ಕೆನ್ನಾಲಿಗೆ ಜೋರಾಗಿತ್ತು. ಕೂಡಲೇ ಗ್ರಾಮದಲ್ಲಿದ್ದ ಮಹಿಳೆಯರು ತಮ್ಮ ಜೀವವನ್ನೂ ಲೆಕ್ಕಿಸದೆ ಆರು ವರ್ಷದ ಮಗು ಹಾಗೂ ಮದ್ಯ ಸೇವಿಸಿ ಮಲಗಿದ್ದ ಮಧ್ಯ ವಯಸ್ಕ ಪುರಷನನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಭಾರತೀಯ ಮೂಲದ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣದಿಂದ ವಿಚಲಿತರಾಗಿದ್ದೇವೆ: ಯುಎಸ್
Advertisement
Advertisement
ವಿಷಯ ತಿಳಿಯುತ್ತಿದ್ದಂತೆ ಅಂತ್ಯಸAಸ್ಕಾರಕ್ಕೆ ತೆರಳಿದ್ದ ಪುರುಷರು ಅರ್ಧಕರ್ಧ ಜನ ಬಿಟ್ಟು ಓಡಿ ಬಂದಿದ್ದರು. ಮನೆಗಳ ಪಕ್ಕದಲ್ಲಿದ್ದ ತೊಟ್ಟಿಯಲ್ಲಿ ಪೂರ್ತಿ ನೀರಿದ್ದ ಕಾರಣ ಎಲ್ಲರೂ ಸೇರಿ ಬೆಂಕಿಯನ್ನ ನಂದಿಸಿದ್ದಾರೆ. ಆದರೆ ಎರಡು ಮನೆಗಳು ಸಂಪೂರ್ಣ ಸುಟ್ಟು ಹೋಗಿ, ಒಂದು ಮನೆ ಭಾಗಶಃ ಸುಟ್ಟಿದೆ. ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣ ನಂದಿಸಿದ್ದಾರೆ. ಈ ಸಂಬಂಧ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Web Stories