ಮುಂಬೈ: ಡ್ಯಾನ್ಸ್ ಬಾರ್ ಮೇಲೆ ಪೊಲೀಸರು ದಾಳಿ ನಡೆಸಿ ರಹಸ್ಯ ಕೋಣೆಯಲ್ಲಿದ್ದ ಮಹಿಳೆಯರನ್ನು ರಕ್ಷಿಸಿದ ಘಟನೆ ಅಂಧೇರಿ ಏರಿಯಾದಲ್ಲಿ ಬೆಳಕಿಗೆ ಬಂದಿದೆ.
ರಹಸ್ಯ ಕೋಣೆಯೊಂದರಲ್ಲಿ ಕೂಡಿಟ್ಟಿದ್ದ 17 ಮಹಿಳೆಯರನ್ನು ಗ್ರಾಹಕರ ಮುಂದೆ ನೃತ್ಯ ಮಾಡಲು ಬಳಸಿಕೊಳ್ಳಲಾಗುತ್ತಿದೆ ಎಂಬ ಸುಳಿವಿನ ಮೇರೆಗೆ ಬಾರ್ ಮೇಲೆ ಸ್ಥಳೀಯ ಪೊಲೀಸರು ದಾಳಿ ನಡೆಸಿದ ವೇಳೆ ಈ ಘಟನೆ ಬಯಲಿಗೆ ಬಂದಿದೆ.
ಬಾರ್ ಡಾನ್ಸ್ ನಡೆಸುತ್ತಿದ್ದ ವ್ಯಕ್ತಿ ಮಹಿಳೆಯರನ್ನು ರಹಸ್ಯ ಕೋಣೆಯಲ್ಲಿ ಕೂಡಿಟ್ಟಿದ್ದ. ಪೊಲೀಸರು ದಾಳಿ ನಡೆಸುತ್ತಾರೆ ಎಂದು ಗೊತ್ತಾದ ಬೆನ್ನಲ್ಲೇ ರಹಸ್ಯ ಕೋಣೆಗೆ ತಂತ್ರಜ್ಞಾನದ ಸಹಾಯದಿಂದ ಲಾಕ್ ಮಾಡಿದ್ದ. ದಾಳಿ ನಡೆಸಿದ ಪೊಲೀಸರು ಬಾರ್‌ನ್ನು ಶೋಧಿಸಿದರೂ ಮಹಿಳೆಯರ ಪತ್ತೆಯಾಗಲಿಲ್ಲ. ಕ್ಯಾಶಿಯರ್, ಮ್ಯಾನೇಜರ್, ವೇಟರ್‌ನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆರೋಪವನ್ನು ನಿರಾಕರಿಸಿದ್ದರು. ಇದನ್ನೂ ಓದಿ: ವಿಶ್ವದಲ್ಲಿ ಓಮ್ರಿಕಾನ್ ರಣಕೇಕೆ – ಬ್ರಿಟನ್‍ನಲ್ಲಿ ಓಮಿಕ್ರಾನ್‍ಗೆ ಮೊದಲ ಬಲಿ
There are shocking cases from Mumbai, the capital of Maharashtra. Now, recently, 17 girls have been detained by the Social Service Branch of Mumbai Police in Deepa bar in Andheri last Sunday night. @DGPMaharashtra pic.twitter.com/wIpE2PMYFU
— ????????.ℝ???????? ???????????????? (@Rajmajiofficial) December 13, 2021
ಆದರೆ ಮೇಕಪ್ ರೂಮ್‌ನಲ್ಲಿ ಒಂದು ದೊಡ್ಡ ಕನ್ನಡಿ ನೇತು ಹಾಕಿರುವುದನ್ನು ಪೊಲೀಸರು ಗಮನಿಸಿದರು. ಅದನ್ನು ತೆರವು ಮಾಡಲು ಯತ್ನಿಸಿದರು. ಆದರೆ ಅದು ಸಾಧ್ಯವಾಗದಿದ್ದಾಗ ಅದನ್ನು ಒಡೆದು ಹಾಕಿದರು. ಅಲ್ಲಿ ಪೊಲೀಸರಿಗೆ ರಹಸ್ಯ ರೂಂ ಒಂದು ಕಾಣಿಸಿದೆ. ಅದರಲ್ಲಿ ಮಹಿಳೆಯರು ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಆಮ್ಲೆಟ್ ಸೀದು ಹೋಗಿದೆ ಎಂದಿದ್ದಕೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ
Deepa Bar Andheri pic.twitter.com/dJeGm5YDbI
— ????????.ℝ???????? ???????????????? (@Rajmajiofficial) December 13, 2021
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ರೂಮ್‌ನಲ್ಲಿದ್ದ 17 ಮಹಿಳೆಯರನ್ನು ರಕ್ಷಿಸಲಾಗಿದೆ. ಈ ರೂಂ ಎಸಿಯಿಂದ ಕೂಡಿದ್ದು, ಸಂಪೂರ್ಣ ಸೌಲಭ್ಯವನ್ನು ಹೊಂದಿದೆ. ಪೊಲೀಸರು ಈ ಕುರಿತಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.