– ಅವರಿಲ್ಲದೇ ಮಕ್ಕಳು ಬಂದ್ರಾ? ಗಂಡನೂ ಜೊತೆಯೇ ಇರಬೇಕು ಎಂದ ಮಹಿಳೆ
ಚಿಕ್ಕಮಗಳೂರು: ಸರ್ಕಾರದ ಫ್ರೀ ಬಸ್ (Free Bus Travel) ಪ್ರಯಾಣದ ಶಕ್ತಿ ಯೋಜನೆ ಸರಿ ಇಲ್ಲ. ಗಂಡ ಜೊತೆಗೆ ಬಾರದೇ ನಮ್ಮ ಭದ್ರತೆ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ (Shakti Scheme) ವಿರುದ್ಧ ಮಹಿಳೆಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.
ಮತ ಹಾಕುವಾಗ ಮಹಿಳೆಯರು ಮಾತ್ರ ಹಾಕಿ ಎಂದಿದ್ರಾ? ನಾವ್ ಇಲ್ದೆ ನೀವ್ ಬಂದ್ರಾ ಅಂತಿದ್ದಾರೆ ಯಜಮಾನರು. ಅವರಿಲ್ಲದೆ ಮಕ್ಕಳು ಬಂದ್ರಾ? ಗಂಡ ಬೇಕು. ಗಂಡನ ಜೊತೆಯೇ ಇರಬೇಕು. ಈ ಕಾನೂನು ಬೇಡ ಎಂದು ಮಹಿಳೆಯರಿಗೆ ಬಸ್ ಉಚಿತ ಪ್ರಯಾಣಕ್ಕೆ ಪಿರಿಯಾಪಟ್ಟಣದ ಮಮತಾ ಎಂಬವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅವರಿಗೆ ಸಚಿವರಾಗಿ ಕೆಲಸ ಮಾಡೋದಕ್ಕಿಂತ ಬೇರೆಯದ್ದರ ಬಗ್ಗೆಯೇ ಆಸಕ್ತಿ ಜಾಸ್ತಿ: ಮಹದೇವಪ್ಪಗೆ ಸುರೇಶ್ ಟಾಂಗ್
ದುಡ್ಡು ಕೊಟ್ಟು ಬಂದರೂ ಈ ರೀತಿ ನೂಕು ನುಗ್ಗಲು ಇರುವಂತೆ ಮಾಡಬೇಡಿ. ಹೊರನಾಡಿನಿಂದ ಮಂಗಳೂರಿಗೆ ಹೋಗುವವರನ್ನು ಮಾತ್ರ ಬಸ್ಸಿಗೆ ಹತ್ತಿಸಿದ್ದಾರೆ. ಮಧ್ಯ ಇಳಿಯುವವರನ್ನ ಖಾಸಗಿ ಬಸ್ಸಿನಲ್ಲಿ ಹತ್ತಿಸುತ್ತಿಲ್ಲ. ದೊಡ್ಡವರು, ಚಿಕ್ಕವರು ಬರುತ್ತಾರೆ, ಕೈಮುಗಿದು ಕೇಳಿಕೊಳ್ಳುತ್ತೇವೆ. ಎದ್ದು ಬಿದ್ದು ಬರುವಂತೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಸರ್ಕಾರದ ಯೋಜನೆ ಕಾಲು ಭಾಗ ಖುಷಿ ನೀಡಿದೆ. ಗಂಡ-ಮಕ್ಕಳು, ಅತ್ತೆ-ಮಾವ ಎಲ್ಲ ಮನೆಯಲ್ಲೇ ಇದ್ದಾರೆ. ಹೆಂಡ್ತಿ ಮಾತ್ರ ಎಲ್ಲಾ ಕಡೆ ಓಡಾಡಿಕೊಂಡು ಇರೋದಕ್ಕೆ ಆಗುವುದಿಲ್ಲ. ಒಂದು ಬಸ್ಸಿಗೆ ಇಷ್ಟೇ ಮಹಿಳೆಯರು ಎಂಬ ಕಾನೂನು ಬಲವಾಗಬೇಕು. ಈ ನೂಕು ನುಗ್ಗಲಿನ ಬಸ್ಸಿನಲ್ಲಿ ಮಹಿಳೆಯರು ಹತ್ತುವುದು ಅಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಕ್ಕಿ ವಿತರಣೆ ರಾಜ್ಯ ಸರ್ಕಾರದ ಜವಾಬ್ದಾರಿ, ಎಲ್ಲಿಯಾದ್ರೂ ಖರೀದಿ ಮಾಡಿ ಕೊಡಲಿ: ಯಡಿಯೂರಪ್ಪ
ಗಂಡನನ್ನ ಮನೆಯಲ್ಲಿ ಬಿಟ್ಟು ಬಂದಿದ್ದೇವೆ. ನಮಗೆ ಸೂಕ್ತ ಭದ್ರತೆ ಇಲ್ಲ. ವಿದ್ಯೆ ಹಾಗೂ ಆಸ್ಪತ್ರೆ ಕಡೆಯೂ ಸ್ವಲ್ಪ ಗಮನಹರಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.