ಬಳ್ಳಾರಿ: ಹೈವೇಯಲ್ಲಿ ನಿಂತ ಸಾರಿಗೆ ಬಸ್ಸನ್ನು (Bus) ಮಹಿಳೆಯರೇ ತಳ್ಳಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.
ಮಂಗಳವಾರ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ (Congress Sadhana Samavesha) ಬಸ್ಸಿನಲ್ಲಿ ಮಹಿಳೆಯರು ಬಂದಿದ್ದರು. ಇದನ್ನೂ ಓದಿ: ಮನೆಯ ಒಳಗಡೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಲಷ್ಕರ್ ಉಗ್ರನಿಗೆ ಗುಂಡೇಟು!
ಕಾರ್ಯಕ್ರಮ ಮುಗಿದ ಬಳಿಕ ತಮ್ಮೂರಿಗೆ ತೆರಳುವ ಬಸ್ಸು ಹತ್ತಿದ್ದಾರೆ. ಆದರೆ ಚಾಲಕ ಸಾಕಷ್ಟು ಬಾರಿ ಪ್ರಯತ್ನ ಪಟ್ಟರೂ ಬಸ್ಸು ಚಾಲನೆ ಆಗಿಲ್ಲ. ಕೊನೆಗೆ ಬಸ್ಸಿನಿಂದ ಇಳಿದ ಮಹಿಳೆಯರು ಹಿಂದಿನಿಂದ ತಳ್ಳಿದ್ದಾರೆ. ಮಹಿಳೆಯರು ಬಸ್ಸು ತಳ್ಳುತ್ತಿರುವ ವಿಡಿಯೋ ಫುಲ್ ವೈರಲ್ ವೈರಲ್ ಆಗಿದೆ. ಇದನ್ನೂ ಓದಿ: ಮೆಟ್ರೋದಲ್ಲಿ ಪ್ರಯಾಣಿಸುವ ಯುವತಿಯರ ಆಕ್ಷೇಪಾರ್ಹ ವಿಡಿಯೋ ಅಪ್ಲೋಡ್ – ಪೇಜ್ ವಿರುದ್ಧ ಎಫ್‌ಐಆರ್