ಮೈಸೂರು: ನಗರದ ನಂಜನಗೂಡಿನಲ್ಲಿ ಮಹಿಳಾ ಪಿಎಸ್‍ಐ ಒಬ್ಬರು ದರ್ಪ ಮೆರೆದ ಪ್ರಸಂಗವೊಂದು ನಡೆದಿದೆ.
ನಂಜನಗೂಡು ಪಟ್ಟಣದ ಹುಲ್ಲಹಳ್ಳಿ ವೃತ್ತದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‍ನಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಸದ್ಯ ಈ ವಿಡಿಯೋ ಇದೀಗ ವೈರಲ್ ಆಗಿದೆ. ಬಲವಂತವಾಗಿ ಬಂಕ್ ಮುಚ್ಚುವಂತೆ ಬೆದರಿಸಿರುವ ಮಹಿಳಾ ಪಿಎಸ್‍ಐ ವರ್ತನೆಗೆ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ಲಾಕ್‍ಡೌನ್ ಹಿನ್ನೆಲೆಯಲ್ಲಿ ನಂಜನಗೂಡು ಗ್ರಾಮಾಂತರ ಠಾಣೆ ಸಬ್‌ಇನ್ಸ್‌ಪೆಕ್ಟರ್ ಯಾಸ್ಮಿನ್ ತಾಜ್ ಅವರು ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಅವಾಜ್ ಹಾಕಿದ್ದಾರೆ. ನನ್ನ ಜೀಪ್‍ಗೆ ಡೀಸೆಲ್ ಹಾಕದಿದ್ರೆ ಪೆಟ್ರೋಲ್ ಬಂಕ್‍ಗೆ ಬೆಂಕಿ ಹಚ್ಚಿತ್ತೀನಿ ಎಂದು ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಅವಾಜ್ ಹಾಕಿದ್ದಾರೆ.
Advertisement
ಪೆಟ್ರೋಲ್ ಬಂಕ್‍ನಲ್ಲಿ ಸಿಬ್ಬಂದಿ ಪೊಲೀಸ್ ಜೀಪ್‍ಗೆ ಡೀಸೆಲ್ ಹಾಕಲು ನಿರಾಕರಿಸಿದ್ದಾರೆ. ಇಷ್ಟಕ್ಕೆ ಸಿಟ್ಟಾದ ಮಹಿಳಾ ಪಿಎಸ್‍ಐ ಯಾಸ್ಮಿನ್ ತಾಜ್, ಅವಾಚ್ಯ ಶಬ್ದಗಳಿಂದ ಸಿಬ್ಬಂದಿಗೆ ನಿಂದಿಸಿದ್ದಾರೆ. ನನ್ನ ಜೀಪ್‍ಗೆ ಡೀಸೆಲ್ ಹಾಕದಿದ್ದ ಮೇಲೆ ಈ ಬಂಕ್ ಯಾಕೆ ಬೇಕು. ಈಗಲೇ ಪೆಟ್ರೋಲ್ ಬಂಕ್ ಅನ್ನ ಬೆಂಕಿ ಹಚ್ಚಿ ಸುಟ್ಟುಬಿಡುತ್ತೀನಿ ಅಂತ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಹಿಗ್ಗಾಮುಗ್ಗ ಬೈದಿದ್ದಾರೆ.
Advertisement
ಇಷ್ಟು ಮಾತ್ರವಲ್ಲದೆ ಬಂಕ್‍ನಲ್ಲಿದ್ದ ಆಟೋ ಚಾಲಕನಿಗೂ ಲಾಠಿಯಿಂದ ಹಲ್ಲೆ ಮಾಡಿದ್ದಾರೆ. ಇಲ್ಲಿ ಪೆಟ್ರೋಲ್ ಡೀಸೆಲ್ ಸಿಗೋಲ್ಲ ಹೋಗ್ತಾ ಇರು ಎನ್ನುತ್ತಲೆ ಲಾಠಿ ಬೀಸಿದ್ದಾರೆ.