– ಬೆಂಗಳೂರು ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬ
ಬೆಂಗಳೂರು: ಇಂದಿನಿಂದ (ಫೆ.23) 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (WPL 2024) ಆರಂಭವಾಗುತ್ತಿದೆ. 2ನೇ ಆವೃತ್ತಿಯಲ್ಲೂ ಒಟ್ಟು 5 ತಂಡಗಳು ಕಣಕ್ಕಿಳಿಯುತ್ತಿವೆ.
ಕಳೆದ ಆವೃತ್ತಿಯಲ್ಲಿ ಫೈನಲ್‌ನಲ್ಲಿ ಸೆಣಸಿದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ನಡುವೆ ಮೊದಲ ಪಂದ್ಯ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಉದ್ಘಾಟನಾ ಪಂದ್ಯ ನಡೆಯಲಿದ್ದು, ರಾತ್ರಿ 8ಕ್ಕೆ ಆರಂಭವಾಗಲಿದೆ. ಇದನ್ನೂ ಓದಿ: ಮಾ.22 ರಿಂದ IPL ಶುರು; ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ-ಆರ್‌ಸಿಬಿ ನಡುವೆ ಹೈವೋಲ್ಟೇಜ್ ಕದನ!
Advertisement
Advertisement
ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಕಣಕ್ಕಿಳಿಯುತ್ತಿವೆ. ಫೆಬ್ರವರಿ 23 ರಿಂದ ಮಾರ್ಚ್ 13ರ ವರೆಗೆ ಒಟ್ಟು 20 ಲೀಗ್ ಸುತ್ತಿನ ಪಂದ್ಯಗಳು ನಡೆಯಲಿವೆ. ಮಾರ್ಚ್ 15 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಮಾರ್ಚ್ 17 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.
Advertisement
Advertisement
ಈ ಬಾರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣಗಳಲ್ಲಿ (Arun Jaitley Stadium) ಆಯೋಜಿಸಲಾಗಿದೆ. ಲೀಗ್ ಸುತ್ತಿನ ಬಹುತೇಕ ಪಂದ್ಯಗಳು ಬೆಂಗಳೂರಿನ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದನ್ನೂ ಓದಿ: 2024ರ ಐಪಿಎಲ್ ಟೂರ್ನಿಯಿಂದಲೇ ಶಮಿ ಔಟ್ – ಗುಜರಾತ್ ಟೈಟಾನ್ಸ್‌ಗೆ ಭಾರೀ ಆಘಾತ
WPL ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಟಾಪ್-5 ಲಿಸ್ಟ್:
- ಮೆಗ್ ಲ್ಯಾನಿಂಗ್ – 9 ಪಂದ್ಯ, 99 ಇನ್ನಿಂಗ್ಸ್ – 345 ರನ್
- ನಟಾಲಿ ಸ್ಕಿವರ್-ಬ್ರಂಟ್ – 10 ಪಂದ್ಯ, 10 ಇನ್ನಿಂಗ್ಸ್ – 332 ರನ್
- ತಾಲಿಯಾ ಮೆಕ್‌ಗ್ರಾತ್ – 9 ಪಂದ್ಯ, 8 ಇನ್ನಿಂಗ್ಸ್ – 302 ರನ್
- ಹರ್ಮನ್‌ಪ್ರೀತ್ ಕೌರ್ – 10 ಪಂದ್ಯ, 19 ಇನ್ನಿಂಗ್ಸ್ – 281 ರನ್
- ಹೇಲಿ ಮ್ಯಾಥ್ಯೂಸ್ – 10 ಪಂದ್ಯ, 10 ಇನ್ನಿಂಗ್ಸ್, 271 ರನ್
ಇನ್ನಿಂಗ್ಸ್‌ವೊಂದರಲ್ಲಿ ಗರಿಷ್ಠ ರನ್ ಸಿಡಿಸಿದ ಟಾಪ್-5 ಲಿಸ್ಟ್
- ಸೋಫಿ ಡಿವೈನ್ – 99 ರನ್ (ಗುಜರಾತ್ ಜೈಂಟ್ಸ್ ವಿರುದ್ಧ)
- ಅಲಿಸ್ಸಾ ಹೀಲಿ – 96 ರನ್ (ಆರ್‌ಸಿಬಿ ವಿರುದ್ಧ)
- ತಾಲಿಯಾ ಮೆಕ್‌ಗ್ರಾತ್ – 90 ರನ್ (ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ)
- ಶಫಾಲಿ ವರ್ಮಾ – 84 ರನ್ (ಆರ್‌ಸಿಬಿ ವಿರುದ್ಧ)
- ಹೇಲಿ ಮ್ಯಾಥ್ಯೂಸ್ – 77 ರನ್ (ಆರ್‌ಸಿಬಿ ವಿರುದ್ಧ)
ಚೊಚ್ಚಲ ಆವೃತ್ತಿಯಲ್ಲಿ ಮುಂಬೈ ಚಾಂಪಿಯನ್:
2023ರಲ್ಲಿ ಆರಂಭಗೊಂಡ ಮಹಿಳಾ ಪ್ರೀಮಿಯರ್ ಲೀಗ್ ಚೊಚ್ಚಲ ಆವೃತ್ತಿಯಲ್ಲಿ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದನ್ನೂ ಓದಿ: 10,000 ರನ್ ಪೂರೈಸಿ ದಾಖಲೆ; ಬಾಬಾರ್ ಸ್ಫೋಟಕ ಆಟಕ್ಕೆ ಗೇಲ್, ವಿರಾಟ್ ಕೊಹ್ಲಿ ದಾಖಲೆ ಉಡೀಸ್