ಭೋಪಾಲ್: ಮಹಿಳಾ ಪೊಲೀಸ್ ಅಧಿಕಾರಿ ಸ್ನಾನ ಮಾಡುತ್ತಿರುವ ವೀಡಿಯೋ ರೆಕಾರ್ಡ್ ಮಾಡಿ ನಂತರ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ ಆರೋಪಿ ವಿರುದ್ಧ ಭೋಪಾಲ್ ಪೊಲೀಸರು ದೂರು ದಾಖಲಿಸಿದ್ದಾರೆ.
Advertisement
ಆರೋಪಿಯನ್ನು ಮಹಿಳಾ ಪೊಲೀಸ್ ಅಧಿಕಾರಿಯ ಚಾಲಕನಾಗಿ ನೇಮಿಸಲಾಗಿತ್ತು. ಆದರೆ ಸೆಪ್ಟೆಂಬರ್ 22ರಂದು ಸ್ನಾನ ಮಾಡುವ ವೇಳೆ ತನ್ನ ವೀಡಿಯೋವನ್ನು ಯಾರೋ ಚಿತ್ರೀಕರಿಸಲು ಪ್ರಯತ್ನಿಸಿರುವ ವಿಚಾರವನ್ನು ಮಹಿಳಾ ಪೊಲೀಸ್ ಅರಿತುಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಮನೆ ಕುಸಿತ- ಆಶ್ಚರ್ಯಕರ ರೀತಿಯಲ್ಲಿ ಜನ ಪಾರು
Advertisement
Advertisement
ಈ ಕುರಿತಂತೆ ಅಪರಾಧ ವಿಭಾಗದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಸ್ನಾನ ಮಾಡುವ ವೇಳೆ ಸ್ನಾನ ಗೃಹದ ಬಾಗಿಲ ತಳದಲ್ಲಿ ಮೊಬೈಲ್ ಫೋನ್‍ನನ್ನು ಇರಿಸಲಾಗಿರುವುದನ್ನು ಗಮನಿಸಿದ್ದಾರೆ. ನಂತರ ಹೊರಗೆ ಹೋಗುತ್ತಿದ್ದಂತೆಯೇ ಆಕೆಯ ಚಾಲಕ ಸ್ಥಳದಿಂದ ಓಡಿ ಹೋಗುತ್ತಿರುವುದನ್ನು ನೋಡಿದ್ದಾರೆ. ಬಳಿಕ ಸೆಪ್ಟೆಂಬರ್ 26ರಂದು ಚಾಲಕ ಆಕೆಯ ಮನೆಗೆ ಹೋಗಿ 5 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಅಲ್ಲದೇ ಹಣ ನೀಡದೇ ಇದ್ದಲ್ಲಿ ಆ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿರುವುದಾಗಿ ತಿಳಿಸಿದ್ದಾರೆ.
Advertisement
ಈ ವಿಚಾರವಾಗಿ ಮಹಿಳಾ ಪೊಲೀಸ್ ಅಧಿಕಾರಿ ಭೋಪಾಲ್ ಪೊಲೀಸ್ ಪ್ರಧಾನ ಕಚೇರಿಯನ್ನು ಸಂಪರ್ಕಿಸಿ ದೂರು ನೀಡಿದ ಬಳಿಕ ನಗರದ ಅಪರಾಧ ವಿಭಾಗವು ತನಿಖೆ ನಡೆಸಲು ಆರಂಭಿಸಿತು. ಸದ್ಯ ಭಾರತೀಯ ದಂಡ ಸಂಹಿತೆಗೆ ಸಂಬಂಧಿಸಿದ ಕಾಯ್ದೆಯ ಕೆಲವು ಸೆಕ್ಷನ್‍ಗಳ ಅಡಿಯಲ್ಲಿ ಬ್ಲಾಕ್ ಮೇಲ್ ಮತ್ತು ಸುಲಿಗೆ ಪ್ರಕರಣವನ್ನು ಆರೋಪಿ ವಿರುದ್ಧ ದಾಖಲಿಸಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲೂ ಮತಾಂತರ- ಸೈಟ್ ಆಸೆ ತೋರಿಸಿ ಕೃತ್ಯ, ಸ್ಥಳೀಯರಿಂದ ಆಕ್ರೋಶ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶನಿವಾರ ಭೋಪಾಲ್‍ನ ಹಬಿಬ್‍ಗಂಜ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದು, ಭೋಪಾಲ್‍ನ ಚಾರ್ ಇಮ್ಲಿಯಲ್ಲಿರುವ ಅಧಿಕಾರಿ ನಿವಾಸದಲ್ಲಿ ಆತನನ್ನು ಪೊಲೀಸ್ ವರಿಷ್ಠಾಧಿಕಾರಿ ರಾಮ್ ಜಿ ಶ್ರೀವಾಸ್ತವ ಮತ್ತು ಅಪರಾಧ ವಿಭಾಗದ ಅಧಿಕಾರಿಗಳು ಥಳಿಸಿದ್ದಾರೆ ಎಂದು ಆರೋಪಿಸಿದ್ದಾನೆ.