ಬೆಂಗಳೂರು: ಸ್ಯಾಟಲೈಟ್ ಫೋನ್ ಹೊಂದಿದ್ದ ಅಮೆರಿಕಾ ಮೂಲದ ಮಹಿಳಾ ಪೈಲಟನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.
ಅಮೆರಿಕಾ ಮೂಲದ ಬೆಂಟರ್ ಚಾರಿಟಿ ನೊಯಲ್ ವಶಕ್ಕೆ ಪಡೆದ ಮಹಿಳಾ ಪೈಲಟ್. ಅಂದಹಾಗೆ ವಿಶೇಷ ವಿಮಾನದ ಚಾಲಕಿಯಾಗಿರುವ ಬೆಂಡರ್ ಚಾರಿಟಿ ನೊಯಲ್ ಬಳಿ ತಪಾಸಣೆ ವೇಳೆ ಸ್ಯಾಟಲೈಟ್ ಫೋನ್ ಪತ್ತೆಯಾಗಿದೆ. ಹೀಗಾಗಿ ಅನುಮಾನಗೊಂಡ ಸಿಐಎಸ್‍ಎಫ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಕೆಯನ್ನ ಕೆಐಎಎಲ್ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಕೆಐಎಎಲ್‍ನ ಸಿಪಿಐ ಪ್ರಶಾಂತ್, ಮಹಿಳಾ ವಿಮಾನ ಚಾಲಕಿಯನ್ನ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
Advertisement
Advertisement
ಭಾರತ ದೇಶದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ನಿಷಿದ್ಧ ಹಾಗೂ ಕಾನೂನುಬಾಹಿರ, ಕೇವಲ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸಂಸ್ಥೆಯ ಸ್ಯಾಟಲೈಟ್ ಫೋನ್ ಮಾತ್ರ ಸರ್ಕಾರಿ ಸದುದ್ದೇಶದ ಕಾರ್ಯಗಳಿಗೆ ಬಳಕೆ ಮಾಡಬಹುದಾಗಿದೆ ಎನ್ನಲಾಗಿದೆ. ಆದರೆ ಈ ಮಹಿಳಾ ಪೈಲಟ್ ಇರುಡಿಯಮ್ ಅನ್ನೋ ಸ್ಯಾಟಲೈಟ್ ಫೋನ್ ಹೊಂದಿದ್ದಾಳೆ. ಹೀಗಾಗಿ ಅಮೆರಿಕಾದಲ್ಲಿ ಈ ಸ್ಯಾಟಲೈಟ್ ಫೋನ್ ಬಳಕೆಗೆ ಅವಕಾಶ ಇದೆಯಾ ಅಥವಾ ಕಾನೂನುಬಾಹಿರವಾಗಿ ಈಕೆ ಸ್ಯಾಟಲೈಟ್ ಫೋನ್ ಹೊಂದಿದ್ದಾಳಾ ಎಂಬುದನ್ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.