ಬೆಂಗಳೂರು: ಪಾದರಾಯನಪುರದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೊನಾ ಹಾಟ್‍ಸ್ಟಾಟ್ ಆಗುತ್ತಿದಿಯಾ ಎಂಬ ಆತಂಕ ಉಂಟಾಗಿದೆ. ಈ ಮದ್ಯೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಪಾದರಾಯನಪುರದಲ್ಲಿ ಮಹಿಳೆಯರು ಕಾಂಪೌಂಡ್ ಹಾರಿ ಹೋಗುತ್ತಿದ್ದಾರೆ.
ಪಾದರಾಯನಪುರದಲ್ಲಿ ಸೀಲ್‍ಡೌನ್, ಲಾಕ್‍ಡೌನ್ ಇದ್ದರೂ ಮಹಿಳೆಯರು ಕೇರ್ ಮಾಡದೇ ಕಾಂಪೌಂಡ್ ಹಾರಿ ಬೇರೆ ಕಡೆ ಹೋಗುತ್ತಿದ್ದಾರೆ. ಪಾದರಾಯನಪುರದವನ್ನು ಸೀಲ್‍ಡೌನ್ ಮಾಡಲಾಗಿದ್ದು, ಏರಿಯಾದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಆದರೆ ಇಂದು ಮಹಿಳೆಯರು ಪೊಲೀಸರ ಮಾತಿಗೂ ಬಲೆ ಕೊಡದೆ ಬ್ಯಾರಿಕೇಡ್ ದಾಟಲು ಯತ್ನಿಸಿದ್ದಾರೆ. ಆಗ ಪೊಲೀಸರು ಮಹಿಳೆಯರಿಗೆ ಹೋಗಲು ಅವಕಾಶ ಮಾಡಿಕೊಟ್ಟಿಲ್ಲ.
Advertisement
Advertisement
ಕೊನೆಗೆ ಮಹಿಳೆಯರು ಏಳು ಅಡಿ ಕಾಂಪೌಂಡ್ ಹಾರಿ ನಂತರ ರೈಲ್ವೇ ಹಳಿ ದಾಟಿ ವಿಜಯನಗರದ ಕಡೆ ಹೋಗುತ್ತಿದ್ದಾರೆ. ಪೊಲೀಸರು ಮಹಿಳೆಯರಿಗೆ ಹಾರದಂತೆ ಎಚ್ಚರಿಸಿದ್ದಾರೆ. ಆದರೆ ಮಹಿಳೆಯರನ್ನು ಪೊಲೀಸರು ಮುಟ್ಟುವುದಿಲ್ಲ ಎಂಬುದನ್ನೇ ದುರಪಯೋಗ ಮಾಡಿಕೊಂಡ ಮಹಿಳೆಯರು ಕಾಂಪೌಂಡ್ ಹಾರಿ ಹೋಗಿದ್ದಾರೆ. ಸದ್ಯಕ್ಕೆ ಪೊಲೀಸರು ಪಾದರಾಯನಪುರದಲ್ಲಿ ಮಹಿಳಾ ಪೊಲೀಸ್ ನಿಯೋಜನೆ ಮುಂದಾಗಿದ್ದಾರೆ.
Advertisement
Advertisement
ಪಾದರಾಯನಪುರಕ್ಕೆ ಆರೋಗ್ಯ ಇಲಾಖೆಯ ಅಸ್ತ್ರ:
ಕೊರೊನಾ ಹಬ್ ಪಾದರಾಯನಪುರದಲ್ಲಿ ಇಂದು ಆರೋಗ್ಯ ಇಲಾಖೆ ಮೆಗಾ ಪ್ಲಾನ್ ಶುರು ಮಾಡುವ ಸಾಧ್ಯತೆಯಿದೆ. ಕೊರೊನಾ ರಣಕೇಕೆಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಪಾದರಾಯನಪುರದಲ್ಲೇ ಲ್ಯಾಬ್ ಸ್ಥಾಪಿಸಿ, ಮನೆ-ಮನೆ ಟೆಸ್ಟ್ ಮಾಡುವ ತಯಾರಿ ಮಾಡಿದೆ. ಆರೋಗ್ಯ ಸಮಸ್ಯೆ ಇದ್ದವರನ್ನ ಗುರುತಿಸಿ ಕೂಡಲೇ ಪರೀಕ್ಷೆ ಮಾಡಲಾಗುತ್ತದೆ. ಅಲ್ಲದೇ ಕೊರೊನಾ ಹಬ್ ಆಗಿರುವ 11 ನೇ ಕ್ರಾಸ್ ಮೇಲೆ ತೀವ್ರ ನಿಗಾವಹಿಸಲಾಗಿದೆ. ಹೀಗಾಗಿ 11ನೇ ಕ್ರಾಸಿನಲ್ಲಿ ಒಬ್ಬರನ್ನೂ ಬಿಡದೇ ರ‍್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ. ಒಟ್ಟು 45 ಸಾವಿರ ಜನರಿದ್ದು, ಎಲ್ಲರಿಗೂ ಕೊರೊನಾ ಪರೀಕ್ಷೆ ಮಾಡಲಾಗುತ್ತದೆ.