ಬೆಂಗಳೂರು: ದಿಢೀರ್ ಎಂಟ್ರಿ ಕೊಟ್ಟ ಮಹಿಳಾಧಿಕಾರಿಯೊಬ್ಬರು ತನಗೆ ಅನ್ಯಾಯವಾಗಿದೆ ಎಂದು ಗದ್ದಲ ಎಬ್ಬಿಸಿ ವಿಧಾನಸೌಧದಲ್ಲಿರುವ ಬಿಜೆಪಿ ಶಾಸಕ ಬಸವರಾಜ್ ದಡೆಸಗೂರು ಕೊಠಡಿಯಲ್ಲೇ ನೇಣು ಬಿಗಿದುಕೊಳ್ಳಲು ಮುಂದಾದ ಘಟನೆ ನಡೆದಿದೆ.
ಭೇಟಿ ನೀಡಿದ ಮಹಿಳೆ ಗದ್ದಲ ಎಬ್ಬಿಸಿ ನಿನ್ನ ಕೊಠಡಿಯಲ್ಲೆ ನೇಣು ಹಾಕಿಕೊಳ್ಳುತ್ತೇನೆ ಇಲ್ಲೇ ಸಾಯುತ್ತೇನೆ ಎಂದು ಹೇಳಿ ಕೊಠಡಿ ಬಾಗಿಲು ಹಾಕಿಕೊಂಡಿದ್ದಾಳೆ. ಕೂಡಲೆ ಶಾಸಕರು ಜೋರಾಗಿ ಕಿರುಚಿಕೊಂಡಿದ್ದರಿಂದ ಸ್ಥಳಕ್ಕೆ ಧಾವಿಸಿದ ಭದ್ರತಾ ಪೊಲೀಸರು ಬಾಗಿಲು ಮುರಿದು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಶಾಸಕರ ಕೊಠಡಿಗೆ ಬೀಗ ಹಾಕಿಕೊಂಡು ತೆರಳಿದ ನಂತರ ಮಹಿಳೆಯನ್ನೂ ಅಲ್ಲಿಂದ ಕಳುಹಿಸಲಾಗಿದೆ. ಸದ್ಯ ದಡೆಸಗೂರು ಶಾಸಕರ ಭವನದ ಕೊಠಡಿಗೆ ಬಿಗಿ ಭದ್ರತೆ ನೀಡಲಾಗಿದೆ. ಇದನ್ನೂ ಓದಿ: ಪಿಎಸ್‍ಐ ಹಗರಣದಲ್ಲಿ ಕೇವಲ 18-20 ಹುಡುಗರನ್ನ ಅರೆಸ್ಟ್ ಮಾಡಿದ್ರೆ ಸಾಲೋದಿಲ್ಲ: ಡಿಕೆಶಿ
ಏನಿದು ಘಟನೆ?
ಶಾಸಕರ ಕೊಠಡಿಗೆ ದಿಢೀರ್ ಭೇಟಿ ನೀಡಿದ ಮಹಿಳಾಧಿಕಾರಿಯೊಬ್ಬರು ಅವರೊಂದಿಗೆ ಮಾತಿನ ಚಕಮಕಿಗೆ ಇಳಿದಿದ್ದಾರೆ. ಶಾಸಕ ದಡೆಸಗೂರು ಅನ್ಯಾಯ ಮಾಡಿದ್ದಾರೆ ತನಗೆ ನ್ಯಾಯ ಕೊಡಿಸುವಂತೆ ಗದ್ದಲ ಎಬ್ಬಿಸಿದ್ದಾರೆ. ನಂತರ ಶಾಸಕರ ಕೊಠಡಿಯ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಳ್ಳಲು ಮುಂದಾಗಿದ್ದಾರೆ. ಶಾಸಕರು ಜೋರಾಗಿ ಕಿರುಚಿದ್ದರಿಂದ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ.