ಬೆಂಗಳೂರು: ನಗರದಲ್ಲಿ ಐನಾತಿ ಮಹಿಳೆಯೊಬ್ಬಳು ಬಡ ಅಮಾಯಕ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು, ಅವರಿಗೆ ದುಪ್ಪಟ್ಟು ಹಣದಾಸೆ ತೋರಿಸಿ ಮೋಸ ಮಾಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಪುಷ್ಪಾ ಮಹಿಳೆಯರಿಗೆ ಕೋಟ್ಯಂತರ ರೂ. ವಂಚನೆ ಮಾಡಿದ ವಂಚಕಿ. ಈಕೆ ಎಲ್ಲರ ಮುಂದೆ ಸಭ್ಯಸ್ಥೆಯಂತೆ ನಡೆದುಕೊಂಡು ಬಡ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದಳು. ಬಳಿಕ ಚೀಟಿ ಹೆಸರಿನಲ್ಲಿ ಹಣ ಲೂಟಿ ಮಾಡಿಕೊಂಡು, ಈಗ ಪರಾರಿಯಾಗಿದ್ದಳು.
Advertisement
Advertisement
ಪುಷ್ಪಾ ಕಳೆದ 15 ವರ್ಷದಿಂದ ಹೊಸಕೆರೆಹಳ್ಳಿಯಲ್ಲಿ ಸಣ್ಣ ಅಮೌಂಟ್ ಚೀಟಿ ನಡೆಸಿಕೊಂಡಿದ್ದಳು. ನಂತರ ಸಮಯಕ್ಕೆ ಸರಿಯಾಗಿ ಚೀಟಿ ಹಣ ಮರುಪಾವತಿಸಿ ಮಹಿಳೆಯರ ವಿಶ್ವಾಸ ಗಳಿಸಿಕೊಂಡಿದ್ದಳು. ಯಾವಾಗ ಮಹಿಳೆಯರಿಗೆ ತನ್ನ ಮೇಲೆ ನಂಬಿಕೆ ಬಂತು ಅಂತ ಗೊತ್ತಾಯಿತೋ ಆಗ ಪುಷ್ಪ ತನ್ನ ಕುತಂತ್ರ ಬುದ್ಧಿ ಶುರುಮಾಡಿಕೊಂಡಿದ್ದಾಳೆ.
Advertisement
ಮೊದಲಿಗೆ ಪುಷ್ಪ ನೂರಾರು ಜನರ ಹತ್ತಿರ ಕೋಟ್ಯಂತರ ರೂಪಾಯಿ ಚೀಟಿ ಹಾಕಿಸಿಕೊಂಡಿದ್ದಾಳೆ. ಬಳಿಕ ನಾವು ಹಣ ಕೇಳುವುದಕ್ಕೆ ಹೋದರೆ ನನ್ನ ಬಳಿ ಹಣ ಇಲ್ಲ. ಏನ್ ಮಾಡಿಕೊಳ್ಳುತ್ತೀರಾ ಮಾಡಿಕೊಳ್ಳಿ ಅಂತ ಧಮ್ಕಿ ಹಾಕಿದ್ದಾಳೆ. ಅಷ್ಟೇ ಅಲ್ಲದೇ ರಾತ್ರೋರಾತ್ರಿ ಮನೆ ಮಾರಿಕೊಂಡು ಕುಟುಂಬ ಸಹಿತ ಪರಾರಿಯಾಗಿದ್ದಾಳೆ ಎಂದು ವಂಚನೆಗೊಳಗಾದವರು ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.
Advertisement
ಪುಷ್ಪಾ ಕೈಕೊಟ್ಳು ಅಂತ ತಿಳಿಯುತ್ತಿದ್ದಂತೆ ವಂಚನೆಗೊಳಗಾದವರು ಗಿರಿನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೀಗ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪುಷ್ಪಾಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews