ವಾಷಿಂಗ್ಟನ್: ಬೆಳಗ್ಗೆ 4 ಗಂಟೆಗೆ ಸೆಕ್ಸ್ಗೆ ಕರೆದು ಮಲಗಿದ್ದಕ್ಕೆ ಕೋಪಗೊಂಡ ಮಹಿಳೆ ವ್ಯಕ್ತಿಯ ಮನೆಗೆ ಬೆಂಕಿ ಹಚ್ಚಿದ ಘಟನೆ ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನಡೆದಿದೆ.
ತೈಜಾ ರಸ್ಸೆಲ್(29) ಮನೆಗೆ ಬೆಂಕಿ ಹಚ್ಚಿದ ಮಹಿಳೆ. ತೈಜಾ ವ್ಯಕ್ತಿಯ ಮನೆಗೆ ಬೆಂಕಿ ಹಚ್ಚಲು ಗ್ಯಾಸ್ ಸ್ಟೇಷನ್ನಿಂದ ಲೈಟರ್ ಫ್ಲೂಯಿಡ್ ತಂದಿದ್ದಳು. ಬಳಿಕ ಆತನ ಮನೆ ಮುಂದೆ ನಿಂತು ಬೆಂಕಿ ಹಚ್ಚಿದ್ದಾಳೆ.
Advertisement
ರಸ್ಸೆಲ್ ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಅದು ಮನೆಯಿಡೀ ಆವರಿಸುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾಳೆ. ಈ ವೇಳೆ ಮನೆಯೊಳಗೆ ಮಲಗಿದ್ದ ವ್ಯಕ್ತಿ 4.30ಕ್ಕೆ ಎಚ್ಚರಗೊಂಡಾಗ ಮನೆಯಿಂದ ಹೊರ ಹೋಗುವ ಬಾಗಿಲುಗಳೆಲ್ಲವೂ ಬೆಂಕಿಯಿಂದ ಹೊತ್ತಿಕೊಂಡು ಧಗಧಗಿಸುತ್ತಿತ್ತು. ಹೀಗಾಗಿ ವ್ಯಕ್ತಿ ತನ್ನ ರೂಮಿನ ಕಿಟಕಿ ಮೂಲಕ ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಬೆಂಕಿಯಲ್ಲಿ ಸಿಲುಕಿದ್ದ ಕಾರಣ ವ್ಯಕ್ತಿಯ ದೇಹದ ಮೇಲೆ ಮಸಿ ಹಾಗೂ ಬೂದಿ ಇತ್ತು. ಮನೆಯಿಂದ ಹೊರ ಬರುತ್ತಿದ್ದಂತೆ ವ್ಯಕ್ತಿ ತನ್ನ ನಿವಾಸದಿಂದ ಎರಡು ಮೈಲಿ ದೂರವಿದ್ದ ವುಡ್ಬರಿ ಪೊಲೀಸ್ ಠಾಣೆಗೆ ಓಡಿ ಹೋಗಿದ್ದಾನೆ. ಪೊಲೀಸ್ ಠಾಣೆಗೆ ಹೋಗುತ್ತಿದ್ದಂತೆ ನಡೆದ ಘಟನೆಯನ್ನು ಪೊಲೀಸರಿಗೆ ತಿಳಿಸಿ ಮತ್ತೆ ತನ್ನ ಮನೆಯತ್ತ ಓಡಿ ಹೋಗಿದ್ದಾನೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.
Advertisement
ವ್ಯಕ್ತಿ ಪೊಲೀಸರಿಗೆ ಈ ವಿಷಯ ತಿಳಿಸುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಹೋಗಿ ಬೆಂಕಿಯನ್ನು ನಂದಿಸಿದ್ದಾರೆ. ಬಳಿಕ ಪೊಲೀಸರು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ, ನಾನು ರಸ್ಸೆಲ್ನನ್ನು 4 ಗಂಟೆಗೆ ತನ್ನ ಮನೆಗೆ ಆಹ್ವಾನಿಸಿದೆ. ಅಲ್ಲದೆ ನಾನು ಆಕೆಯ ಜೊತೆ ಆಗಾಗ ದೈಹಿಕ ಸಂಪರ್ಕ ಬೆಳೆಸುತ್ತಿರುತ್ತೇನೆ ಎಂದು ವ್ಯಕ್ತಿ ಹೇಳಿದ್ದಾನೆ.
ಪೊಲೀಸರು ವ್ಯಕ್ತಿಯ ಮನೆಯ ಹೊರಗಿದ್ದ ಸಿಸಿಟಿವಿಯನ್ನು ಪರಿಶೀಲಿಸಿದಾಗ ಮಹಿಳೆ ಮನೆಗೆ ಬೆಂಕಿ ಹಚ್ಚುತ್ತಿರುವ ದೃಶ್ಯ ಸೆರೆಯಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ರಸ್ಸೆಲ್ ವಿರುದ್ಧ ಕೊಲೆ ಯತ್ನ, ಜೀವಕ್ಕೆ ಅಪಾಯ, ಕ್ರಿಮಿನಲ್ ಕಿಡಿಗೇಡಿತನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.