ಪಾಟ್ನಾ: ಇತ್ತೀಚೆಗೆ ನಡೆದ ಬಿಹಾರ್ ಪಂಚಾಯತ್ ಚುನಾವಣೆಯಲ್ಲಿ ಕೆಲ ಮಹಿಳೆಯರು, ಮತ ಚಲಾಯಿಸಿದ ಕೆಲ ಹೊತ್ತಲ್ಲೇ ತಮ್ಮ ಬ್ಯಾಂಕ್ ಖಾತೆಯಲ್ಲಿ ಇಟ್ಟಿದ್ದ ಸಾವಿರಾರು ರೂಪಾಯಿ ಹಣ ಕಳೆದುಕೊಂಡು ಅಘಾತಕಾರಿ ಘಟನೆ ನಡೆದಿದೆ.
Advertisement
ಪುರ್ನಿಯಾ ಜಿಲ್ಲೆಯ ಚೋಪ್ರಾ ಪಂಚಾಯತ್‍ನ ರಿಹುವಾ ಗ್ರಾಮದಲ್ಲಿ ನ.29ರಂದು ಪಂಚಾಯತ್ ಚುನಾವಣೆ ಮತ ದಾನ ನಡೆದಿತ್ತು. ಈ ವೇಳೆ ಚುನಾವಣಾಧಿಕಾರಿಗಳು ತಾವು ಮತ ಚಲಾವಣೆಗೆ ಬಂದಾಗ ಬಯೋಮೆಟ್ರಿಕ್‍ನಲ್ಲಿ ತಮ್ಮ ಫಿಂಗರ್ ಪ್ರಿಂಟ್ ಪಡೆದಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಕೆನರಾ ಬ್ಯಾಂಕ್‍ನಲ್ಲಿದ್ದು ತಮ್ಮ ಹಣವೆಲ್ಲಾ ಮಾಯವಾಗಿದೆ ಎಂದು 30ಕ್ಕೂ ಹೆಚ್ಚು ಮಹಿಳೆಯರು ದೂರಿದ್ದಾರೆ. ಇದನ್ನೂ ಓದಿ: ಲಸಿಕೆ ಪ್ರಮಾಣ ಪತ್ರ ಎಡವಟ್ಟು – ವ್ಯಾಕ್ಸಿನ್ ಪಡೆಯಲು ಬಂದಾತನಿಗೆ ಶಾಕ್
Advertisement
ಎಲೆಕ್ಟ್ರಾನಿಕ್ ಸಾಧನಗಳನ್ನು ಜನರ ಬ್ಯಾಂಕ್‍ನಲ್ಲಿರುವ ಹಣ ಲಪಟಾಯಿಸುವುದು ಅಪರಾಧವಾಗಿದೆ. ಈ ಬಗ್ಗೆ ತಿಳಿದ ಬಳಿಕ ಈ ಕುರಿತು ವಸ್ತುನಿಷ್ಠ ತನಿಖೆ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಗೈಗೊಳ್ಳಬೇಕು ಎಂದು ಪುರ್ನಿಯಾ ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದೇವೆ ಎಂದು ಚೋಪ್ರಾ ಪಂಚಾಯತ್ ಮುಖ್ಯ ಸ್ಥಜಾವೇದ್ ಇಕ್ಬಾಲ್ ಹೇಳಿದ್ದಾರೆ. ಇದನ್ನೂ ಓದಿ: ಜಿಂಬಾಬ್ವೆಯಿಂದ ಗುಜರಾತ್‌ಗೆ ವಾಪಸ್ಸಾಗಿದ್ದ ವ್ಯಕ್ತಿಯಲ್ಲಿ ಓಮಿಕ್ರಾನ್ ಪತ್ತೆ- ಭಾರತದಲ್ಲಿ 3ಕ್ಕೇರಿದ ಸಂಖ್ಯೆ