ನವದೆಹಲಿ: ಭಾರತೀಯ ಸೇನೆಗೆ ಮಹಿಳಾ ಯೋಧರ ಸೇರ್ಪಡೆ ಕಾಲ ಸನ್ನಿಹಿತವಾಗಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎನ್ನುವಂತೆ ಬೆಂಗಳೂರಿನಲ್ಲಿ ಮಹಿಳಾ ಯೋಧರಿಗೆ ತರಬೇತಿ ಆರಂಭವಾಗಿದೆ.
ಬೆಂಗಳೂರಿನಲ್ಲಿರುವ ದಿ ಕಾಪ್ಸ್ ಆಫ್ ಮಿಲಿಟರಿ ಪೊಲೀಸ್ ಸೆಂಟರ್ ಆಂಡ್ ಸ್ಕೂಲ್ ನಲ್ಲಿ ತರಬೇತಿ ಆರಂಭವಾಗಿದ್ದು, ಮೊದಲ ಬ್ಯಾಚ್ ನಲ್ಲಿ 99 ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಮಾಹಿತಿಯ ಪ್ರಕಾರ ಜನವರಿ 6 ರಿಂದ ಈ ತರಬೇತಿ ಆರಂಭವಾಗಿದ್ದು 61 ವಾರಗಳ ಕಠಿಣ ತರಬೇತಿ ಕಾಪ್ಸ್ ಆಫ್ ಮಿಲಿಟರಿ ಫೋರ್ಸ್ ನೀಡಲಿದೆ. ಹೀಗೆ ತರಬೇತಿ ಪಡೆಯುತ್ತಿರುವ ಮಹಿಳಾ ಯೋಧರು 2021 ಕ್ಕೆ ಸೇನೆಗೆ ಸೇರುವ ನಿರೀಕ್ಷೆಗಳಿವೆ.
Advertisement
Advertisement
ಪುರುಷರ ಮಾದರಿಯಲ್ಲೇ ಮಹಿಳೆಯರಿಗೂ ತರಬೇತಿ ನೀಡುತ್ತಿದ್ದು ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮರ್ಥ್ಯ ಕಲಿಸಿಕೊಡಲಾಗುತ್ತಿದೆ. ಮುಂದಿನ 17 ವರ್ಷದಲ್ಲಿ 1700 ಮಹಿಳಾ ಯೋಧರನ್ನು ಸೇನೆ ಕಳುಹಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement
ಸದ್ಯ ಭಾರತೀಯ ಸೇನಯಲ್ಲಿ ಮಹಿಳೆಯರು ವೈದ್ಯಕೀಯ, ಎಂಜಿನಿಯರಿಂಗ್, ಕಾನೂನು, ಸಂಕೇತ ಎನ್‍ಕೋಡಿಂಗ್ ಮತ್ತು ಡಿಕೋಡಿಂಗ್, ಶೈಕ್ಷಣಿಕ ವಿಭಾಗಗಳು ಸೇರಿ ಮತ್ತಿತರ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಸೇನೆ ಮಹಿಳೆಯರಿಗೆ ತರಬೇತಿ ನೀಡುವ ಮೂಲಕ ಮತ್ತೊಂದು ದಾಖಲೆ ಭಾರತೀಯ ಸೇನೆ ನಿರ್ಮಿಸಲಿದೆ.