ರಾಯ್ಪುರ: ಸಾಮಾನ್ಯವಾಗಿ ನವಜಾತ ಶಿಶುಗಳು 2.5 ಕೆಜಿಯಿಂದ 3.5 ಕೆಜಿ ತೂಕವನ್ನು ಹೊಂದಿರುತ್ತವೆ. ಆದ್ರೆ 27 ವರ್ಷದ ಮಹಿಳೆಯೊಬ್ಬರು ಬರೋಬ್ಬರಿ 5.3 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಮಗು ಮತ್ತು ತಾಯಿ ಆರೋಗ್ಯದಿಂದ ಇದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಛತ್ತೀಸ್ ಗಢ ರಾಜ್ಯದ ಬಿಸಲಾಪುರ ಜಿಲ್ಲಾಸ್ಪತ್ರೆಯಲ್ಲಿ 27 ವರ್ಷದ ಹೇಮಲತಾ ಎಂಬವರು ತಮ್ಮ ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಗುವನ್ನು ಛತ್ತೀಸಗಢ ರಾಜ್ಯದ ಅತಿ ತೂಕದ ಮಗು ಎಂದು ಹೇಳಲಾಗುತ್ತಿದೆ. ಹೇಮಲತಾ ರೈತ ಮಹಿಳೆಯಾಗಿದ್ದು, ಚಾಕರಖೇಡಾ ಎಂಬ ಗ್ರಾಮದ ನಿವಾಸಿಯಾಗಿದ್ದಾರೆ. ಮೊದಲ ಮೂರು ಹೆರಿಗೆ ನಾರ್ಮಲ್ ಆಗಿದ್ದರಿಂದ ನಾಲ್ಕನೇ ಡೆಲಿವರಿ ಸಹ ನಾರ್ಮಲ್ ಆಗಿದೆ.
Advertisement
Advertisement
Advertisement
ಸಾಮಾನ್ಯವಾಗಿ ನವಜಾತ ಶಿಶು 2.5 ರಿಂದ 3.5 ಕೆಜಿ ತೂಕವನ್ನು ಹೊಂದಿರುತ್ತದೆ. ನನ್ನ ವೃತ್ತಿ ಜೀವನದಲ್ಲಿ 5.3 ಕೆಜಿ ತೂಕದ ಮಗುವನ್ನು ಇದೇ ಮೊದಲ ಬಾರಿ ನೋಡಿದ್ದೇನೆ. ಅತಿ ಹೆಚ್ಚು ತೂಕ ಹೊಂದಿರುವ ಮಕ್ಕಳು ಡಯಾಬಿಟಿಸ್ ಪೀಡಿತರಾಗಿರುತ್ತವೆ. ಆದ್ರೆ ಈ ಮಗು ಆರೋಗ್ಯವಾಗಿದ್ದು, ಯಾವುದೇ ಕಾಯಿಲೆಗಳಿಗೆ ತುತ್ತಾಗಿಲ್ಲ ಎಂದು ಜಿಲ್ಲಾಸ್ಪತ್ರೆಯ ಹಿರಿಯ ವೈದ್ಯ ಡಾ. ನೀಲೇಶ್ ಠಾಕೂರ ಹೇಳ್ತಾರೆ.
Advertisement
ಮೊದಲ ಮೂರು ಹರಿಗೆಗಳು ನಾರ್ಮಲ್ ಆಗಿದ್ದರಿಂದ ನಾಲ್ಕನೇ ಹೆರಿಗೆಯನ್ನು ನಾರ್ಮಲ್ ಮಾಡಿಸಿಕೊಳ್ಳಲು ವೈದ್ಯರು ತೀರ್ಮಾನಿಸಿದ್ರು. ಹೆರಿಗೆ ನೋವು ಕಾಣಿಸಿಕೊಂಡ ಒಂದು ಗಂಟೆಯಲ್ಲಿ ಮಗುವಿಗೆ ಜನ್ಮ ನೀಡಿದೆ. ಗರ್ಭಿಣಿಯಾಗಿದ್ದಾಗಲೂ ಗದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಗರ್ಭಿಣಿಯಾದ ಮೊದಲ ಮಾಸದಲ್ಲಿ ದಾಳಿಂಬೆ ಹಣ್ಣು ಹೆಚ್ಚು ತಿಂದಿದ್ದೆ ಎಂದು ಹೇಮಲತಾ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv