ಚಿಕ್ಕೋಡಿ: ತೈಲ ಬೆಲೆ ಏರಿಕೆ ಖಂಡಿಸಿ ಇಂದು ದೇಶಾದ್ಯಂತ ಕರೆ ನೀಡಿರುವ ಬಂದ್ ಸಾರ್ವಜನಿಕ ಜನಜೀವನದ ಮೇಲೆ ಎಫೆಕ್ಟ್ ಬೀರಿದ್ದು, ಬಂದ್ ಕಾರಣ ವಾಹನ ಸೌಲಭ್ಯವಿಲ್ಲದೇ ಸಂಕಷ್ಟ ಅನುಭವಿಸಿದ್ದ ಗರ್ಭಿಣಿಯೊಬ್ಬರು ರೈಲಿನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಯಲ್ಲವಾ ಪಾತ್ರೋಟ ಎಂಬವರು ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ್ದು, ಕೊಲ್ಲಾಪುರ – ಹೈದರಾಬಾದ್ ಎಕ್ಸ್‍ಪ್ರೆಸ್ ರೈಲಿನ ಪ್ರಯಾಣದ ವೇಳೆ ಜಿಲ್ಲೆಯ ರಾಯಭಾಗ ರೇಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಇದನ್ನುಓದಿ: ಗರ್ಭಿಣಿಯನ್ನ ಹೊತ್ತು ಆಸ್ಪತ್ರೆಗೆ ಸಾಗಿಸ್ತಿದ್ದಾಗ ಅರಣ್ಯದಲ್ಲೇ ಹೆರಿಗೆ: ತಾಯಿ, ಮಗು ಆರೋಗ್ಯ
Advertisement
ನಡೆದಿದ್ದು ಏನು?
ಭಾರತ್ ಬಂದ್ ನಿಂದ ವಾಹನ ಸಂಪರ್ಕವಿಲ್ಲದೇ ಸಂಕಷ್ಟ ಎದುರಿಸಿದ ಗರ್ಭಿಣಿ ಯಲ್ಲಮ್ಮರನ್ನ ರೈಲಿನ ಮೂಲಕ ಮಹಾರಾಷ್ಟ್ರದ ಮಿರಜನಿಂದ ಆಸ್ಪತ್ರೆಗೆ ದಾಖಲಿಸಲು ಕರೆತರಲಾಗುತ್ತಿತ್ತು. ಈ ವೇಳೆ ಅವರಿಗೆ ಕುಡಚಿ ರೈಲ್ವೆ ನಿಲ್ದಾಣದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ವಿಷಯದ ತಿಳಿದ ರೈಲ್ವೇ ಸಿಬ್ಬಂದಿ ತಕ್ಷಣ 108 ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ನಿಯಮಗಳ ಪ್ರಕಾರ ರೈಲು ಆ ವೇಳೆಗೆ ಅಲ್ಲಿಂದ ತೆರಳಬೇಕಾಗಿತ್ತು. ಅದರೂ ಮಾನವೀಯತೆ ಮೆರೆದ ರೈಲ್ವೇ ಸಿಬ್ಬಂದಿ ಅರ್ಧ ಗಂಟೆ ಕಾಲ ನಿಲ್ದಾಣದಲ್ಲಿ ರೈಲು ನಿಲ್ಲಿಸಿದ್ದಾರೆ. ಆ ವೇಳೆಗೆ ಸ್ಥಳಕ್ಕೆ ಬಂದ 108ರ ಸಿಬ್ಬಂದಿ ಮಹಿಳೆಯ ಸ್ಥಿತಿ ಕಂಡು ರೈಲಿನಲ್ಲೇ ಹೆರಿಗೆ ಮಾಡಿಸಿದ್ದಾರೆ.
Advertisement
ಹೆರಿಗೆ ಬಳಿಕ ತಾಯಿ ಹಾಗೂ ಮಗುವನ್ನು 108 ವಾಹನದ ಮೂಲಕ ರಾಯಭಾಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಸದ್ಯ ಗರ್ಭಿಣಿಯ ನೋವು ಕಂಡು ಮಾನವೀಯತೆ ಮೆರೆದ ರೈಲ್ವೇ ಸಿಬ್ಬಂದಿ ಹಾಗೂ 108 ಸೇವೆಯ ಸಿಬ್ಬಂದಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನುಓದಿ: ಸರ್ಕಾರಿ ಬಸ್ಸಿನಲ್ಲೇ ಹೆರಿಗೆ – ಮಾನವೀಯತೆ ಮೆರೆದ ಚಾಲಕ, ನಿರ್ವಾಹಕ
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv