ಲಕ್ನೋ: ಬೆಡ್ ಇಲ್ಲದೆ ಮಹಿಳೆ ಆಸ್ಪತ್ರೆಯ ಕಾರಿಡಾರ್ ನಲ್ಲೇ ಮಗುವಿಗೆ ಜನ್ಮ ನೋಡಿದ್ದು, ಈ ವೇಳೆ ಜನರು ನೋಡುತ್ತಾ ನಿಂತ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ.
ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಫರುಕಾಬಾದ್‍ನ ಲೋಯಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅಲ್ಲಿ ಹಾಸಿಗೆ ಇಲ್ಲದ ಕಾರಣ ಮಹಿಳೆ ಆಸ್ಪತ್ರೆಯ ನೆಲದ ಮೇಲೆ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾಗ ಹಾರಿಕೆಯ ಉತ್ತರವನ್ನು ಕೊಟ್ಟಿದ್ದಾರೆ.
Advertisement
Advertisement
ರೂನೇ ಗ್ರಾಮದ ನಿವಾಸಿ ಅಂಜೋ ಅವರು ಭಾನುವಾರ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಆಗ ಅವರನ್ನು ಲೋಯಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದರು. ಈ ವೇಳೆ ಎಮರ್ಜೆನ್ಸಿ ವಾರ್ಡಿನಲ್ಲಿದ್ದ ಸಿಬ್ಬಂದಿ ಬೆಡ್ ಇಲ್ಲ. ಆಸ್ಪತ್ರೆಯ ಕಾರಿಡಾರ್ ನಲ್ಲಿ ತಿರುಗಾಡಲು ಹೇಳಿದ್ದಾರೆ. ಅಂಜೋ ಕಾರಿಡಾರ್ ನಲ್ಲಿ ತಿರುಗುತ್ತಿದ್ದಾಗ ಹೆರಿಗೆ ನೋವು ಜಾಸ್ತಿಯಾಗಿ ನೆಲದ ಮೇಲೆ ಬಿದ್ದರು. ಬಳಿಕ ಅಲ್ಲಿಯೇ ಮಗುವಿಗೆ ಜನ್ಮ ನೀಡಿದ್ದರು.
Advertisement
ಆಸ್ಪತ್ರೆ ಸಿಬ್ಬಂದಿ ಹಾಸಿಗೆ ನೀಡಿಲ್ಲ. ಹೀಗಾಗಿ ನನ್ನ ಪತ್ನಿ ನೆಲದ ಮೇಲೆ ಜನ್ಮ ನೀಡಿದ್ದಾಳೆ ಎಂದು ಅಂಜೋ ಅವರ ಪತಿ ಸುಜೀತ್ ಆರೋಪಿಸಿದ್ದಾರೆ. ಈ ಘಟನೆಯನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ಮೋನಿಕಾ ರಾಣಿ ಘಟನೆ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ. ಅಲ್ಲದೆ ಮೋನಿಕಾ ಅವರು ಸಿಎಂಒ ಹಾಗೂ ಎಸಿಎಂಒ ತಂಡವನ್ನು ರಚಿಸಿ ಮೂರು ದಿನಗಳಲ್ಲಿ ವರದಿ ನೀಡಬೇಕು ಎಂದು ಆದೇಶಿಸಿದ್ದಾರೆ.