– ಪುರುಷರನ್ನು ಅವಲಂಬಿಸಲ್ಲ
-ಸಮಯ ಉಳಿಸಲು ಈ ಉಪಾಯ
ಹೈದರಾಬಾದ್: ತೆಲಂಗಾಣದಲ್ಲಿರುವ ಸಣ್ಣ ಹಳ್ಳಿ ಲಕ್ಷ್ಮೀಪುರ ಇದೀಗ ಮಹಿಳಾ ಸಬಲೀಕರಣದಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿದ್ದು, ಮಹಿಳೆಯರು ತಾವೇ ಸ್ಕೂಟಿಯಲ್ಲಿ ತೋಟಕ್ಕೆ ಹೋಗಿ ಕೆಲಸ ಮಾಡುತ್ತಿದ್ದಾರೆ.
ಲಕ್ಷ್ಮೀಪುರ ಗ್ರಾಮ ಜಗ್ತಿಯಾಲ್‍ದಿಂದ ಸುಮಾರು ಏಳು ಕಿ.ಮೀ. ದೂರದಲ್ಲಿದೆ. ಈ ಗ್ರಾಮದ ರೈತ ಮಹಿಳೆಯರು ವಿವಿಧ ಕೆಲಸಗಳಿಗೆ ಹೋಗಲು ಪುರುಷರ ಸಹಾಯಕ್ಕಾಗಿ ಕಾಯುವುದಿಲ್ಲ. ಬದಲಾಗಿ ಪ್ರತಿದಿನ ತಮ್ಮದೇ ಆದ ದ್ವಿಚಕ್ರ ವಾಹನವನ್ನು ತಾವೇ ಓಡಿಸಿಕೊಂಡು ತೋಟಗಳಿಗೆ ಹೋಗಿ ಕೆಲಸ ಮಾಡಿ ಬರುತ್ತಾರೆ. ಅಷ್ಟೇ ಅಲ್ಲದೆ ಇತರೆ ಮಹಿಳಾ ಕಾರ್ಮಿಕರನ್ನು ತಮ್ಮ ವಾಹನದ ಮೇಲೆ ಕರೆದುಕೊಂಡು ಹೋಗುತ್ತಾರೆ.
Advertisement
Advertisement
ಲಕ್ಮೀಪುರದಲ್ಲಿ ಒಟ್ಟು 5 ಸಾವಿರ ಜನಸಂಖ್ಯೆ ಇದೆ. ಅದರಲ್ಲಿ 1200 ಕುಟುಂಬಗಳು ಮಾತ್ರ ಕೃಷಿಯನ್ನು ಅವಲಂಭಿಸಿವೆ. ಇಲ್ಲಿ ರೈತ ಮಹಿಳೆಯರು ಪುರುಷರ ಜೊತೆ ಕೃಷಿ ಕೆಲಸವನ್ನು ಮಾಡುತ್ತಾರೆ. ಜೊತೆಗೆ ತೋಟಕ್ಕೆ ಹೋಗಲು ಪುರಷರನ್ನು ಕಾಯದೆ ತಮ್ಮ ಸ್ಕೂಟಿಗಳ ಮೂಲಕ ಹೊಲಕ್ಕೆ ಹೋಗುತ್ತಾರೆ. ಅದೇ ಸ್ಕೂಟಿಯಲ್ಲಿ ತರಕಾರಿಯನ್ನು ಜಗ್ತಿಯಾಲ್ ಮಾರುಕಟ್ಟೆಗೆ ಸ್ವತಃ ಅವರೇ ಸಾಗಿಸುತ್ತಾರೆ.
Advertisement
ನಾವು ಮಹಿಳೆಯಾದರೂ ಪುರುಷರಿಗಿಂತ ಹೆಚ್ಚು ಕೆಲಸ ಮಾಡುತ್ತೇವೆ. ನಮ್ಮ ತೋಟಕ್ಕೂ ಮನೆಗೂ ಸುಮಾರು ಮೂರು ಕಿ.ಮೀ. ದೂರವಿದೆ. ಹೀಗಾಗಿ ನಾನು ತೋಟಕ್ಕೆ ಹೋಗುವ ಸಮಯವನ್ನು ಉಳಿಸುವ ಸಲುವಾಗಿ ಸ್ಕೂಟಿಯಲ್ಲಿ ಹೋಗುತ್ತೇವೆ. ಎಲ್ಲ ಕೆಲಸಗಳಿಗೆ ಪುರುಷರನ್ನು ಅವಲಂಭಿಸಿಲ್ಲ ಎಂದು ರೈತ ಮಹಿಳೆ ಎಸ್ ಸರಿತಾ ಹೇಳಿದ್ದಾರೆ.
Advertisement
ಲಕ್ಷ್ಮೀಪುರ ಗ್ರಾಮದಲ್ಲಿ ಸುಮಾರು 70ಕ್ಕೂ ಅಧಿಕ ರೈತ ಮಹಿಳೆಯರು ಸ್ಕೂಟಿಯಲ್ಲೇ ತೋಟಕ್ಕೆ ಹೋಗುತ್ತಾರೆ. ಈ ಗ್ರಾಮದಲ್ಲಿ, ಅರಿಶಿಣ, ಶುಂಠಿ, ಬಾಳೆಹಣ್ಣು, ಕಡಲೆಕಾಯಿ ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. ಇಲ್ಲಿ ಹೆಚ್ಚಾಗಿ ಟೊಮೆಟೋ ಬೆಳೆಯುತ್ತಾರೆ. ಪುರುಷರು ಕೂಡ ತಮ್ಮ ಕೃಷಿ ಕೆಲಸದಲ್ಲಿ ಮಹಿಳೆಯರು ಸಹಾಯ ಮಾಡುತ್ತಿರುವುದರಿಂದ ಸಂತೋಷ ವ್ಯಕ್ತಪಡಿಸಿದ್ದಾರೆ.