ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ ಬಳಿ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಸೂಕ್ತ ಬೆಡ್ ಶೀಟ್, ಚಾಪೆ ಇಲ್ಲದೆ ಟಾರ್ಪಲ್ ಮತ್ತು ಮಣ್ಣಿನ ಮೇಲೆ ಮಲಗಿ ಚಳಿಗೆ ನಡುಗುತ್ತಾ ಕಾರ್ಯಕರ್ತೆಯರು ಪ್ರತಿಭಟಿಸುತ್ತಿದ್ದಾರೆ.
2,500 ರುಪಾಯಿ ಸಂಬಳವನ್ನು ಹೆಚ್ಚಳ ಮಾಡಬೇಕು, ತಮಿಳುನಾಡು ರೀತಿಯಲ್ಲಿ ಕರ್ನಾಟಕ ರಾಜ್ಯದ ಬಿಸಿಯೂಟ ಕಾರ್ಯಕರ್ತರಿಗೂ ಸಂಬಳ ನೀಡಬೇಕು ಹಾಗೂ ಬಿಸಿಯೂಟ ವ್ಯವಸ್ಥೆಯನ್ನು ಖಾಸಗೀಕರಣ ಗೊಳಿಸಬಾರದು ಎಂದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.
Advertisement
Advertisement
ಕಾರ್ಯಕರ್ತೆಯರ ಬೇಡಿಕೆಗಳೇನು..?
* 2,500 ರೂ. ಸಂಬಳವನ್ನು ಹೆಚ್ಚಳ ಮಾಡಬೇಕು
* ಕೆಲಸ ಖಾಯಂಗೊಳಿಸಬೇಕು.
* ಇನ್ಶೂರೆನ್ಸ್, ಇಎಸ್‍ಐ ಪಿಎಫ್ ನೀಡಲು ಒತ್ತಾಯ.
* ತಮಿಳುನಾಡು ರೀತಿಯಲ್ಲಿ ರಾಜ್ಯದ ಬಿಸಿಯೂಟ ಕಾರ್ಯಕರ್ತರಿಗೂ ಸಂಬಳ ನೀಡಬೇಕು.
* ಬಿಸಿಯೂಟ ವ್ಯವಸ್ಥೆಯನ್ನು ಖಾಸಗೀಕರಣ ಗೊಳಿಸಬಾರದು.
* ಇಸ್ಕಾನ್‍ಗೆ ನೀಡಬೇಕೆಂದಿರುವ ಗುತ್ತಿಗೆಯನ್ನು ರದ್ದುಗೊಳಿಸಬೇಕು.
Advertisement
ಕಳೆದ ಬಾರಿ ನಾವು ಪ್ರತಿಭಟನೆ ನಡೆಸಿದಾಗ ಶಿಕ್ಷಣ ಸಚಿವ ತನ್ವೀರ್ ಸೇಠ್ ಸೇರಿ ವಿವಿಧ ನಾಯಕರು ಆಶ್ವಾಸನೆ ನೀಡಿದರೂ ಬೇಡಿಕೆ ಈಡೇರಿಸಿರಲಿಲ್ಲ. ಆಶ್ವಾಸನೆ ಕೊಟ್ಟು ಮೋಸ ಮಾಡಿರುವ ಎಲ್ಲಾ ಸರ್ಕಾರಗಳಿಗೆ ನಮ್ಮ ಧಿಕ್ಕಾರ, ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನಾ ಧರಣಿ ಮುಂದುವರಿಯಲಿದೆ ಎಂದು ಬಿಸಿಯೂಟ ಕಾರ್ಯಕರ್ತೆಯರ ರಾಜ್ಯ ಸಂಘಟನೆಯ ನಾಯಕಿ ರುದ್ರಮ್ಮಬೆಳಲ್ಗೆರೆ ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv