ಭುವನೇಶ್ವರ: ಮಹಿಳೆಯೊಬ್ಬರಯ ಬರೋಬ್ಬರಿ 25 ವರ್ಷ ಸೇವೆ ಮಾಡಿದ ಆಟೋ ಡ್ರೈವರ್ ಸೇವೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ ಬರೋಬ್ಬರಿ 1ಕೋಟಿ ರೂಪಾಯಿ ಮೌಲ್ಯದ ಮೂರು ಅಂತಸ್ತಿನ ಕಟ್ಟಡ ಹಾಗೂ ಚಿನ್ನಾಭರಣವನ್ನು ದಾನ ಮಾಡಿದ್ದಾರೆ.
ಒಡಿಶಾದ ಕಟಕ್‍ನಲ್ಲಿ ಈ ಘಟನೆ ನಡೆದಿದ್ದು, 63 ವರ್ಷದ ಮಿನಾತಿ ಪಟ್ನಾಯಿಕ್ ಕಳೆದ 25 ವರ್ಷಗಳಿಂದ 50 ವರ್ಷದ ಬುದ್ಧಾ ಸಮಾಲ್ ಅನ್ನೋ ರಿಕ್ಷಾ ಚಾಲಕನಿಗೆ 1ಕೋಟಿ ಮೌಲ್ಯದ ಮೂರು ಅಂತಸ್ತಿನ ಕಟ್ಟಡ ಹಾಗೂ ಚಿನ್ನಾಭರಣ ನೀಡಿದ್ದಾರೆ. ಕಳೆದ 25 ವರ್ಷಗಳಿಂದ ಬುದ್ಧಾ ಸಮಾಲ್, ಮಿನಾತಿ ಅವರನ್ನ ತಮ್ಮ ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದರಂತೆ. ಮಿನಾತಿ ಎಲ್ಲಿಗೆ ಹೋಗಬೇಕೆಂದರೂ ಬುದ್ಧಾ ಅವರು ಒಂದು ಮಿನಾತಿಯವರನ್ನು ತಮ್ಮ ರೀಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದರಂತೆ. ಸತತ ಇಷ್ಟ ವರ್ಷಗಳ ಕಾಲ ಅವರಸೇವೆ ಪಡೆದುಕೊಂಡಿದ್ದ ಮಿನಾತಿ, ಯಾರೂ ಊಹಿಸಲಾಗದಂಥ ಸಹಾಯವನ್ನು ಈಗ ಮಾಡಿದ್ದಾರೆ.
Advertisement
Advertisement
ಈ ಕುರಿತಾಗಿ ಮಾತನಾಡಿರುವ ಮಿನಾತಿ ಅವರು, ನಮ್ಮ ಕುಟುಂಬಕ್ಕೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರ ಸಹಾಯಕ್ಕೆ ನಮ್ಮ ಚಿಕ್ಕ ಕಾಣಿಕೆ ಅಷ್ಟೇ ಇದು ಎಂದು ಹೇಳುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಸಣ್ಣ ವಯಸ್ಸಿನ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ: ರಮೇಶ್ ಜಾರಕಿಹೊಳಿ
Advertisement
ನನ್ನ ಪತಿ ಕಳೆದ ವರ್ಷ ತಮ್ಮ 68ನೇ ವಯಸ್ಸಿನಲ್ಲಿ ಕ್ಯಾನ್ಸರ್‍ಗೆ ಬಲಿಯಾಗಿದ್ದರು. ಆಗ ನನ್ನ ಮಗಳು ಜನವರಿಯಲ್ಲಿ ಹಾರ್ಟ್ ಅಟ್ಯಾಕ್‍ನಿಂದ ಸಾವನ್ನಪ್ಪಿದಳು. ಹಾರ್ಟ್ ಪೇಷಂಟ್, ಹೈ ಬಿಪಿ ಕೂಡಾ ನನಗೆ ಇದೆ. ಹೀಗಿದ್ದೂ ಬುದ್ಧಾ ನನ್ನ ತಾಯಿ ಅಂತ ಕರೆಯುತ್ತಾರೆ. ಅವರ ಮಕ್ಕಳು ಅಜ್ಜಿ ಎನ್ನುತ್ತಾರೆ. ಬುದ್ಧಾ ಅವರ ಕುಟುಂಬ ನನ್ನ ಸೇವೆಯನ್ನು ತುಂಬಾ ಮುತುವರ್ಜಿಯಿಂದ ಮಾಡುತ್ತಾರೆ. ಅವರ ಕುಟಂಬ ನನ್ನ ಒತ್ತಾಯದ ಮೆರೆಗೆ ನನ್ನ ಸೇವೆ ಮಾಡಲು ನಮ್ಮ ಮನೆಯಲ್ಲಿಯೇ ಕೆಲ ತಿಂಗಳಿಂದ ಇದ್ದಾರೆ ಎಂದು ಮಿನಾತಿ ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುವ ಬಾಲ್ಯದ ಗೆಳೆಯ
Advertisement
ಪೋಸ್ಟ್ ಗ್ರಾಜ್ಯುಯೇಟ್ ಆಗಿರುವ ಮಿನಾತಿ ಅವರಿಗೆ ಮೂವರು ಸಹೋದರಿಯರು ಹಾಗೂ ಒಬ್ಬ ಸಹೋದರ ಇದ್ದಾರೆ. ಪ್ರಾರಂಭದಲ್ಲಿ ಅವರು ಕೊಂಚ ಬೇಸರ ವ್ಯಕ್ತಪಡಿಸಿದ್ದರೂ, ಮಿನಾತಿ ಅವರ ನಿರ್ಧಾರ ಗಟ್ಟಿಯಾಗಿದ್ದರಿಂದ ಈ ನಿರ್ಧಾರಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲವಂತೆ. ಇದನ್ನೂ ಓದಿ: 6 ದಿನಗಳ ಕಾಲ ನಡೆಯಲಿದೆ ಕತ್ರಿನಾ, ವಿಕ್ಕಿ ಮದುವೆ – ಯಾರಿಗೆಲ್ಲ ಇದೆ ಆಮಂತ್ರಣ?
ಬುದ್ಧಾ ಅವರೂ ಈ ರೀತಿ ಆಸ್ತಿ ದಾನ ಬೇಡ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದರಂತೆ. ಆದರೆ ಅಮ್ಮ(ಮಿನಾತಿ) ಅವರ ನಿರ್ಧಾರ ಗಟ್ಟಿಯಾಗಿತ್ತು. ಅವರ ಒತ್ತಾಯಕ್ಕೆ ಮಣಿದು ಕೆನೆಗೂ ಈ ಆಸ್ತಿ ಮತ್ತು ಆಭರಣ ಸ್ವೀಕರಿಸಿದೆ ಎಂದು ಬಿದ್ಧಾ ಸಮಾಲ್ ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುವ ಬಾಲ್ಯದ ಗೆಳೆಯ