ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಮನೆ ಮನೆ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಕನ್ನಡದಲ್ಲಿ ಮತಯಾಚನೆ ಮಾಡುವಂತೆ ಮತದಾರರು ಬೇಡಿಕೆ ಇಟ್ಟಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಇಂಗ್ಲೀಷ್ ಭಾಷೆಯಲ್ಲಿ ಮತ ಕೇಳುತ್ತಿದ್ದರು. ಈ ವೇಳೆ ಕೆಲ ಮಹಿಳೆಯರು ಕನ್ನಡದಲ್ಲಿ ಮತಯಾಚನೆ ಮಾಡಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ರಕ್ಷಣಾ ಸಚಿವೆ ನನಗೆ ಕನ್ನಡ ಬರಲ್ಲ, ತೇಜಸ್ವಿ ಸೂರ್ಯಗೆ ಪ್ಲೀಸ್ ಸಪೋರ್ಟ್ ಎಂದು ಹೇಳುತ್ತಾ ಇಂಗ್ಲೀಷ್‍ನಲ್ಲೇ ಮತಯಾಚನೆ ಮಾಡಿದರು. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನೀವು ಕನ್ನಡ ಕಲಿಯಬೇಕೆಂದು ಮಹಿಳೆಯರು ಬೇಡಿಕೆ ಇಟ್ಟರು.
Advertisement
Advertisement
ಇದೇ ವೇಳೆ ನಿರ್ಮಲಾ ಸೀತಾರಾಮನ್ ಅವರು ನನ್ನ ಜೊತೆ ಫೋಟೋ ತೆಗೆದುಕೊಳ್ಳಿ ಐದು ವೋಟ್ ಹಾಕಿ ಎಂದು ಕೇಳಿಕೊಂಡರು. ಫೋಟೋ ಕೇಳಿದವರಿಗೆಲ್ಲ ವೋಟ್ ಮಾಡಿದರೆ ಮಾತ್ರ ಫೋಟೋ ಕೊಡ್ತೀನಿ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಮನೆ ಮನೆ ಪ್ರಚಾರದ ವೇಳೆ ಸೆಲ್ಫಿ ಕೇಳಿದವರಿಗೆ ನಿರ್ಮಾಲಾ ಸೀತಾರಾಮನ್ ವೋಟ್ ಮಾಡಿ ಎಂದು ಹೇಳಿ ಸಾರ್ವಜನಿಕರ ಜೊತೆ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ.
Advertisement
ನಿರ್ಮಲಾ ಸೀತಾರಾಮನ್ ಜೆಪಿ ನಗರದ ಮಾರೇನಹಳ್ಳಿಯಲ್ಲಿ ಪ್ರಚಾರ ನಡೆಸುತ್ತಿದ್ದು, ಇವರಿಗೆ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮತ್ತು ಸ್ಥಳೀಯ ಕಾರ್ಪೋರೇಟರ್ ಸಾಥ್ ನೀಡಿದ್ದಾರೆ.