ಕಲಬುರಗಿ: ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾದ ಘಟನೆ ಕಲಬುರಗಿ ನಗರದ ಪ್ರಗತಿ ಕಾಲೋನಿಯಲ್ಲಿ ನಡೆದಿದೆ.
ಜ್ಯೋತಿ(22) ಶವವಾಗಿ ಪತ್ತೆಯಾದ ಮಹಿಳೆ. ಪತಿಯೇ ಪತ್ನಿ ಕೊಲೆ ಮಾಡಿ ಫ್ಯಾನಿಗೆ ನೇಣು ಹಾಕಿದ್ದಾನೆ ಎಂಬ ಆರೋಪ ಕೇಳಿಬರುತ್ತಿದೆ. ಕಲಬುರಗಿ ನಗರದ ಪ್ರಗತಿ ಕಾಲೋನಿಯಲ್ಲಿ ವಾಸವಾಗಿದ್ದ ಜ್ಯೋತಿ ಮತ್ತು ಪತಿ ಲೋಕೇಶ್, ಏಳು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಕೆಕೆಆರ್ಟಿಸಿ ಯ ಸೇಡಂ ಡಿಪೋದಲ್ಲಿ ಚಾಲಕನಾಗಿರೋ ಲೋಕೇಶ್ ಕಲಬುರಗಿ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ನೆಲಮಂಲಗದಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಬ್ರೇಕ್
Advertisement
Advertisement
ಲೋಕೇಶ್ ಮತ್ತು ಅವರ ಕುಟುಂಬವರು ಜ್ಯೋತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಫ್ಯಾನಿಗೆ ಶವವನ್ನು ನೇತು ಹಾಕಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಹಣಕ್ಕಾಗಿ ಲೋಕೇಶ್ ಪ್ರತಿದಿನ ಜ್ಯೋತಿಯನ್ನು ಪೀಡಿಸುತ್ತಿದ್ದ. ಅದು ಅಲ್ಲದೇ ಇವರ ಮದುವೆ ಸಮಯದಲ್ಲಿ 120 ಗ್ರಾಂ ಬಂಗಾರ, ಐದು ಲಕ್ಷ ರೂ. ವರದಕ್ಷಿಣೆಯಾಗಿ ತೆಗೆದುಕೊಂಡಿದ್ದರೆ ಎಂಬ ಆರೋಪ ಕೇಳಿಬರುತ್ತಿದೆ.
Advertisement
ಕಲಬುರಗಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಲೋಕೇಶ್ ಮತ್ತು ಅವರ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದೆ.