ಭುವನೇಶ್ವರ: ಕೊರೊನಾದಿಂದ ಇಡೀ ದೇಶವೇ ಭಯಭೀತವಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಪೊಲೀಸರು ತಮ್ಮ ಕುಟುಂಬದವರಿಂದ ದೂರ ಉಳಿದು ಜನರ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಒಡಿಶಾದ ಇಬ್ಬರು ಮಹಿಳಾ ಪೊಲೀಸರು ಕೊರೊನಾ ವೈರಸ್ ಹೋರಾಟಕ್ಕಾಗಿ ತಮ್ಮ ಮದುವೆಯನ್ನೇ ಮುಂದೂಡಿಕೆ ಮಾಡಿದ್ದಾರೆ.
ಕಾನ್‍ಸ್ಟೇಬಲ್ ಸುನೀತಾ ಅಧಾ ಮತ್ತು ಮಹಿಳಾ ಹೋಮ್ ಗಾರ್ಡ್ ತಿಲೋಟಮ್ಮ ಮೆಹರ್ ತಮ್ಮ ವಿವಾಹ ಸಮಾರಂಭವನ್ನು ಮುಂದೂಡಿದ್ದಾರೆ.
Advertisement
During my Sundergarh visit ,I learnt about Woman Home Guard Tilotama Meher who had her wedding scheduled for 12.4.She has postponed her wedding and leave to do Corona duty .And make world safer for all brides. My compliments to her.#womanpolice pic.twitter.com/F4wmJR2dFx
— DGP, Odisha (@DGPOdisha) April 20, 2020
Advertisement
ಕೊರೊನಾ ವೈರಸ್ ಕರ್ತವ್ಯದಿಂದ ಮಹಿಳಾ ಕಾನ್‍ಸ್ಟೇಬಲ್ ಮತ್ತು ಹೋಮ್ ಗಾರ್ಡ್ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಈ ಮೂಲಕ ಇಬ್ಬರು ಮಹಿಳಾ ಪೊಲೀಸರು ಕರ್ತವ್ಯಕ್ಕಾಗಿ ತಮ್ಮ ವೈಯಕ್ತಿಕ ಸಂತೋಷವನ್ನು ತ್ಯಾಗ ಮಾಡಿದ್ದಾರೆ ಎಂದು ಒಡಿಶಾ ಡಿಜಿಪಿ ಅಭಯ್ ಅವರನ್ನು ಶ್ಲಾಘಿಸಿದ್ದಾರೆ.
Advertisement
ಇಬ್ಬರು ತಮ್ಮ ತಮ್ಮ ಮದುವೆಗಾಗಿ ರಜೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕಳೆದ ವಾರ ಜಿಲ್ಲೆಯಲ್ಲಿ ಕನಿಷ್ಠ ಮೂರು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಹೀಗಾಗಿ ಇಬ್ಬರೂ ತಮ್ಮ ಮದುವೆಯನ್ನು ಮೂಂದೂಡುವ ಮೂಲಕ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
Advertisement
Another Sundergarh bride to postpone her wedding for Corona Duty is Constable Sunita Adha whose wedding was scheduled for 25.4. She would rather do "Duty "to make Birmitrapur safe for all .Our compliments to her.#womanpolice #OdishaFightsCorona#CoronaWarrior pic.twitter.com/M0D9Rco5pa
— DGP, Odisha (@DGPOdisha) April 20, 2020
ಈ ಬಗ್ಗೆ ಟ್ವೀಟ್ ಮಾಡಿರುವ ಡಿಜಿಪಿ ಅಭಯ್, “ಕಾನ್‍ಸ್ಟೇಬಲ್ ಸುನೀತಾ ಅಧಾ ಅವರ ಮದುವೆ ಏಪ್ರಿಲ್ 25 ರಂದು ನಿಶ್ಚಯವಾಗಿತ್ತು. ಆದರೆ ಒಡಿಶಾದ ಬಿರ್ಮಿತ್ರಪುರ ಪ್ರದೇಶದಲ್ಲಿ ಡ್ಯೂಟಿ ಮಾಡುವ ಮೂಲಕ ತಮ್ಮ ಮದುವೆಯನ್ನು ಮುಂದೂಡಿದ್ದಾರೆ” ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿ, “ಮಹಿಳಾ ಹೋಮ್ ಗಾರ್ಡ್ ತಿಲೋಟಮ್ಮ ಮೆಹರ್ ಅವರ ಮದುವೆ ಏಪ್ರಿಲ್ 12 ರಂದು ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್ ಕರ್ತವ್ಯಕ್ಕಾಗಿ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಈ ಮೂಲಕ ಇಬ್ಬರು ಮಹಿಳಾ ಪೊಲೀಸರು ತಮ್ಮ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ” ಎಂದು ಡಿಜಿಪಿ ಅಭಯ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.