ಟೆಹ್ರಾನ್: ಮಹಿಳೆಯರ ಹಿಜಬ್ ವಿಚಾರಕ್ಕೆ ಇಸ್ಲಾಮಿಕ್ ದೇಶಗಳಲ್ಲಿ ಆಗಾಗ ವಿವಾದಗಳು ಆಗುತ್ತಲೇ ಇರುತ್ತವೆ. ಇದೀಗ ಇರಾನ್‌ನಲ್ಲೂ ಹಿಜಬ್ ವಿಚಾರಕ್ಕೆ ಜಾಹೀರಾತುಗಳಲ್ಲಿ ಮಹಿಳೆಯರನ್ನೇ ಬ್ಯಾನ್ ಮಾಡಿರುವುದಾಗಿ ವರದಿಯಾಗಿದೆ.
ಪ್ರಸಿದ್ಧ ಐಸ್‌ಕ್ರೀಂ ಕಂಪನಿಯ ಜಾಹೀರಾತೊಂದರಲ್ಲಿ ಮಹಿಳೆಯೊಬ್ಬಳು ಸಡಿಲವಾದ ಹಿಜಬ್ ಧರಿಸಿದ್ದು ಕಂಡುಬಂದ ಬಳಿಕ ಇರಾನ್‌ನಾದ್ಯಂತ ಭಾರೀ ವಿವಾದ ಉಂಟಾಯಿತು. ಬಳಿಕ ಇರಾನ್‌ನ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶನ ಸಚಿವಾಲಯ ಎಲ್ಲಾ ರೀತಿಯ ಜಾಹೀರಾತುಗಳಲ್ಲಿ ಮಹಿಳೆಯರನ್ನು ಪ್ರದರ್ಶಿಸುವುದನ್ನೇ ನಿಷೇಧಿಸುವಂತೆ ಮಾಡಿದೆ. ಇದನ್ನೂ ಓದಿ: ಟಿವಿ ಶೋದಿಂದ ಪ್ರೇರಣೆ- ತನ್ನನ್ನು ತಾನು ಕಿಡ್ನಾಪ್ ಮಾಡ್ಕೊಂಡ ಬಾಲಕ!
Advertisement
Advertisement
ಈ ಜಾಹೀರಾತು ಇರಾನ್ ಧರ್ಮಗುರುಗಳನ್ನು ಕೆರಳಿಸಿದೆ ಎಂದು ವರದಿಯಾಗಿದೆ. ಅವರು ವಿವಾದಾತ್ಮಕ ಜಾಹೀರಾತನ್ನು ಪ್ರದರ್ಶಿಸಿದ ಸ್ಥಳೀಯ ಐಸ್ ಕ್ರೀಮ್ ತಯಾರಕ ಕಂಪನಿ ವಿರುದ್ಧ ಮೊಕದ್ದಮೆ ಹೂಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಟ್ವಿಟ್ಟರ್ ಪ್ರೊಫೈಲ್ ಫೋಟೋ ಚೇಂಜ್ ಮಾಡಿದ ಸ್ಟಾಲಿನ್
Advertisement
ಈ ಬಗ್ಗೆ ಇರಾನ್‌ನ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶನ ಸಚಿವಾಲಯ ಕಲೆ ಮತ್ತು ಸಿನಿಮಾ ಶಾಲೆಗಳಿಗೆ ಪತ್ರ ಬರೆದಿದ್ದು, ಹಿಜಬ್ ಮತ್ತು ಪರಿಶುದ್ಧತೆಯ ನಿಯಮಗಳನ್ನು ಉಲ್ಲೇಖಿಸಿ, ಮಹಿಳೆಯರಿಗೆ ಇನ್ನು ಮುಂದೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಅವಕಾಶವಿಲ್ಲ ಎಂದು ಹೇಳಿದೆ.