ಬೆಳಗಾವಿ: ಕಳೆದ 24 ದಿನಗಳಿಂದ ಚಿರತೆ ಸೆರೆಯಾಗದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ರಾಜೀನಾಮೆ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್‍ನ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಚಿರತೆ ಅಡಗಿರುವ ಗಾಲ್ಫ್ ಮೈದಾನದ ಗೇಟ್ ಮೇಲೇರಿ ಮೈದಾನದೊಳಗೆ ನುಗ್ಗಲು ಯತ್ನಿಸಿದರು.
ನಗರದ ಗಾಲ್ಫ್ ಮೈದಾನದ ಗೇಟ್ ಏರಿ ಕೈ ಕಾರ್ಯಕರ್ತೆ ಆಯೀಷಾ ಸನದಿ ಅವರು, ಒಂದು ಗಂಟೆಗೂ ಅಧಿಕ ಕಾಲ ಹೈಡ್ರಾಮಾವನ್ನೇ ಸೃಷ್ಟಿಸಿದರು. ಬಳಿಕ ಗೇಟ್‍ನಿಂದ ತಾವೇ ಇಳಿದು ಗೇಟ್ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕಳೆದ 24 ದಿನಗಳಿಂದ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಹೀಗಾಗಿ ಸಾರ್ವಜನಿಕರ ಓಡಾಟಕ್ಕೆ, ಶಾಲಾ ಮಕ್ಕಳು ಶಾಲೆಗೆ ಹೋಗಲು ತೊಂದರೆ ಆಗುತ್ತಿದೆ. ತವರು ಜಿಲ್ಲೆಯವರಾದ ಅರಣ್ಯ ಸಚಿವ ಉಮೇಶ್ ಕತ್ತಿ ಈವರೆಗೂ ಒಮ್ಮೆಯೂ ಸ್ಥಳ ಪರಿಶೀಲನೆ ಮಾಡಿಲ್ಲ. ಹಾಗಾಗಿ ಚಿರತೆ ಹಿಡಿಯುವಲ್ಲಿ ವಿಫಲವಾದ ಅರಣ್ಯ ಇಲಾಖೆ ಸಚಿವ ಉಮೇಶ ಕತ್ತಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
Advertisement
Advertisement
24 ದಿನ ಕಳೆದರೂ ಒಂದು ಚಿರತೆ ಹಿಡಿಯಲು ಆಗ್ತಿಲ್ಲ. ಉಮೇಶ್ ಕತ್ತಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸತೀಶ್ ಜಾರಕಿಹೊಳಿಯನ್ನು ಸೋಲಿಸುತ್ತೇನೆ ಎಂದು ಹೇಳುತ್ತಾರೆ. ಒಂದು ಚಿರತೆ ಹಿಡಿಯಲು ಆಗುತ್ತಿಲ್ಲ ಸತೀಶ್ ಜಾರಕಿಹೊಳಿ ಅವರನ್ನು ಹೇಗೆ ಸೋಲಿಸ್ತೀರಾ? ಎಂದು ಶಾಯರಿ ಹೇಳುವ ಮೂಲಕ ಸಚಿವ ಉಮೇಶ್ ಕತ್ತಿಗೆ ಟಾಂಗ್ ನೀಡಿದರು. ಇದನ್ನೂ ಓದಿ: 23ನೇ ದಿನಕ್ಕೆ ಕಾಲಿಟ್ಟ ಚಿರತೆ ಸೆರೆ ಕಾರ್ಯಾಚರಣೆ- 22 ಶಾಲೆಗಳಿಗೆ ರಜೆ ಮುಂದುವರಿಕೆ
Advertisement
Advertisement
ಸತೀಶ್ ಜಾರಕಿಹೊಳಿ ಸಚಿವರಾಗಿದ್ದರೆ ಇಲ್ಲೇ ಇರುತ್ತಿದ್ದರು. ಇಂದು ನಾವು ಕಾಡಿನೊಳಗೆ ಹೋಗಲು ಬಂದಿದ್ದೇವೆ. ಇಂದು ಬಿಡಲಿಲ್ಲ ಅಂದರೆ ನಾಳೆ ಸಾವಿರಾರು ಹೆಣ್ಣುಮಕ್ಕಳು ಬರುತ್ತಾರೆ. 24 ಗಂಟೆಯಲ್ಲಿ ಚಿರತೆ ಸೆರೆ ಹಿಡಿಯಲು ಆಗದಿದ್ದರೇ ಸಚಿವರು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ: ಚಿರತೆ ಸೆರೆಗೆ ಲೈಂಗಿಕ ಆಕರ್ಷಣೆಯ ತಂತ್ರ – ಬೋನಿಗೆ ಹೆಣ್ಣು ಚಿರತೆಯ ಮೂತ್ರ ಸಿಂಪಡಣೆ