ಚಿಕ್ಕಮಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ಮೂಡಿಗೆರೆ ಮೂಲದ ಮಹಿಳೆಯಿಂದ ಚಿಕ್ಕಮಗಳೂರಿನ ಯುವಕನೊಬ್ಬ ಹನಿಟ್ರ್ಯಾಪ್‍ಗೆ ಒಳಗಾಗಿ 4.85 ಲಕ್ಷ ರೂ. ಸಾವಿರ ಕಳೆದುಕೊಂಡು ಆಕೆಯಿಂದ ಮತ್ತೆ ಬ್ಲ್ಯಾಕ್ ಮೇಲ್‍ಗೆ ಒಳಗಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಗರದ ಕಲ್ಯಾಣ ನಗರದ ನಿವಾಸಿ ಗೌರಿ ಶಂಕರ್ ಗೆಕಳೆದೊಂದು ವರ್ಷದ ಹಿಂದೆ ಫೇಸ್ ಬುಕ್‍ನಲ್ಲಿ ಮೈತ್ರಿಯ ಪರಿಚಯವಾಗಿತ್ತು. ಸ್ನೇಹ ಪ್ರೀತಿಯಾಗಿ ಇಬ್ಬರ ನಡುವೆ ಸಾಕಷ್ಟು ಬಾರಿ ದೈಹಿಕ ಸಂಪರ್ಕ ಕೂಡ ನಡೆದಿತ್ತು.
Advertisement
Advertisement
ಗೌರಿ ಶಂಕರ್ ನಿಂದ ಇದೂವರೆಗೆ ಸುಮಾರು 4 ಲಕ್ಷದ 85 ಸಾವಿರ ಹಣ ಪಡೆದಿರುವ ಮೈತ್ರಿ ಸಿಂಗಲ್ ಸೆಟ್ಲ್ ಮೆಂಟ್‍ಗಾಗಿ ಮತ್ತೆ ಐದು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾಳೆ. ಆಕೆಗೆ ಹಣ ಕೊಟ್ಟು ಸುಸ್ತಾಗಿರುವ ಗೌರಿಶಂಕರ್ ಮಾನಸಿಕ ನೆಮ್ಮದಿಗಾಗಿ ಮಾಧ್ಯಮಗಳು ಹಾಗೂ ಪೊಲೀಸರ ಮೊರೆ ಹೋಗಿದ್ದಾರೆ.
Advertisement
ಮೈತ್ರಿಯ ಮೇಲೆ ಇದೊಂದೆ ಕೇಸಲ್ಲ. ಬೆಂಗಳೂರಿನ ಪೀಣ್ಯದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಮೈತ್ರಿ ಪಕ್ಕದ ಮಳಿಗೆ ವೈದ್ಯ ಡಾ. ಬಿರಾದಾರ್ ಎಂಬುವರಿಗೂ ಇದೇ ರೀತಿ ಬ್ಲಾಕ್ ಮೇಲ್ ಮಾಡ್ತಿದ್ದಾಳೆ. ಅವರಿಂದಲೂ ಆಗಾಗ ಸುಮಾರು 9 ಲಕ್ಷ ಹಣ ಪಡೆದಿದ್ದಾಳೆ. ಕೊನೆಗೆ ಸಿಂಗಲ್ ಸೆಟ್ಲ್ ಮೆಂಟ್‍ಗೆ 15 ಲಕ್ಷ ಕೇಳಿದ್ದಾಳೆ. ಹೀಗೆ ಹಾವೇರಿ, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದ ಜನರಿಗೆ ಇದೇ ರೀತಿ ಮೋಸ ಮಾಡಿರುವ ಎಲ್ಲಾ ದಾಖಲೆಗಳು ಗೌರಿಶಂಕರ್ ಬಳಿ ಇದೆ.
Advertisement
ಈ ಪ್ರಕರಣ ಬೆಳಕಿಗೆ ಬಂದ ನಂತರ ಎಸ್ಟೇಟ್ ಮಾಲೀಕರು ಗೌರಿಶಂಕರ್ ಅವರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಈಕೆಯ ಮೇಲೆ ಬೆಂಗಳೂರಿನ ಪೀಣ್ಯ ಠಾಣೆಯಲ್ಲಿ ಎರಡು ಪ್ರಕರಣ ಕೂಡ ದಾಖಲಾಗಿದೆ. ಮೈತ್ರಿ ಮೇಲೆ ಗಂಡನೇ ಒಂದು ದೂರು ದಾಖಲಿಸಿದ್ದಾರೆ. ಮಂಜುನಾಥ್ ಎಂಬುವರು ಹಣ ನೀಡದ ಕಾರಣ ಆತನ ಮೇಲೂ ರೇಪ್ ಕೇಸ್ ನೀಡಿದ್ದಾಳೆ ಎನ್ನಲಾಗಿದೆ.
ಈಕೆಯಿಂದ ಸಂಸಾರ, ಉದ್ಯೋಗ ಮತ್ತು ಮಾನಸಿಕ ನೆಮ್ಮದಿ ಕಳೆದುಕೊಂಡಿರುವ ಗೌರಿಶಂಕರ್ ಮಾಧ್ಯಮಗಳು ಹಾಗೂ ಪೊಲೀಸರ ಮೊರೆ ಹೋಗಿದ್ದಾನೆ.