ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ಭದ್ರತಾ ಸಿಬ್ಬಂದಿ ನನ್ನನ್ನು ಶರ್ಟ್ ತೆಗೆದು ನಿಲ್ಲಿಸಿ ಅವಮಾನ ಮಾಡಿದ್ದಾರೆ ಎಂದು ಯುವತಿಯೊಬ್ಬಳು ಟ್ವೀಟ್ ಮೂಲಕ ಗಂಭೀರ ಆರೋಪ ಹೊರಿಸಿದ್ದಾಳೆ.
Advertisement
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದಾಗ ಅಲ್ಲಿನ ಭದ್ರತಾ ಸಿಬ್ಬಂದಿ ಭದ್ರತೆ ಪರಿಶೀಲನೆ (Security Check) ಹೆಸರಲ್ಲಿ ನಾನು ಧರಿಸಿದ್ದ ಶರ್ಟ್ ತೆಗೆಸಿದ್ದಾರೆ. ಈ ವೇಳೆ ಅಲ್ಲಿದ್ದ ಸಹಪ್ರಯಾಣಿಕರು ದಿಟ್ಟಿಸಿ ನೋಡಿದ್ದಾರೆ. ಇದರಿಂದ ನನಗೆ ಅವಮಾನ ಆಗಿದೆ ಎಂದು ಯುವತಿ ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದ್ದಾಳೆ. ಇದನ್ನೂ ಓದಿ: 1,337 ಕೋಟಿ ಪೈಕಿ ಶೇ.10 ರಷ್ಟು ದಂಡವನ್ನು ಠೇವಣಿ ಇಡಿ – ಗೂಗಲ್‌ಗೆ NCALT ಆದೇಶ
Advertisement
Advertisement
ಯುವತಿ ಟ್ವೀಟ್ ಮೂಲಕ ಆರೋಪಿಸುತ್ತಿದ್ದಂತೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಈ ವೇಳೆ ಎಚ್ಚೆತ್ತುಕೊಂಡ ಬಿಎಲ್‍ಆರ್ (BLR) ಈ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಘಟನೆ ಬಗ್ಗೆ ನಮಗೆ ಕೂಡ ಬೇಸರ ತಂದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ ಎಂದು ತಿಳಿಸಿದೆ.
Advertisement
Woman passenger's claim of being strip searched by @CISFHQrs at Bengaluru Airport and made to stand with undergarment said to be false. CISF sources @BLRAirport said the woman was wearing a denim jacket with badges and beadings and frisked behind curtains while her lady friend pic.twitter.com/9XxGRsmKOj
— Petlee Peter (@petleepeter) January 4, 2023
ಇತ್ತ ಯುವತಿಯ ಆರೋಪವನ್ನು ಸಿಐಎಸ್‍ಎಫ್ (CISF) ಭದ್ರತಾ ಸಿಬ್ಬಂದಿ ನಿರಾಕರಿಸಿದ್ದಾರೆ. ಸ್ಕ್ಯಾನರ್ ಒಳಗೆ ಹೋಗುವಾಗ ಜಾಕೆಟ್ ತೆಗೆಯುವಂತೆ ಸೂಚಿಸಲಾಗಿತ್ತು. ಜಾಕೆಟ್‍ನಲ್ಲಿ ಮಣಿಗಳು ಮತ್ತು ಗುಂಡಿಗಳಿದ್ದ ಹಿನ್ನೆಲೆ ತೆಗೆಯುವಂತೆ ಸೂಚಿಸಲಾಗಿತ್ತು ಅಷ್ಟೇ. ಯುವತಿಯ ಆರೋಪ ನಿರಾಧಾರವೆಂದು ಸಿಐಎಸ್‍ಎಫ್ ಹೇಳಿದೆ. ಇದನ್ನೂ ಓದಿ: ರಾಜ್ಯದ ಜನತೆಯ ಬಳಿ ಸಿದ್ದರಾಮಯ್ಯ ಕ್ಷಮೆ ಕೇಳಲಿ: ಆರಗ ಜ್ಞಾನೇಂದ್ರ
Live Tv
[brid partner=56869869 player=32851 video=960834 autoplay=true]