ಧಾರವಾಡ: ಅಯ್ಯಪ್ಪ ಹೆಣ್ಣಮಕ್ಕಳಿಗೆ ಹುಟ್ಟಿಲ್ಲ, ಅವನು ಗಂಡಸರಿಗೆ ಹುಟ್ಟಿದ್ದಾನೆ. ಅದಕ್ಕಾಗಿ ಹೆಣ್ಣನ್ನು ಅಯ್ಯಪ್ಪ ದೇವಾಸ್ಥಾನಕ್ಕೆ ಪ್ರವೇಶಿಸಲು ಬಿಡೋದಿಲ್ಲವೇನು ಎಂದು ಮಹಿಳಾ ಹೋರಾಟಗಾರ್ತಿಯೊಬ್ಬರು ಪ್ರಶ್ನಿಸಿ ಅಯ್ಯಪ್ಪ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಲಬುರಗಿ ಮೂಲದ ಹೋರಾಟಗಾರ್ತಿ ಮೀನಾಕ್ಷಿ ಬಾಳಿ, ಅಯ್ಯಪ್ಪ ಸ್ವಾಮಿ ದೇವರು ಹೆಣ್ಣಿಗೆ ಹುಟ್ಟಿಲ್ಲ, ಗಂಡಸರಿಗೆ ಹುಟ್ಟಿದ್ದು. ಅದಕ್ಕೆ ನಮ್ಮನ್ನು ಅಯ್ಯಪ್ಪ ದೇವಸ್ಥಾನಕ್ಕೆ ಬಿಡೊಲ್ಲವೇನು? ಎಲ್ಲರಿಗೂ ಜನ್ಮ ನೀಡೋದು ತಾಯಿ. ಗಂಡಸರಿಗೆ ಮಗು ಹುಟ್ಟೊದಕ್ಕೆ ಸಾಧ್ಯವೇನು? ತೃತೀಯ ಲಿಂಗಿಗಳು, ಕಿನ್ನರಿಯರಿಗೆ ಕೇಳಿ ನೋಡಿ, ಅವರು ನೀವೇಷ್ಟು ಬೇಕೂಫ್ ಅಂತ ಹೇಳ್ತಾರೆ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ನಾವು ಮಹಿಳೆಯರು ಒಂದಾಗಿದ್ದರೆ ನಿಮ್ಮ ವಿರುದ್ಧ ಕುಸ್ತಿ ಮಾಡಲು ನಿಂತಿಲ್ಲ. ನಿಮಗೆ ಬಡೆದು ಬುದ್ಧಿಹೇಳಲು ನಿಂತಿದ್ದೇವೆ. ನಾವು ನಿಮ್ಮ ಮನೆ ಒಳಗಿರುವ ದೇವರ ಕೋಣೆಗೆ ಬರ್ತೀವಿ ಅಂತ ಹೇಳಿಲ್ಲ. ಮಠದೊಳಗೆ ಬರ್ತೀವಿ ಅಂತ ಹೇಳಿಲ್ಲ. ಯಾವುದು ಸಾರ್ವಜನಿಕ ದೇವಸ್ಥಾನ ಇದೆ ಅಲ್ಲಿ ಬರ್ತೀವಿ ಅಂತ ಹೇಳಿದ್ದೇವೆ. ನಮ್ಮ ರೊಕ್ಕ ಮೈಲಿಗೆ ಆಗೋದಿಲ್ಲ. ಮಕ್ಕಳೇ ನಮಗೆ ಮೈಲಿಗೆ ಆಗುತ್ತಾ ಎಂದು ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧ ಅಂತ ಹೋರಾಡುವ ಪುರುಷರಿಗೆ ಪ್ರಶ್ನಿಸಿದ್ದಾರೆ.
Advertisement
Advertisement
ಮಹಿಳಾ ದಿನಾಚರಣೆ ಅಂಗವಾಗಿ ಧಾರವಾಡದಲ್ಲಿ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ವೇಳೆ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಮೀನಾಕ್ಷಿ ಬಾಳಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ನಿಷೇಧ ವಿಚಾರವನ್ನು ಪ್ರಸ್ತಾಪಿಸಿ ಮಾತನಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv