ಕೋಲಾರ: ಅನಾಥಾಶ್ರಮದಲ್ಲಿ ಬೆಳೆದು ಅನಾಥನನ್ನು ಮದುವೆಯಾಗಿದ್ದ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ತಾಲೂಕು ತೊಟ್ಲಿ (Thotli) ಗ್ರಾಮದಲ್ಲಿ ನಂದಿನಿ (24) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ. ತೊಟ್ಲಿ ಮೂಲದ ಪತಿ ನಾಗೇಶ್ ಕಿರುಕುಳದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕಳೆದ ರಾತ್ರಿ ಕುಡಿದು ಬಂದು ಪತಿ ಪತ್ನಿ ಇಬ್ಬರು ಗಲಾಟೆ ಮಾಡಿಕೊಂಡಿದ್ದು, ಈ ವೇಳೆ ನಾಗೇಶ್ ತನ್ನ ಪತ್ನಿ ನಂದಿನಿ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೊನ್ನೆ 11 ಸಾವಿರ ಅಂದಿದ್ರು, ಈಗ 15 ಸಾವಿರ ಎಕ್ರೆಗೆ ಏರಿಕೆಯಾಗಿದೆ: ಜಮೀರ್ ವಿರುದ್ಧ ಯತ್ನಾಳ್ ಕಿಡಿ
ಇನ್ನೂ ಕೊಲೆ ಶಂಕೆ ವ್ಯಕ್ತವಾದ ಹಿನ್ನೆಲೆ ಕೋಲಾರ ಗ್ರಾಮಾಂತರ ಪೊಲೀಸರು ಪತಿ ನಾಗೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೋಲಾರ ತಹಶೀಲ್ದಾರ್ ನಯನಾ ಸಮ್ಮುಖದಲ್ಲಿ ನಂದಿನಿ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ಬರೆದಿದ್ದರಿಂದ ಗೊಂದಲ ಸೃಷ್ಟಿಯಾಗಿದೆ – ಎಂ.ಬಿ ಪಾಟೀಲ್ ಸ್ಪಷ್ಟನೆ