– ಕೋಳಿ ಕತ್ತರಿಸೋದ್ರಲ್ಲಿ ನಿಪುಣನಾಗಿದ್ದ ಆರೋಪಿ
– ಬೀದಿನಾಯಿ ಮೃತದೇಹದೊಂದಿಗೆ ಅಂಗಾಗ ಎಸೆದಿದ್ದ ಪಾಗಲ್
ರಾಂಚಿ: ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದ ಗೆಳತಿಯ ಮೇಲೆ ಅತ್ಯಾಚಾರ ಮಾಡಿ, ಬಳಿಕ 40-50 ತುಂಡುಗಳಾಗಿ ಕತ್ತರಿಸಿ ಬಿಸಾಡಿರುವ ಘಟನೆ ಜಾರ್ಖಂಡ್‌ನ ಖುಂಟಿ ಜಿಲ್ಲೆಯ ಅರಣ್ಯ ಪ್ರದೇಶವೊಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Advertisement
ಆರೋಪಿಯನ್ನು ನರೇಶ್ ಭೆಂಗ್ರಾ ಎಂದು ಗುರುತಿಸಲಾಗಿದೆ. ನ.24 ರಂದು ಜೋರ್ಡಾಗ್ ಗ್ರಾಮದ ಬಳಿ ಬೀದಿ ನಾಯಿಯ ದೇಹದೊಂದಿಗೆ ಮಾನವನ ದೇಹದ ಅಂಗಾಂಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.ಇದನ್ನೂ ಓದಿ: ಸಂಸತ್‌ನಲ್ಲಿ ಅಮ್ಮ-ಅಣ್ಣ-ತಂಗಿ; ಇಂದು ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ ಸ್ವೀಕಾರ
Advertisement
Advertisement
ತನಿಖೆ ಬಳಿಕ, ಆರೋಪಿಯು ತನ್ನ ಗೆಳತಿಯೊಂದಿಗೆ ತಮಿಳುನಾಡಿನಲ್ಲಿ 2 ವರ್ಷಗಳ ಕಾಲ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದನು. ಅಲ್ಲಿಂದ ಜಾರ್ಖಂಡ್‌ನ ಖುಂಟಿಗೆ ಬಂದಿದ್ದ. ಆತ ತನ್ನ ಗೆಳತಿಗೆ ತಿಳಿಸದೇ ಬೇರೊಂದು ಮದುವೆಯಾಗಿದ್ದ. ಅದಾದ ಸ್ವಲ್ಪ ದಿನಗಳ ನಂತರ ಸಂತ್ರಸ್ತೆ ತನ್ನ ಗೆಳೆಯನ ಭೇಟಿಗಾಗಿ ಜಾರ್ಖಂಡ್‌ಗೆ ಹೋಗಿದ್ದಳು.
Advertisement
ನ.8 ಜಾರ್ಖಂಡ್‌ಗೆ ಬಂದಿಳಿದಳು. ಮನೆಯಲ್ಲಿ ಹೆಂಡತಿಯಿದ್ದ ಕಾರಣ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಆರೋಪಿ ತಯಾರಿರಲಿಲ್ಲ. ಹಾಗಾಗಿ ಆಟೋರಿಕ್ಷಾದಲ್ಲಿ ಆಕೆಯನ್ನು ಖುಂಟಿಗೆ ಕರೆದೊಯ್ದು ಮನೆಯ ಸಮೀಪ ನಿಲ್ಲಿಸಿ, ತಾನು ಮರಳಿ ಬರುವುದಾಗಿ ತಿಳಿಸಿ ಮನೆ ಕಡೆಗೆ ಹೋಗಿದ್ದಾನೆ. ಮನೆಯಿಂದ ಮರಳುವಾಗ ಆಯುಧಗಳೊಂದಿಗೆ ಹಿಂದಿರುಗಿದ್ದಾನೆ. ಆಕೆಯ ಮೇಲೆ ಆತ್ಯಾಚಾರ ಎಸಗಿ, ಬಳಿಕ ಕತ್ತು ಹಿಸುಕಿ ಸಾಯಿಸಿದ್ದಾನೆ. ನಂತರ ದೇಹವನ್ನು 40 ರಿಂದ 50 ತುಂಡುಗಳಾಗಿ ಕತ್ತರಿಸಿ ಬಿಸಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಖುಂಟಿ ಪೊಲೀಸ್ ವರಿಷ್ಠಾಧಿಕಾರಿ ಅಮನ್ ಕುಮಾರ್ ಮಾಹಿತಿ ಪ್ರಕಾರ, ಆರೋಪಿ ತಮಿಳುನಾಡಿನ ಮಾಂಸದಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕೋಳಿಯನ್ನು ಕತ್ತರಿಸುವುದರಲ್ಲಿ ನಿಪುಣರಾಗಿದ್ದ. ನ.24 ರಂದು ಜೋರ್ಡಾಗ್ ಗ್ರಾಮದ ಬಳಿ ಬೀದಿ ನಾಯಿಯ ಕಳೇಬರದೊಂದಿಗೆ ಕೈಯೊಂದು ಕಾಣಿಸಿಕೊಂಡಿದ್ದು, ನಂತರ ಪೊಲೀಸರ ಪರಿಶೀಲನೆಯ ಬಳಿಕ ಹಲವು ಭಾಗಗಳನ್ನು ಪತ್ತೆಹಚ್ಚಿದ್ದಾರೆ ಎಂದು ತಿಳಿಸಿದರು.
ಇನ್ನೂ ಘಟನೆ ನಡೆದ ಜಾಗದಲ್ಲಿ ಮಹಿಳೆಯ ಆಧಾರ್ ಕಾರ್ಡ್ ಸೇರಿದಂತೆ ಸಾಮಾನುಗಳಿದ್ದ ಬ್ಯಾಗ್ ಕೂಡ ಪತ್ತೆಯಾಗಿದೆ. ಸಂತ್ರಸ್ತೆಯ ತಾಯಿಗೆ ಸಿಕ್ಕ ಬ್ಯಾಗನ್ನು ನೀಡಿದಾಗ, ಬ್ಯಾಗ್ ತನ್ನ ಮಗಳದ್ದೇ ಎಂದು ಪತ್ತೆ ಹಚ್ಚಿದ್ದಾರೆ. ಜಾರ್ಖಂಡ್‌ಗೆ ಹೊರಡುವ ಮುನ್ನ ತನ್ನ ಗೆಳಯನೊಂದಿಗೆ ವಾಸಿಸುವುದಾಗಿ ತಿಳಿಸಿದ್ದಳು ಎಂದು ಹೇಳಿದ್ದಾರೆ. ಜೊತೆಗೆ ಈ ಕೊಲೆಯ ಹಿಂದೆ ಆರೋಪಿ ಇರುವುದಾಗಿ ತಾಯಿ ಶಂಕಿಸಿದ್ದಾರೆ.ಇದನ್ನೂ ಓದಿ: Exclusive | ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್: ಬಾಂಬ್ ಇಟ್ಟ ಬಳಿಕ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದ ಮಾಸ್ಟರ್ ಮೈಂಡ್