ನವದೆಹಲಿ: ನೋಟುಗಳಲ್ಲಿ ಬರೆಯುವುದು ಕಾನೂನು ಬಾಹಿರವಾಗಿದೆ. ಆದರೂ ಇಲ್ಲೊಬ್ಬ ಪ್ರಿಯತಮೆ ತನ್ನ ಗೆಳೆಯನಿಗೆ 10 ರೂ. ನೋಟಲ್ಲಿ ಕಳುಹಿಸಿರುವ ಸಂದೇಶ ಇದೀಗ ಭಾರೀ ಸುದ್ದಿಯಾಗಿದೆ.
ವಿಶಾಲ್, ಏಪ್ರಿಲ್ 26ರಂದು ನನ್ನ ಮದುವೆ ಫಿಕ್ಸ್ ಆಗಿದೆ. ಹೀಗಾಗಿ ಆದಷ್ಟು ಬೇಗ ಬಂದು ನನ್ನನ್ನು ಕರೆದುಕೊಂಡು ಹೋಗು. ಐ ಲವ್ ಯೂ. ಇಂತಿ ನಿನ್ನ ಪ್ರಿಯತಮೆ ಕುಸುಮ್ ಎಂದು 10 ರೂ. ನೋಟಿನಲ್ಲಿ ಬರೆಯಲಾಗಿದೆ. ಇದೀಗ ನೋಟಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
Advertisement
Twitter show your power… 26th April ke Pehle kusum ka Yeh message vishal tak pahuchana hai.. Doh pyaar karne wale ko milana hai.. Please amplify n tag all vishal you know.. ???? pic.twitter.com/NFbJP7DiUK
— Crime Master Gogo (PARODY) ???????? (@vipul2777) April 18, 2022
Advertisement
ಈ ರೀತಿ ಬರೆದಿರುವ ನೋಟಿನ ಫೋಟೋ ತೆಗೆದುಕೊಂಡು ಅದನ್ನು ಟ್ವಿಟ್ಟರ್ ಬಳಕೆದಾರ ವಿಪುಲ್ ಶೇರ್ ಮಾಡಿಕೊಂಡಿದ್ದಾರೆ. ಟ್ವಿಟ್ಟರ್, ನಿಮ್ಮ ಶಕ್ತಿಯನ್ನು ತೋರಿಸಿ. ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ವಿಶಾಲ್‍ಗಳಿಗೆ ಟ್ಯಾಗ್ ಮಾಡಿ. ಅಲ್ಲದೆ ಏಪ್ರಿಲ್ 26 ರ ಮೊದಲು ಕುಸುಮ್ ಅವರ ಈ ಸಂದೇಶವನ್ನು ವಿಶಾಲ್‍ಗೆ ತಲುಪಿಸಬೇಕು. ಈ ಮೂಲಕ ಇವರಿಬ್ಬರು ಕೂಡ ಒಂದಾಗಬೇಕು ಎಂದು ಬರೆದಿದ್ದಾರೆ. ಇದನ್ನೂ ಓದಿ: 30 ಲಕ್ಷದ ಚಿನ್ನವನ್ನು ಗುದನಾಳ, ವಿಗ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಕಿಲಾಡಿ ಕಳ್ಳನ ಬಂಧನ
Advertisement
Lets do it! Vishal your dulhaniya is waiting for you! https://t.co/P283jaF2T3
— Chinten Shah (@chintenshah) April 20, 2022
Advertisement
ವಿಪುಲ್ ಈ ಫೋಟೋ ಶೇರ್ ಮಾಡುತ್ತಿದ್ದಂತೆಯೇ ಹಲವಾರು ಪರ-ವಿರೋಧ ಕಾಮೆಂಟ್ ಗಳು ಬರಲು ಆರಂಭಿಸಿದವು. ಕೆಲವು ನೆಟ್ಟಿಗರು ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ವಿಶಾಲ್ ಅನ್ನು ಟ್ಯಾಗ್ ಮಾಡಿ ಎಂದು ನೆಟ್ಟಿಗರು ಬರೆದುಕೊಂಡು ಈ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಾರೆ. ಅಲ್ಲದೇ ಈ ಫೋಟೋ ವಿಶಾಲ್‍ನ ಸರ್‍ನೇಮ್ ಅನ್ನು ಅಳಿಸಲಾಗಿದ್ದು, ಆ ಸರ್ ನೇಮ್ ಅನ್ನು ಬಹಿರಂಗಪಡಿಸುವಂತೆ ನೆಟ್ಟಿಗರು ವಿನಂತಿಸಿದ್ದಾರೆ. ಇದನ್ನೂ ಓದಿ: ಭಿನ್ನಾಭಿಪ್ರಾಯ ಹತ್ತಿಕ್ಕಿ ಸತ್ಯವನ್ನು ಬಂಧಿಸಲು ಸಾಧ್ಯವಿಲ್ಲ: ಮೋದಿಗೆ ರಾಹುಲ್ ತಿರುಗೇಟು