ಪಾಟ್ನಾ: ಆಸ್ಪತ್ರೆಯಲ್ಲಿ ಮಗುವಿಗೆ (Baby) ಜನ್ಮ ನೀಡಿದ ಕೆಲವೇ ಗಂಟೆಗಳ ನಂತರ 10ನೇ ತರಗತಿಯ ವಾರ್ಷಿಕ ಪರೀಕ್ಷೆಯನ್ನು (Exam) ಬರೆಯಲು ಮಹಿಳೆಯೊಬ್ಬಳು ಅಂಬುಲೆನ್ಸ್ನಲ್ಲಿ ತೆರಳಿದ ಘಟನೆ ಬಿಹಾರದಲ್ಲಿ (Bihar) ನಡೆದಿದೆ.
ಬಂಕಾ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ರುಕ್ಮಿಣಿ ಕುಮಾರಿ (22) ಬೆಳಗ್ಗೆ ಮಗುವಿಗೆ ಜನ್ಮ ನೀಡಿದ್ದಳು. ಅದಾದ 3 ಗಂಟೆಗಳ ನಂತರ ರುಕ್ಮಿಣಿ ವಿಜ್ಞಾನ ಪರೀಕ್ಷೆಯನ್ನು ಬರೆದಿದ್ದಾಳೆ. ವೈದ್ಯರು ಹಾಗೂ ಕುಟುಂಬದ ಸಲಹೆಯನ್ನು ನಿರಾಕರಿಸಿ ಪರೀಕ್ಷೆ ಬರೆದಿರುವುದು ಇದೀಗ ಪಟ್ಟಣದಲ್ಲಿ ಚರ್ಚೆ ಆಗುತ್ತಿದೆ.
Advertisement
Advertisement
ಈ ಬಗ್ಗೆ ಮಾತನಾಡಿದ ರುಕ್ಮಿಣಿ ಹಿಂದಿನ ದಿನ ಗಣಿತ ಪರೀಕ್ಷೆ ಬರೆದಾಗ ಸ್ವಲ್ಪ ಸುಸ್ತಾಗುತ್ತಿತ್ತು. ಆದರೆ ಮರುದಿನದ ವಿಜ್ಞಾನ ಪರೀಕ್ಷೆಗೆ ಉತ್ಸುಕನಾಗಿದ್ದೆ. ಆದರೆ ತಡರಾತ್ರಿ ಹೆರಿಗೆ ನೋವು ಬಂದಿದ್ದರಿಂದ ಆಸ್ಪತ್ರೆಗೆ ತೆರಳಬೇಕಾಯಿತು. ಬೆಳಗ್ಗೆ 6 ಗಂಟೆಗೆ ಮಗು ಜನಿಸಿತು ಎಂದು ತಿಳಿಸಿದಳು.
Advertisement
ಈ ಬಗ್ಗೆ ವೈದ್ಯರು ಮಾತನಾಡಿ, ಹೆರಿಗೆ ನೋವಿನಿಂದಾಗಿ ರುಕ್ಮಿಣಿ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದರಿಂದ ನಾವು ಪರೀಕ್ಷೆ ಬರೆಯದಂತೆ ಮನವೊಲಿಸಲು ಪ್ರಯತ್ನಿಸಿದೆವು. ಆದರೆ ಅವರು ಒಪ್ಪಲಿಲ್ಲ. ಇದರಿಂದಾಗಿ ತುರ್ತು ಸಂದರ್ಭದಲ್ಲಿ ಅವಳಿಗೆ ಸಹಾಯ ಮಾಡಲು ಅಂಬುಲೆನ್ಸ್ ಹಾಗೂ ಕೆಲವು ವೈದ್ಯರನ್ನು ನಿಯೋಜಿಸಲಾಯಿತು ಎಂದರು. ಇದನ್ನೂ ಓದಿ: `ಸಾಕಪ್ಪ ಸಾಕು, ಕಿವಿ ಮೇಲೆ ಹೂ’; ಬಜೆಟ್ ಬಗ್ಗೆ ಕಾಂಗ್ರೆಸ್ ವ್ಯಂಗ್ಯ – ಪೋಸ್ಟರ್ ಅಂಟಿಸಿ ಅಭಿಯಾನ
Advertisement
ಮಹಿಳೆಯರ ಶಿಕ್ಷಣಕ್ಕೆ ಸರ್ಕಾರ ಒತ್ತು ನೀಡುತ್ತಿರುವುದು ಇದೀಗ ಭಾರೀ ಸದ್ದು ಮಾಡುತ್ತಿದೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ರುಕ್ಮಿಣಿ ಎಲ್ಲರಿಗೂ ಸ್ಫೂರ್ತಿ ಆಗಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಹೊಸ ಚಿಹ್ನೆ ಪಡೆದು ಕೆಲಸ ಮಾಡಿ – ಉದ್ಧವ್ ಠಾಕ್ರೆಗೆ ಶರದ್ ಪವಾರ್ ಸಲಹೆ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k