ಚಂಡೀಗಢ: ಮುಖದಲ್ಲಿ ಭಾರತದ ಧ್ವಜದ ಚಿತ್ರವನ್ನು ಬಿಡಿಸಿಕೊಂಡಿದ್ದಕ್ಕೆ ಪಂಜಾಬ್‍ನ ಅಮೃತಸರದಲ್ಲಿರುವ ಸ್ವರ್ಣ ಮಂದಿರದ (Golden Temple) ಪ್ರವೇಶಕ್ಕೆ ಅನುಮತಿ ನೀಡದ ವಿಚಾರ ಈಗ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಯುವತಿಯೊಬ್ಬಳು (Woman) ಸ್ವರ್ಣ ಮಂದಿರದ ಒಳಗಡೆ ಹೋಗುತ್ತಿದ್ದಂತೆ ಅಲ್ಲಿಯ ಕಾವಲುಗಾರನೊಬ್ಬ ಆಕೆಯನ್ನು ತಡೆದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
1) A girl was stopped from entering Golden Temple because she had an Indian flag painted on her face.
The man who denied her entry into Golden Temple said, this is Punjab not India. pic.twitter.com/IfUi74poIk
— Anshul Saxena (@AskAnshul) April 17, 2023
ವೀಡಿಯೋದಲ್ಲಿ ಏನಿದೆ?: ಯುವತಿಯು ಕಾವಲುಗಾರನ ಬಳಿ ಇದು ಭಾರತವಲ್ಲವೇ ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಆತ ಇದು ಪಂಜಾಬ್ ಎಂದು ಹೇಳುತ್ತಾನೆ. ಅದಾದ ಬಳಿಕ ಆಕೆಯ ಫೋನ್‍ನಲ್ಲಿ ವೀಡಿಯೋ ಮಾಡುತ್ತಿರುವುದನ್ನು ಗಮನಿಸಿ ಕಸಿದುಕೊಳ್ಳಲು ಪ್ರಯತ್ನಿಸುತ್ತಾನೆ.
ಘಟನೆಗೆ ಸಂಬಂಧಿಸಿದಂತೆ ಸ್ವರ್ಣ ಮಂದಿರವನ್ನು ನಿರ್ವಹಣೆ ಮಾಡುವ ಶಿರೋಮಣಿ ಗುರುದ್ವಾರ ಪಬರ್ಂಧಕ್ ಸಮಿತಿಯು ಅಧಿಕಾರಿಯ ದುರ್ವರ್ತನೆಗಾಗಿ ಕ್ಷಮೆಯಾಚಿಸಿದೆ. ಆದರೆ ಯುವತಿಯ ಮುಖದ ಮೇಲೆ ಅಶೋಕ ಚಕ್ರವನ್ನು ಹೊಂದಿಲ್ಲದ ಕಾರಣ ಅದು ತ್ರಿವರ್ಣ ಧ್ವಜವಲ್ಲ ಎಂದು ವಾದಿಸಿದೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆ – ಬಸವಕಲ್ಯಾಣ ಕ್ಷೇತ್ರದ ಅಖಾಡ ಹೇಗಿದೆ?
ಎಸ್‍ಜಿಪಿಸಿಯ ಪ್ರಧಾನ ಕಾರ್ಯದರ್ಶಿ ಗುರ್ಚರಣ್ ಸಿಂಗ್ ಗ್ರೆವಾಲ್ ಮಾತನಾಡಿ, ಇದು ಸಿಖ್ ದೇಗುಲವಾಗಿದೆ. ಪ್ರತಿಯೊಂದು ಧಾರ್ಮಿಕ ಸ್ಥಳವು ತನ್ನದೇ ಆದ ಅಲಂಕಾರವನ್ನು ಹೊಂದಿದೆ. ನಾವು ಎಲ್ಲರಿಗೂ ಸ್ವಾಗತಿಸುತ್ತೇವೆ. ಅಧಿಕಾರಿಯೊಬ್ಬರು ಅನುಚಿತವಾಗಿ ವರ್ತಿಸಿದರೆ ನಾವು ಕ್ಷಮೆಯಾಚಿಸುತ್ತೇವೆ. ಅವಳ ಮುಖದಲ್ಲಿರುವ ಧ್ವಜವು ನಮ್ಮ ರಾಷ್ಟ್ರಧ್ವಜವಾಗಿರಲಿಲ್ಲ. ಏಕೆಂದರೆ ಅದು ಅಶೋಕ ಚಕ್ರವನ್ನು ಹೊಂದಿರಲಿಲ್ಲ. ಇದು ರಾಜಕೀಯ ಧ್ವಜವಾಗಿರಬಹುದು ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ, ಆರ್‌ಎಸ್‌ಎಸ್‌ನಿಂದ ಪ್ರಜಾಪ್ರಭುತ್ವದ ಮೇಲೆ ದಾಳಿ : ರಾಹುಲ್ ಗಾಂಧಿ