ವನಿತಾ ಸಹಾಯವಾಣಿ ಕೇಂದ್ರದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಸಂತ್ರಸ್ತೆ ಪ್ರಾಣಾಪಾಯದಿಂದ ಪಾರು!

Public TV
1 Min Read
suicide attempt collage

ಬೆಂಗಳೂರು: ಮೊದಲ ಪತಿಯನ್ನು ಕಳೆದುಕೊಂಡು ಮತ್ತೊಬ್ಬನಿಂದ ಮೋಸಗೊಳಕ್ಕಾದ ಮಹಿಳೆ ಮಂಗಳವಾರ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದಿದೆ.

ಮೇರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಮೇರಿ ಮೂಲತಃ ಹಲಸೂರಿನವಳಾಗಿದ್ದು, ಆಕೆ ಮದುವೆಯಾಗಿದ್ದ ಮೊದಲ ಪತಿ ಆಕಸ್ಮಿಕವಾಗಿ ಮೃತಪಟ್ಟಿದ್ದನು. ಈ ಹಿನ್ನೆಲೆಯಲ್ಲಿ ನೊಂದಿದ್ದ ಮೇರಿ ಮತ್ತೊಬ್ಬನ ಆಸರೆಗಾಗಿ ಕಾದು ಕುಳಿತಿದ್ದಳು. ಆಗ ಪ್ರಕಾಶ್ ಆಕೆಯ ಬಾಳಲ್ಲಿ ಎಂಟ್ರಿ ಕೊಟ್ಟಿದ್ದನು.

ಪ್ರಕಾಶ್ ಮದುವೆಯಾಗದೇ ಮೇರಿ ಜೊತೆ ಮೊಬೈಲಿನಲ್ಲಿ ಒಮ್ಮೆ ಮಾತಾಡಿ ಆಕೆಯನ್ನು ಲೈಂಗಿಕವಾಗಿಯೂ ಉಪಯೋಗಿಸಿಕೊಂಡಿದ್ದ. ಮೇರಿ ಗರ್ಭಿಣಿಯಾದ ವಿಚಾರ ತಿಳಿಯುತ್ತಿದ್ದಂತೆ ಮದುವೆಯಾಗುತ್ತೇನೆ ಎಂದಿದ್ದ ಪ್ರಕಾಶ್ ಬಳಿಕ ಆಕೆಯ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿದ್ದ.

suicide attempt 2

ಅನ್ಯಾಯವಾದ ಹಿನ್ನೆಲೆಯಲ್ಲಿ ವನಿತಾ ಸಹಾಯವಾಣಿ ಮೊರೆ ಹೋಗಿ ಮೇರಿ ತನಗೆ ನ್ಯಾಯ ಬೇಕು ಎಂದು ಹೇಳಿಕೊಂಡಿದ್ದಳು. ಮೇರಿಯನ್ನು ಕೌನ್ಸಿಲಿಂಗ್ ಗೆ ಕರೆದಿದ್ದ ವನಿತಾ ಸಹಾಯವಾಣಿ ಅಧ್ಯಕ್ಷೆ ಇಬ್ಬರನ್ನೂ ರಾಜಿ ಸಂಧಾನ ಮಾಡಿಸಲು ಮುಂದಾಗಿದ್ದರು.

ಕೌನ್ಸಿಲಿಂಗ್ ಬಂದಿದ್ದ ಮೇರಿ ಶೌಚಾಲಯಕ್ಕೆ ಹೋಗಬೇಕು ಎಂದಿದ್ದಾಳೆ. ಈ ವೇಳೆ ಆಕೆಯ ಹಾವ ಭಾವ ಬದಲಾಗಿದ್ದನ್ನು ಕಂಡ ಅಧ್ಯಕ್ಷೆ ಆಕೆಯ ಜೊತೆ ಸಿಬ್ಬಂದಿಯನ್ನೂ ಕಳಿಸಿಕೊಟ್ಟಿದ್ದಾರೆ. ಶೌಚಾಲಯಕ್ಕೆ ಹೋದ ಮೇರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ಕೂಡಲೇ ಆಕೆಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *