ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ತೆರಳಿದ್ದ ಮಹಿಳೆ ನೀರುಪಾಲು

Public TV
1 Min Read
Krishna River Drowned

ಚಿಕ್ಕೋಡಿ: ಕೃಷ್ಣಾ ನದಿಗೆ (Krishna River) ಬಾಗಿನ ಅರ್ಪಿಸಲು ತೆರಳಿದ್ದ ಮಹಿಳೆ ನೀರುಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (Chikkodi) ತಾಲೂಕಿನ ಮಾಂಜರಿ ಗ್ರಾಮದ ಪಕ್ಕದ ಕೃಷ್ಣಾ ನದಿಯಲ್ಲಿ ನಡೆದಿದೆ.

ಮಾಂಜರಿ (Manjari) ಗ್ರಾಮದ ಸಂಗೀತಾ ಶಿವಾಜಿ ಮಾಂಜರೇಕರ್ (40) ನೀರುಪಾಲಾಗಿರುವ ಮಹಿಳೆ. ಇದನ್ನೂ ಓದಿ: ಏರ್‌ ಇಂಡಿಯಾ ಎಂಜಿನಿಯರಿಂಗ್ ಮುಖ್ಯಸ್ಥನಿಗೆ ಡಿಜಿಸಿಎ ಬುಲಾವ್ – ಬೋಯಿಂಗ್ 787 ವಿಮಾನಗಳ ತಾಂತ್ರಿಕ ಸಮಸ್ಯೆ ಬಗ್ಗೆ ಚರ್ಚೆ

ನಿರಂತರ ಮಳೆಯಿಂದ ಒಡಲು ತುಂಬಿಕೊಂಡ ಕೃಷ್ಣಾ ನದಿಗೆ ಸಂಗೀತಾ ಅವರು ಬಾಗಿನ ಅರ್ಪಿಸಲು ತೆರೆಳಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ನದಿಯಲ್ಲಿ ಕಣ್ಮರೆಯಾಗಿದ್ದಾರೆ. ಇದನ್ನೂ ಓದಿ: ಜಾಲಿ ಎಲ್‌ಎಲ್‌ಬಿ-3: ಸೀಕ್ರೆಟ್ ಬಿಚ್ಚಿಟ್ಟ ಅಕ್ಷಯ್

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳವು ಮಹಿಳೆಗಾಗಿ ಹುಡುಕಾಟ ನಡೆಸುತ್ತಿದೆ. ಘಟನಾ ಸ್ಥಳಕ್ಕೆ ಚಿಕ್ಕೋಡಿ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಕಲಿ ಪೊಲೀಸ್ ಠಾಣಾ (Ankali Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article