ಹುಬ್ಬಳ್ಳಿ: ದೇವರ ಹೆಸರಿನಲ್ಲಿ ಅಪರಿಚಿತನೊಬ್ಬ ನೀಡಿದ ತೀರ್ಥ ಹಾಗೂ ಪ್ರಸಾದ ಸೇವಿಸಿದ ಮಹಿಳೆಯೊಬ್ಬರ (Woman) ಮಾತೇ ನಿಂತುಹೋದ ಘಟನೆ ಕುಂದಗೋಳದ (Kundgol) ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ.
ಭಿಕ್ಷುಕನೊಬ್ಬ ಕೊಟ್ಟ ಭಸ್ಮ ಹಾಗೂ ಹಾಲನ್ನು ಸೇವಿಸಿದ ಗ್ರಾಮದ ಮಹಿಳೆ ಮೀನಾಕ್ಷಿ ಎಂಬವರಿಗೆ ಮಾತು ನಿಂತುಹೋಗಿದೆ. ಮನೆ ಬಳಿ ಬಂದಿದ್ದ ಭಿಕ್ಷುಕನಿಗೆ ಮಹಿಳೆ 5 ರೂ. ನೀಡಿದ್ದಾರೆ. ಈ ವೇಳೆ ಆತ ಪ್ರಸಾದ ಹಾಗೂ ತೀರ್ಥ ಎಂದು ಭಸ್ಮ ಮತ್ತು ಹಾಲನ್ನು ನೀಡಿದ್ದಾನೆ. ಇದನ್ನು ಸೇವಿಸಿದ ಬಳಿಕ ಮಹಿಳೆಗೆ ಈ ಸಮಸ್ಯೆ ಉಂಟಾಗಿದೆ. ಇದನ್ನೂ ಓದಿ: ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷಗಿರಿಗೆ ಬ್ರಿಜ್ ಭೂಷಣ್ ಬೆಂಬಲಿತ ಅಭ್ಯರ್ಥಿ ಆಯ್ಕೆ
ಮಹಿಳೆಯನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಬಳಿಕವೂ ಮಹಿಳೆಗೆ ಮಾತನಾಡಲು ಬರುತ್ತಿಲ್ಲ. ಗ್ರಾಮಸ್ಥರು ಭಿಕ್ಷುಕನ ಹುಡುಕಾಟ ನಡೆಸಿದ್ದಾರೆ.
ಕುಂದಗೋಳ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಸಂಸದರಿಗೇ ರಕ್ಷಣೆ ಇಲ್ಲ, ಬೇರೆಯವ್ರಿಗೆ ಹೇಗೆ ಎಂದು ಪ್ರಶ್ನಿಸಿದ ನಮ್ಮನ್ನೂ ಅಮಾನತು ಮಾಡಿದ್ರು: ಡಿಕೆ ಸುರೇಶ್