ಪುಟಿನ್‌ನ ನಿಜವಾದ ತಾಯಿ ಎಂದಿದ್ದಾಕೆ ನಿಧನ

Public TV
1 Min Read
vladimir putin

ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರ ರಹಸ್ಯ ತಾಯಿ (Secret Mother) ಎಂದು ಹಲವು ವರ್ಷಗಳಿಂದ ಹೇಳಿಕೊಂಡಿದ್ದ ವೃದ್ಧೆ ತನ್ನ 97ನೇ ವಯಸ್ಸಿನಲ್ಲಿ ನಿಧನರಾಗಿರುವುದು ಬಹಿರಂಗವಾಗಿದೆ.

ವೆರಾ ಪುಟಿನಾ (Vera Putina) ಹಲವು ವರ್ಷಗಳಿಂದ ರಷ್ಯಾದ (Russia) ಅಧ್ಯಕ್ಷ ತನ್ನ ಮಗನೆಂದು ಹೇಳಿಕೊಂಡಿದ್ದರು. ಆಕೆ ಒಬ್ಬ ವಿವಾಹಿತ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರಿಂದ ಪುಟಿನ್ ಜನಿಸಿದ್ದರು. ಆಕೆ ತನ್ನ ಮಗನ ಚಿತ್ರಗಳನ್ನು ತೋರಿಸಿದ್ದರೂ ಸಹ 70 ವರ್ಷದ ರಷ್ಯಾದ ನಾಯಕ ಇದನ್ನು ಸಾರ್ವಜನಿಕವಾಗಿ ಎಂದೂ ಒಪ್ಪಿಕೊಂಡಿರಲಿಲ್ಲ.

vladimir putin 1

ಹಿಂದಿನ ಸೋವಿಯತ್ ರಾಜ್ಯವಾದ ಜಾರ್ಜಿಯಾದಲ್ಲಿನ ಅತ್ಯಂತ ಬಡ ಹಳ್ಳಿಯಾದ ಮೆಟೆಖಿಯಲ್ಲಿ ವೆರಾ ವಾಸಿಸುತ್ತಿದ್ದರು. ಪುಟಿನ್ ಕೇವಲ 10 ವರ್ಷದವರಾಗಿದ್ದಾಗ ಅವರನ್ನು ಓಚಿಯೋರ್‌ನಲ್ಲಿರುವ ತನ್ನ ಅಜ್ಜಿಯ ಬಳಿಗೆ ಕಳುಹಿಸಿದ ನಂತರ ಆತ ತನ್ನನ್ನು ಎಂದೂ ಕ್ಷಮಿಸದೇ ದೂರವಾಗಿದ್ದಾಗಿ ವೆರಾ ಹೇಳಿಕೊಂಡಿದ್ದರು. ಇದನ್ನೂ ಓದಿ: ಸ್ಟೇಜ್‌ನಲ್ಲೇ ಎಡವಿ ಬಿದ್ದ US ಅಧ್ಯಕ್ಷ ಜೋ ಬೈಡನ್‌ – ವೀಡಿಯೋ ವೈರಲ್‌

ಈ ವಿಚಾರವನ್ನು ವೆರಾ 1999 ರಲ್ಲಿ ಬಹರಂಗಪಡಿಸಿದ್ದರು. ಆದರೂ ಪುಟಿನ್ ತಮ್ಮ ಆತ್ಮಚರಿತ್ರೆಯಲ್ಲಿ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಮರಿಯಾ ಹಾಗೂ ತಂದೆ ವ್ಲಾಡಿಮಿರ್ ಪುಟಿನ್‌ಗೆ ಜನಿಸಿ, ಅವರೊಂದಿಗೆ ಬೆಳೆದಿರುವುದಾಗಿ ಬರೆದಿದ್ದಾರೆ. 1990ರ ದಶಕದಲ್ಲಿ ಪೋಷಕರಿಬ್ಬರೂ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ 2 ದಿನ ಪಬ್ಲಿಕ್‌ ಟಿವಿ ‘ವಿದ್ಯಾಪೀಠ’

Share This Article