ನವದೆಹಲಿ: ತುಂಡುಡುಗೆ ಧರಿಸಿರುವ ಯುವತಿಯರನ್ನು ಕಂಡರೆ ಅತ್ಯಾಚಾರ ಮಾಡಿ ಎಂದು ಮಹಿಳೆಯೊಬ್ಬಳು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ಅದೇ ಮಹಿಳೆ ತುಂಡುಡುಗೆ ಧರಿಸಿರುವ ಫೋಟೋ ವೈರಲ್ ಆಗಿದೆ.
ಮಹಿಳೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರು ತಮ್ಮ ಸಾಮಾಜಿಕ ಜಾಲತಾಣದ ಎಲ್ಲ ಖಾತೆಗಳನ್ನು ಡಿಲೀಟ್ ಮಾಡಿದ್ದರು. ಮಹಿಳೆ ತನ್ನ ಖಾತೆಯನ್ನು ಡಿಲೀಟ್ ಮಾಡುವ ಮೊದಲೇ ಯುವತಿ ಶಿವಾನಿ ಮಹಿಳೆ ಧರಿಸಿದ್ದ ತುಂಡುಡುಗೆ ಫೋಟೋ ಡೌನ್‍ಲೋಡ್ ಮಾಡಿ ತನ್ನ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅಲ್ಲದೆ, “ಹೌದು. ಇದು ಅದೇ ಆಂಟಿ. ಅವರು ಧರಿಸಿದ ಉಡುಪಿನ ಬಗ್ಗೆ ನನಗೆ ಸಮಸ್ಯೆ ಇದೆ” ಎಂದು ಬರೆದು ಪೋಸ್ಟ್ ಮಾಡಿ ತಿರುಗೇಟು ನೀಡಿದ್ದಾರೆ.
Advertisement
View this post on Instagram
Advertisement
ಎನಿದು ಘಟನೆ?
ಮಹಿಳೆಯೊಬ್ಬರು 7 ಮಂದಿಯ ಜೊತೆ ತುಂಡುಡುಗೆ ಧರಿಸಿರುವ ಯುವತಿಯರನ್ನು ಕಂಡರೆ ಅತ್ಯಾಚಾರ ಮಾಡಿ ಎಂದು ಹೇಳಿದ್ದರು. ರೆಸ್ಟೋರೆಂಟ್ ಒಂದರಲ್ಲಿ ಮಹಿಳೆ ಹಾಗೂ ಹುಡುಗಿಯರ ಗುಂಪೊಂದು ಉಡುಗೆಯ ಬಗ್ಗೆ ಮಾತಿನ ಚಕಮಕಿ ನಡೆಸಿತ್ತು. ಇದನ್ನು ಗುಂಪಿನಲ್ಲಿದ್ದ ಯುವತಿಯೊಬ್ಬಳು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಇನ್ ಸ್ಟಾಗ್ರಾಮ್ ಮತ್ತು ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದು ವೈರಲ್ ಆಗಿತ್ತು.
Advertisement
ವಿಡಿಯೋದಲ್ಲಿ ಈ ಹಿಂದೆ ಮಧ್ಯವಯಸ್ಸಿನ ಮಹಿಳೆ ಟೀಕಿಸಿದ್ದ ಹುಡುಗಿಯರ ಗುಂಪೊಂದು ಅದೇ ಮಹಿಳೆಯನ್ನು ರೆಸ್ಟೋರೆಂಟ್ ಒಂದರಲ್ಲಿ ಸಂಪರ್ಕಿಸಿತ್ತು. ಈ ವೇಳೆ ಹುಡುಗಿಯರು, ತಮ್ಮ ಹೇಳಿಕೆಗೆ ಕ್ಷಮೆ ಕೇಳುವಂತೆ ಮಹಿಳೆಯನ್ನು ಹಿಂಬಾಲಿಸಿದ್ದರು. ಹುಡುಗಿಯರ ಗುಂಪು ತನ್ನನ್ನು ಹಿಂಬಾಲಿಸುತ್ತಿರುವುದರಿಂದ ಸಿಟ್ಟುಗೊಂಡ ಮಹಿಳೆ, ಸ್ಟೋರ್ ಸಿಬ್ಬಂದಿಯಲ್ಲಿ ಪೊಲೀಸರಿಗೆ ಕರೆ ಮಾಡುವಂತೆ ತಿಳಿಸಿದ್ದರು. ಇದೇ ವೇಳೆ ಯುವತಿಯರು ಕ್ಷಮೆ ಕೇಳಬೇಕೆಂದು ಕೇಳಿದಾಗ, ಮಹಿಳೆ ತನ್ನ ಹೇಳಿಕೆಯನ್ನು ಪುನರಾವರ್ತಿಸಲು ನಿರಾಕರಿಸಿದ್ದರು. ಅಲ್ಲದೆ ವೀಡಿಯೊವನ್ನು ಚಿತ್ರೀಕರಿಸುವ ಹುಡುಗಿಗೆ “ಗೋ ಟು ಹೆಲ್” ಎಂದು ಗರಂ ಆಗಿ ಉತ್ತರಿಸಿದ್ದಾರೆ.