Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Crime

ಅಪ್ರಾಪ್ತ ಮಗಳ ಮೇಲೆಯೇ ರೇಪ್ ಮಾಡಲು ಪ್ರೇಮಿಗೆ ಅವಕಾಶ ಕೊಟ್ಟ ಮಹಿಳೆಗೆ 40 ವರ್ಷ ಜೈಲು ಶಿಕ್ಷೆ

Public TV
Last updated: November 27, 2023 10:58 pm
Public TV
Share
2 Min Read
jail 1
SHARE

ತಿರುವನಂತಪುರಂ: 7 ವರ್ಷದ ಮಗಳ ಮೇಲೆ ಅತ್ಯಾಚಾರ (Rape) ಎಸಗಲು ತನ್ನ ಪ್ರೇಮಿಗೆ (Lover) ಅವಕಾಶ ಕೊಟ್ಟ ಮಹಿಳೆಗೆ ಕೇರಳ (Kerala) ಕೋರ್ಟ್ 40 ವರ್ಷ, 6 ತಿಂಗಳ ಕಠಿಣ ಜೈಲು ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸಿದೆ.

ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ತಿರುವನಂತಪುರಂನ (Thiruvananthapuram) ವಿಶೇಷ ಫಾಸ್ಟ್ ಟ್ರ‍್ಯಾಕ್ ಕೋರ್ಟ್ ಆರೋಪಿ ಮಹಿಳೆಯನ್ನು ತಾಯ್ತನಕ್ಕೆ ಅವಮಾನ ಎಂದು ಪರಿಗಣಿಸಿದೆ. ಮಾತ್ರವಲ್ಲದೆ ಆಕೆ ಯಾವುದೇ ಕರುಣೆಗೆ ಅರ್ಹಳಲ್ಲ ಎಂದು ಘೋಷಿಸಿದ್ದು, ಗರಿಷ್ಠ ಶಿಕ್ಷೆಯನ್ನು ವಿಧಿಸುವುದಾಗಿ ಹೇಳಿದೆ. ಆಕೆ ದಂಡ ಪಾವತಿಸಲು ವಿಫಲಳಾದಲ್ಲಿ ಹೆಚ್ಚುವರಿ 6 ತಿಂಗಳ ಜೈಲು (Jail) ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

POCSO Special Court

ಪೋಕ್ಸೋ (POCSO) (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಪ್ರಕರಣಗಳಲ್ಲಿ ಹೆಚ್ಚಾಗಿ ತಾಯಂದಿರು ಕಾನೂನು ಪರಿಣಾಮಗಳನ್ನು ಎದುರಿಸುವುದು ಬಹಳ ವಿರಳ. ಈ ಘಟನೆ 2018ರ ಮಾರ್ಚ್‌ನಿಂದ 2019ರ ಸೆಪ್ಟೆಂಬರ್ ನಡುವೆ ಘಟಿಸಿದೆ. ಈ ಸಮಯದಲ್ಲಿ ಮಹಿಳೆ ತನ್ನ ಮಾನಸಿಕ ಅಸ್ವಸ್ಥ ಪತಿಯಿಂದ ಬೇರ್ಪಟ್ಟು, ಪ್ರಕರಣದ ಪ್ರಮುಖ ಆರೋಪಿಯಾದ ಶಿಶುಪಾಲನ್ ಜೊತೆ ಲಿವ್‌ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಳು. ಆ ಸಂದರ್ಭ ಮಹಿಳೆಯ 7 ವರ್ಷದ ಕಿರಿಯ ಮಗಳು ಸಹ ಅವರೊಂದಿಗೆ ವಾಸಿಸುತ್ತಿದ್ದಳು.

ಶಿಶುಪಾಲನ್ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಹಿನ್ನೆಲೆ ಆಕೆಯ ಖಾಸಗಿ ಭಾಗಗಳಿಗೆ ಗಾಯಗಳಾಗಿತ್ತು. ಇದರಲ್ಲಿ ಆಘಾತಕಾರಿ ವಿಚಾರವೆಂದರೆ 2018 ರಿಂದ 2019ರ ನಡುವೆ ಸಂತ್ರಸ್ತ ಬಾಲಕಿಯ ತಾಯಿಯ ಸಹಕಾರದಲ್ಲಿಯೇ ಶಿಶುಪಾಲನ್ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾನೆ.

RApe 1

ಇಷ್ಟು ಮಾತ್ರವಲ್ಲದೇ ಆತ ಸಂತ್ರಸ್ತೆಯ 11 ವರ್ಷದ ಮಲಸಹೋದರಿಯ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲಿಯವರೆಗೂ ಬಾಲಕಿಯರಿಗೆ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯವನ್ನು ಎಲ್ಲೂ ಹೇಳಿಕೊಳ್ಳದಂತೆ ಬೆದರಿಸಲಾಗಿತ್ತು. ಬಳಿಕ ಬಾಲಕಿಯರು ತಮ್ಮ ಅಜ್ಜಿಮನೆಗೆ ಪರಾರಿಯಾಗಿದ್ದು, ಅಲ್ಲಿ ನಡೆದೆಲ್ಲಾ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಯುವಕರೊಂದಿಗೆ ಡ್ಯಾನ್ಸ್ ಮಾಡಿದ್ದಕ್ಕೆ ಯುವತಿಯ ಹತ್ಯೆ!

ಘಟನೆಯನ್ನು ತಿಳಿದು ಗಾಬರಿಗೊಳಗಾದ ಅಜ್ಜಿ ಮಕ್ಕಳನ್ನು ಪಾಲನಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಕೌನ್ಸೆಲಿಂಗ್ ನಡೆಸಿದ ವೇಳೆ ಮಕ್ಕಳು ಘಟನೆಯನ್ನು ತಿಳಿಸಿದ್ದಾರೆ. ಮಹಿಳೆಯ ಮತ್ತೊಬ್ಬ ಪ್ರೇಮಿ ಕೂಡ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದು ತಿಳಿದು ಬಂದಿದ್ದು, ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

ವಿಚಾರ ಬಹಿರಂಗವಾದ ಬಳಿಕ ಶಿಶುಪಾಲನ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಹಿನ್ನೆಲೆ ಅತ್ಯಾಚಾರಕ್ಕೆ ಸಹಕರಿಸಿದ ತಾಯಿಗೆ ಮಾತ್ರವೇ ಇದೀಗ 40 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: 4ನೇ ತರಗತಿ ವಿದ್ಯಾರ್ಥಿಗೆ ಕೈವಾರದಿಂದ 108 ಬಾರಿ ಚುಚ್ಚಿದ ಸಹಪಾಠಿಗಳು

TAGGED:jailkeralamotherPOCSOrapeThiruvananthapuramಅತ್ಯಾಚಾರಕೇರಳಜೈಲುತಾಯಿತಿರುವನಂತಪುರಂಪೋಕ್ಸೋ
Share This Article
Facebook Whatsapp Whatsapp Telegram

Cinema Updates

Upendra
ಇನ್ಮುಂದೆ ಉಪ್ಪಿ ʻನೆಕ್ಸ್ಟ್‌ ಲೆವೆಲ್‌ʼ – ಸದ್ದಿಲ್ಲದೇ ಸೆಟ್ಟೇರುತ್ತಿದೆ ಹೊಸ ಸಿನಿಮಾ
Cinema Latest Sandalwood
Pavithra Gowda Insta Profile
ಟೆನ್ಷನ್ ಹೊತ್ತಲ್ಲಿ ಬದಲಾಯ್ತು ಪವಿತ್ರಾ ಗೌಡ ಪ್ರೊಫೈಲ್
Cinema Latest Top Stories
S O Muttanna
ದೇವರಾಜ್ ಪುತ್ರ ಪ್ರಣಂ ಸಿನಿಮಾ ಹಾಡಿಗೆ ಸಂಜಿತ್ ಹೆಗ್ಡೆ ದನಿ
Cinema Latest Sandalwood Top Stories
Kantara Chapter 1
ಕಾಂತಾರ ಚಾಪ್ಟರ್‌ 1 – ಇದು ಬರೀ ಸಿನಿಮಾ ಅಲ್ಲ `ಶಕ್ತಿ’ ಎಂದ ರಿಷಬ್ ಶೆಟ್ಟಿ
Cinema Latest Top Stories
rishab shetty 1
3 ವರ್ಷದ ಸಿನಿ ಪಯಣದ ಒಂದು ಝಲಕ್: ಕಾಂತಾರ ಅದ್ಭುತ ಲೋಕ
Cinema Latest Main Post Sandalwood

You Might Also Like

CRIME
Crime

ಮನೆಯಲ್ಲಿದ್ದ ಮಹಿಳೆಯರ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ; ಹಿಡಿದು ಪೊಲೀಸರಿಗೊಪ್ಪಿಸಿದ ಜನ

Public TV
By Public TV
30 seconds ago
Hassan 3 Suspended For celebrating Birthday In Govt Office
Districts

ಸರ್ಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯ ಹುಟ್ಟುಹಬ್ಬ ಆಚರಣೆ – ಮೂವರು ಸಾರಿಗೆ ಅಧಿಕಾರಿಗಳ ಅಮಾನತು

Public TV
By Public TV
12 minutes ago
Davanagere Shruna Annual Fest
Davanagere

ದಾವಣಗೆರೆ ಶೃಂಗ ಸಮ್ಮೇಳನ – 15 ವರ್ಷಗಳ ಬಳಿಕ ಒಂದಾದ ಪಂಚಪೀಠಾಧೀಶರು

Public TV
By Public TV
17 minutes ago
Maharashtra Murder
Crime

ʻದೃಶ್ಯಂʼ ಸಿನಿಮಾ ಸ್ಟೈಲ್‌ನಲ್ಲಿ ಕೊಲೆ – ಪ್ರಿಯಕರನ ಜೊತೆಗೂಡಿ ಗಂಡನನ್ನ ಕೊಂದು ಟೈಲ್ಸ್‌ ಕೆಳಗೆ ಹೂತಿದ್ದ ಪತ್ನಿ

Public TV
By Public TV
41 minutes ago
Bengaluru Lady PSI Trapped In Lokayukta
Bengaluru City

1.25 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಪಿಎಸ್‌ಐ

Public TV
By Public TV
47 minutes ago
Jagdeep Dhankhar 2
Latest

Breaking | ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್‌ ಧನಕರ್‌ ರಾಜೀನಾಮೆ

Public TV
By Public TV
59 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?