ಮುಂಬೈ: ಅಬುಧಾಬಿಯಿಂದ ಮುಂಬೈಗೆ (Mumbai) ಆಗಮಿಸಿದ ವಿಸ್ತಾರಾ ವಿಮಾನದಲ್ಲಿ (Vistara Airlines) ಸೋಮವಾರ ಇಟಲಿಯ ಮಹಿಳಾ (Italian Woman) ಪ್ರಯಾಣಿಕೆ ಅರೆಬೆತ್ತಲಾಗಿ ಓಡಾಡಿದ್ದಲ್ಲದೇ ಗಲಾಟೆ ನಡೆಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದಕ್ಕೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ವರದಿಗಳ ಪ್ರಕಾರ ಮಹಿಳೆ ಎಕನಾಮಿ ಟಿಕೆಟ್ ಪಡೆದಿದ್ದರೂ ಬ್ಯುಸಿನೆಸ್ ಕ್ಲಾಸ್ನಲ್ಲಿ ಕುಳಿತುಕೊಳ್ಳಲು ಹಠ ಮಾಡಿದ್ದಾಳೆ. ಇದನ್ನು ತಡೆಯಲು ಪ್ರಯತ್ನಿಸಿದ ಕ್ಯಾಬಿನ್ ಸಿಬ್ಬಂದಿ ಮೇಲೆ ಆಕೆ ಹಲ್ಲೆ ನಡೆಸಿದ್ದಾಳೆ. ಮಾತ್ರವಲ್ಲದೇ ತಾನು ಧರಿಸಿದ್ದ ಕೆಲವು ಬಟ್ಟೆಗಳನ್ನು ಕಳಚಿ ಅರೆಬೆತ್ತಲಾಗಿ ಓಡಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ 25ಕ್ಕೂ ಹೆಚ್ಚು ಜ್ಯುವೆಲ್ಲರಿ ಶಾಪ್ಗಳ ಮೇಲೆ ಐಟಿ ದಾಳಿ
ವಿಮಾನದಲ್ಲಿ ಗದ್ದಲ ಸೃಷ್ಟಿಸಿದ ಮಹಿಳೆ ಇಟಲಿಯ ಪಾವೊಲಾ ಪೆರುಸಿಯೋ ಎಂದು ಗುರುತಿಸಲಾಗಿದೆ. ಆಕೆ ಕುಡಿದ ಮತ್ತಿನಲ್ಲಿದ್ದಳು ಎನ್ನಲಾಗಿದೆ. ಆಕೆಯ ವಿರುದ್ಧ ಏರ್ ವಿಸ್ತಾರ ಯುಕೆ-256 ವಿಮಾನದಲ್ಲಿದ್ದ ಸಿಬ್ಬಂದಿ ದೂರು ನೀಡಿದ್ದಾರೆ. ಮಹಿಳೆಯ ಹಿಂಸಾತ್ಮಕ ಹಾಗೂ ಅಶಿಸ್ತಿನ ವರ್ತನೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಯುವಕನ ಜೊತೆಗೆ ಪಾರ್ಕ್ನಲ್ಲಿ ಕೂತಿದ್ದಕ್ಕೆ 1 ಸಾವಿರ ವಸೂಲಿ- ಪೇದೆ ವಿರುದ್ಧ ಯುವತಿ ದೂರು
ಮಹಿಳೆಯ ಬಂಧನದ ಬಳಿಕ ಆಕೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k