ಮುಂಬೈ: ಮಹಿಳೆಯೊಬ್ಬಳು (Women) ಕೋಳಿ ರಕ್ತ (Chicken Blood) ಬಳಸಿಕೊಂಡು 64 ವರ್ಷದ ಉದ್ಯಮಿ ವಿರುದ್ಧ ಸುಳ್ಳು ರೇಪ್ ಕೇಸ್ ದಾಖಲಿಸಿ ಈಗ ಪೊಲೀಸರಿಗೆ ತಗಲಾಕ್ಕೊಂಡಿರುವ ಘಟನೆ ಮುಂಬೈನಲ್ಲಿ (Mumbai) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
2021ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು (Mumbai Police) ಸ್ಥಳೀಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದಾಗ ಕೇಸ್ ಬೆಳಕಿಗೆ ಬಂದಿದೆ. ವಿವಿಧ ಖಾಸಗಿ ಹುದ್ದೆಗಳಲ್ಲಿರುವ ಮೋನಿಕಾ ಭಗವಾನ್ ಅಲಿಯಾಸ್ ದೇವ್ ಚೌಧರಿ, ಅನಿಲ್ ಚೌಧರಿ ಅಲಿಯಾಸ್ ಆಕಾಶ್, ಲುಬ್ನಾ ವಜೀರ್ ಅಲಿಯಾಸ್ ಸಪ್ನಾ ಆರೋಪಿಗಳಾಗಿದ್ದಾರೆ.
Advertisement
Advertisement
2019ರಲ್ಲಿ ಮೋನಿಕಾ ಮತ್ತು ಆಕೆಯ ಸಹಚರರು ಖಾಸಗಿ ವೀಡಿಯೋ ರೆಕಾರ್ಡ್ ಮಾಡಿದ್ದು, 64ರ ಉದ್ಯಮಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ವೃದ್ಧನ ಬಳಿ ಎರಡು ವರ್ಷಗಳ ಅವಧಿಯಲ್ಲಿ 3.26 ಕೋಟಿ ಹಣ ವಸೂಲಿ ಮಾಡಿದರು. ಇದರಿಂದ ಬೇಸತ್ತಿದ್ದ ಉದ್ಯಮಿ 2021ರಲ್ಲಿ ಮಹಾರಾಷ್ಟ್ರದ ಸಹಾರ್ ಪೊಲೀಸ್ ಠಾಣೆಯಲ್ಲಿ ಮೋನಿಕಾ ಮತ್ತು ಆಕೆಯ ಸಹಚರರು ವಸೂಲಿ ಮಾಡಿರುವುದಾಗಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಅಪ್ಪು, ಶಿವಣ್ಣನ ಹೆಸರಲ್ಲೂ ವಂಚನೆ – ಬಗೆದಷ್ಟೂ ಬಯಲಾಗ್ತಿದೆ ಮಾಡೆಲ್ ನಿಶಾಳ ಕರಾಳ ಮುಖ!
Advertisement
Advertisement
ಮುಂಬೈ ಗ್ಯಾಂಗ್ ಸ್ಕೆಚ್ ಹಾಕಿದ್ದೇ ರೋಚಕ?
ಮೋನಿಕಾ ಮತ್ತವರ ಸಹಚರರ ಗ್ಯಾಂಗ್ ಸ್ಕೆಚ್ ಹಾಕಿದ್ದನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ. ಹೌದು. 2019ರಲ್ಲಿ ಹೆಸರು ಬಹಿರಂಗಪಡಿಸದ ಉದ್ಯಮಿ ಮುಂಬೈನ ಏರ್‌ಪೋರ್ಟ್‌ನ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದರು. ಈ ವೇಳೆ ಸಪ್ನಾ ಮತ್ತು ಮೋನಿಕಾ ಪರಿಚಯವಾಗಿದ್ದಾರೆ. ನಂತರ ಅವರೊಂದಿಗೆ ರಾತ್ರಿ ಔತಣ ಕೂಟಕ್ಕೆ ಸೇರಬಹುದೇ ಅಂತಾ ಕೇಳಿದ್ದಾರೆ. ಉದ್ಯಮಿ ಒಪ್ಪಿಕೊಂಡ ನಂತರ ರಾತ್ರಿ ಅವರ ಕೊಠಡಿಯಲ್ಲೇ ಊಟಕ್ಕೆ ಸೇರಿದ್ದಾರೆ. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ
ಊಟ ಮುಗಿದ ಸ್ವಲ್ಪ ಸಮಯದ ಬಳಿಕ ಸಪ್ನಾ ಕೆಲ ದಾಖಲೆಗಳನ್ನ ಹೋಟೆಲ್ ಲಾಭಿಯಲ್ಲಿ ಯಾರಿಗಾದ್ರೂ ಕೊಟ್ಟು ಬರುತ್ತೇನೆ ಅಂತಾ ರೂಮ್ ಬಾಗಿಲು ಹಾಕಿಕೊಂಡು ಹೊರಬಂದಿದ್ದಾಳೆ. ಅದೇ ಸಮಯಕ್ಕೆ ಮೋನಿಕಾ ವಾಶ್‌ರೂಮ್ ಒಳಗೆ ಹೋಗಿದ್ದಾಳೆ. ಸ್ವಲ್ಪ ಸಮಯದ ನಂತರ ಡೋರ್ ಬೆಲ್ ಸದ್ದು ಕೇಳಿ ಉದ್ಯಮಿ ಬಾಗಿಲು ತೆರೆಯಲು ಬಂದಿದ್ದಾನೆ. ಅದೇ ಸಮಯಕ್ಕೆ ಒಳಗಿದ್ದ ಮೋನಿಕಾ ಕಿಟಾರನೆ ಕಿರುಚಿಕೊಳ್ಳಲು ಶುರು ಮಾಡುತ್ತಿದ್ದಂತೆ, ಹೊರಗಿನಿಂದ ಬಂದ ಸಪ್ನಾ ವಿಡಿಯೋ ರೆಕಾರ್ಡ್ ಮಾಡಲು ಶುರು ಮಾಡಿದ್ದಾಳೆ. ವಾಶ್ ರೂಮ್‌ಗೆ ಹೋಗಿದ್ದ ಮೋನಿಕಾ ಕ್ಷಣ ಮಾತ್ರದಲ್ಲೇ ವಿವಸ್ತ್ರಳಾಗಿ ಬೆಡ್‌ಶೀಟ್‌ನಿಂದ ತನ ಮೈ ಮುಚ್ಚಿಕೊಂಡು ಕುಳಿತಿದ್ದದ್ದು ಕಂಡುಬಂದಿದೆ. ಅಲ್ಲದೇ ಬೆಡ್‌ಶೀಟ್ ಮೇಲೆ, ಆಕೆಯ ಗುಪ್ತಾಂಗ ಇತರ ಭಾಗಗಳಿಗೆ ರಕ್ತದ ಕಲೆಗಳಾಗಿರುವುದು ಕಂಡುಬಂದಿದೆ. ಇದನ್ನು ಕಂಡ ವೃದ್ಧ ಅಲ್ಲೇ ಶಾಕ್ ಆಗಿದ್ದಾನೆ.
ಅದೇ ಸಮಯಕ್ಕೆ ಮತ್ತೊಬ್ಬ ಆರೋಪಿ ಅನಿಲ್ ಸಹ ಅಲ್ಲಿಗೆ ಬಂದಿದ್ದಾನೆ. 10 ಕೋಟಿ ಹಣ ಕೊಡದಿದ್ದರೆ ಈ ವೀಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕೊನೆಗೆ ಉದ್ಯಮಿ 75 ಲಕ್ಷ ಕೊಡಲು ಒಪ್ಪಿದ್ದಾನೆ. ಆತನಿಂದ ಆಗಾಗ್ಗೆ ಬೆದರಿಕೆ ಹಾಕಿ 2 ವರ್ಷಗಳಲ್ಲಿ 3.26 ಕೋಟಿ ವಸೂಲಿ ಮಾಡಿದ್ದಾರೆ. 1 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕೂಡ ವಸೂಲಿ ಮಾಡಿದ್ದರು. ಇದರಿಂದ ಬೇಸತ್ತ ಉದ್ಯಮಿ 2021ರ ನವೆಂಬರ್ 17ರಂದು ಸಹರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡ ಪೊಲೀಸರು ಮತ್ತೊಮ್ಮೆ ಹಣ ಸುಲಿಗೆ ಮಾಡುವ ಸಮಯಕ್ಕೆ ದಾಳಿ ಮಾಡಿ ಬಂಧಿಸಿದ್ದಾರೆ.
ತನಿಖೆ ವೇಳೆ ಮೋನಿಕಾ ಕೋಳಿ ರಕ್ತವನ್ನ ತಾನೇ ಗುಪ್ತಾಂಗಕ್ಕೆ ಹಚ್ಚಿಕೊಂಡಿದ್ದಾಳೆ, ಜೊತೆಗೆ ಬೆಡ್‌ಶೀಟ್ ಮೇಲೂ ಸುರಿದು ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿರುವುದು ಸಾಬೀತಾಗಿದೆ. ಆರೋಪಿಗಳಿಂದ 49.35 ಲಕ್ಷ ರೂ. ವಶಕ್ಕೆ ಪಡೆದುಕೊಂಡಿದ್ದು, ಜೈಲಿಗಟ್ಟಲಾಗಿದೆ. ತನಿಖೆ ಮುಂದುವರಿದಿದೆ.
Web Stories