ನವದೆಹಲಿ: 7 ತಿಂಗಳ ಹಿಂದೆ ನಡೆದ ರಸ್ತೆ ಅಪಘಾತ ವೇಳೆ ಗರ್ಭಿಣಿಯೊಬ್ಬಳ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಕೋಮಾ ಸ್ಥಿತಿಯಲ್ಲಿದ್ದ ಆಕೆ (Woman) ಆರೋಗ್ಯವಂತ ಹೆಣ್ಣು ಮಗುವಿಗೆ (Baby) ಜನ್ಮ ನೀಡಿದ್ದಾಳೆ.
23 ವರ್ಷದ ಗರ್ಭಿಣಿಯೊಬ್ಬಳು 2022ರ ಏಪ್ರಿಲ್‍ನಲ್ಲಿ ತನ್ನ ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಅಪಘಾತವಾಗಿತ್ತು. ಈ ಸಂದರ್ಭದಲ್ಲಿ ಇಬ್ಬರು ಹೆಲ್ಮೇಟ್ ಧರಿಸಿರಲಿಲ್ಲ. ಇದರಿಂದಾಗಿ ಪತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಆದರೆ ಮಹಿಳೆಗೆ ತೀವ್ರವಾಗಿ ತಲೆಗೆ ಪಟ್ಟು ಬಿದ್ದಿತ್ತು. ಇದರಿಂದಾಗಿ ಚಿಕಿತ್ಸೆಗಾಗಿ ದೆಹಲಿಯ (Delhi) ಏಮ್ಸ್ ಟ್ರಾಮಾ ಸೆಂಟರ್‌ಗೆ ಆಕೆಯನ್ನು ದಾಖಲಿಸಲಾಗಿತ್ತು.
Advertisement
Advertisement
ಆಕೆಯ ಮೆದುಳಿಗೆ ತೀವ್ರವಾದ ಗಾಯಗಳಾಗಿತ್ತು. ಈ ವೇಳೆ ಆಕೆಯನ್ನು ತುರ್ತು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಅಷ್ಟೇ ಅಲ್ಲದೇ ಆಸ್ಪತ್ರೆಗೆ ದಾಖಲಾಗಿದ್ದ ಕಳೆದ 7 ತಿಂಗಳಲ್ಲಿ 5 ಶಸ್ತ್ರಚಿತ್ಸೆಯನ್ನು ಮಾಡಲಾಗಿತ್ತು. ಜೊತೆಗೆ ಆಕೆ ಕೋಮಾ ಸ್ಥಿತಿಯಲ್ಲಿದ್ದಳು. ಅಷ್ಟೇ ಅಲ್ಲದೇ ಕೆಲವೊಮ್ಮೆ ಕಣ್ಣುಗಳನ್ನು ತೆರೆಯುತ್ತಿದ್ದಳು. ಇದನ್ನೂ ಓದಿ: ಸಕ್ಕರೆ ರಫ್ತಿನ ಮೇಲಿನ ನಿರ್ಬಂಧ ಇನ್ನೊಂದು ವರ್ಷ ವಿಸ್ತರಣೆ
Advertisement
Advertisement
ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ವೈದ್ಯರು ಹಾಗೂ ಕುಟುಂಬಸ್ಥರು ಮಗುವನ್ನು ತೆಗೆಯಬೇಕೋ, ಬೇಡವೋ ಎನ್ನುವುದರ ಕುರಿತು ಸಾಕಷ್ಟು ಚರ್ಚೆಯನ್ನು ನಡೆಸಿದ್ದರು. ಕೊನೆಗೂ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಮಗುವನ್ನು ಉಳಿಸಿಕೊಳ್ಳಲಾಗಿತ್ತು. ಇದೀಗ ಮಗುವಿಗೆ ಜನ್ಮ ನೀಡಿದ್ದು, ಮಗು ಆರೋಗ್ಯವಾಗಿದೆ. ಆದರೆ ಮಹಿಳೆ ಇನ್ನೂ ಕೋಮಾದಿಂದ ಹೊರಬಂದಿಲ್ಲ. ಇದನ್ನೂ ಓದಿ: ಗೂಳಿಗೆ ಡಿಕ್ಕಿ ಹೊಡೆದು ವಂದೇ ಭಾರತ್ ಎಕ್ಸ್‌ಪ್ರೆಸ್ ಜಖಂ – ತಿಂಗಳಲ್ಲಿ 3ನೇ ದುರ್ಘಟನೆ