ನವದೆಹಲಿ: ಮಹಿಳೆಯೊಬ್ಬರು ತನ್ನ ಪ್ರಿಯಕರನನ್ನು ಮದುವೆಯಾಗುವ ಸಲುವಾಗ ಆತ ಡಿಮ್ಯಾಂಡ್ ಮಾಡಿದ ಹಣ ನೀಡಲು ಕಿಡ್ನಿಯನ್ನೇ ಮಾರಲು ಮುಂದಾದ ಬಗ್ಗೆ ವರದಿಯಾಗಿದೆ.
ಬಿಹಾರದ ನಿವಾಸಿಯಾದ 21 ವರ್ಷದ ಮಹಿಳೆಗೆ ಈಗಾಗಲೇ ಡೈವೋರ್ಸ್ ಆಗಿತ್ತು. ಆಕೆಯ ಪ್ರಿಯಕರ ಮದುವೆಯಾಗಲು 1.8 ಲಕ್ಷ ರೂ. ಹಣ ಡಿಮ್ಯಾಂಡ್ ಮಾಡಿದ್ದ. ಹೀಗಾಗಿ ಆಕೆ ಕಿಡ್ನಿ ಮಾರಲು ದೆಹಲಿಗೆ ಬಂದಿದ್ದಾರೆ.
Advertisement
Advertisement
Advertisement
ದೆಹಲಿಯ ಆಸ್ಪತ್ರೆಗೆ ಮಹಿಳೆ ಬಂದ ನಂತರ ಆಕೆ ಕಿಡ್ನಿ ಮಾರಾಟ ಜಾಲದಲ್ಲಿ ಸಿಲುಕಿಕೊಂಡಿರಬಹುದೆಂಬ ಅನುಮಾನದಿಂದ ಆಸ್ಪತ್ರೆ ಸಿಬ್ಬಂದಿ ಮಹಿಳಾ ಸಹಾಯವಾಣಿಗೆ ಕರೆ ಮಾಡಿದ್ದು, ಪೊಲೀಸರಿಗೂ ವಿಷಯ ಮುಟ್ಟಿಸಿದ್ದರು.
Advertisement
ದೆಹಲಿ ಮಹಿಳಾ ಆಯೋಗದ ತಂಡ ಕೂಡ ಆಸ್ಪತ್ರೆಗೆ ಬಂದು ಮಹಿಳೆಯನ್ನ ವಿಚಾರಿಸಿದ್ದರು. ಆಗ ಆಕೆ, ನಾನು ವಿಚ್ಛೇದನದ ನಂತರ ತಂದೆ ತಾಯಿಯೊಂದಿಗೆ ಬಿಹಾರದಲ್ಲಿ ವಾಸವಿದ್ದೇನೆ. ಅಲ್ಲಿ ನೆರಮನೆಯ ವ್ಯಕ್ತಿಯೊಬ್ಬರು ಪರಿಚಯವಾಗಿ ಪ್ರೀತಿಯಾಗಿತ್ತು. ಆದ್ರೆ ನಮ್ಮ ತಂದೆ ತಾಯಿ ಈ ಮದುವೆಗೆ ಒಪ್ಪಿರಲಿಲ್ಲ. ಉತ್ತರಪ್ರದೇಶದ ಮೊರಾದಾಬಾದ್‍ನಲ್ಲಿ ಪ್ರಿಯಕರ ಕೆಲಸ ಮಾಡುತ್ತಿದ್ದು, ನನ್ನನ್ನು ಮದುವೆಯಾಗುತ್ತಾರೆ ಎಂದುಕೊಂಡು ಅವರಿದ್ದ ಸ್ಥಳಕ್ಕೆ ಹೋದೆ ಎಂದು ಹೇಳಿದ್ದಾರೆ.
ಆದ್ರೆ ಅವರಿಗೆ ಹಣ ಕೊಟ್ಟರೆ ಮಾತ್ರ ಮದುವೆಯಾಗೋದಾಗಿ ಹೇಳಿದ್ರು. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಕಿಡ್ನಿ ಮಾರಲು ನಿರ್ಧರಿಸಿ ದೆಹಲಿಗೆ ಬಂದೆ ಎಂದು ಮಹಿಳೆ ಹೇಳಿದ್ದಾರೆ.
ಮಹಿಳಾ ಆಯೋಗದ ಸದಸ್ಯೆಯೊಬ್ಬರು ಮಹಿಳೆಗೆ ಕೌನ್ಸೆಲಿಂಗ್ ಮಾಡಿದ್ದು, ಪ್ರಿಯಕರನ ವಿರುದ್ಧ ಪೊಲೀಸರಿಗೆ ದೂರು ನೀಡಲು ಸಲಹೆ ನೀಡಿದ್ದಾರೆ. ಆದ್ರೆ ಮಹಿಳೆ ದೂರು ನೀಡಲು ನಿರಾಕರಿಸಿದ್ದು, ಬಿಹಾರದ ತನ್ನ ಪೋಷಕರ ಮನೆಗೆ ಹಿಂದಿರುಗಿದ್ದಾರೆ.
ದೆಹಲಿ ಮಹಿಳಾ ಆಯೋಗದವರು ಈ ಪ್ರಕರಣವನ್ನ ಬಿಹಾರ ಮಹಿಳಾ ಆಯೋಗಕ್ಕೆ ವರ್ಗಾಯಿಸಿದ್ದು, ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮಹಿಳೆಗೆ ನೆರವಾಗುವಂತೆ ಕೇಳಿಕೊಂಡಿದ್ದಾರೆ.