ನೂಯಾರ್ಕ್: ಮಹಿಳೆಯೊಬ್ಬರು ಸ್ವಿಮ್ ಮಾಡುತ್ತಿರುವಾಗ ಕೊಳದ ಏಣಿ ಮುರಿದಿದ್ದರಿಂದ ಈಜುಕೊಳದಲ್ಲಿ ಬರೋಬ್ಬರಿ ಮೂರು ಗಂಟೆ ಸಿಲುಕಿ, ಕೊನೆಗೆ ಫೇಸ್‍ಬುಕ್ ಸಹಾಯದಿಂದಾಗಿ ನೀರಿನಿಂದ ಮೇಲಕ್ಕೆ ಬಂದಿದ್ದಾರೆ.
ಲೇಸ್ಲಿ ಖಾನ್ (61) ಈಜುಕೊಳದಲ್ಲಿ ಸಿಲುಕಿದ ಮಹಿಳೆ. ಈಜುಕೊಳದಲ್ಲಿ ಈಜಿದ ಬಳಿಕ ಮೇಲ್ಗಡೆ ಬರುವ ವೇಳೆ ಏಣಿ ಮುರಿದು ಹೋಗಿದೆ. ಈ ವೇಳೆ ಲೇಸ್ಲಿ ಸುತ್ತಲೂ ನೋಡಿದ್ದಾರೆ. ಅಲ್ಲಿಯೂ ಯಾರು ಇರಲಿಲ್ಲ. ಮೂರು ಗಂಟೆಯವೆರೆಗೂ ಈಜುಕೊಳದಿಂದ ಬರಲು ಸಾಕಷ್ಟು ಪ್ರಯತ್ನ ಮಾಡಿದ್ದರೂ, ಮೇಲೆ ಬರಲು ಸಾಧ್ಯವಾಗಿಲ್ಲ.
Advertisement
Advertisement
ಕೊನೆಗೆ ಹತ್ತಿರದಲ್ಲಿದ ಮೊಬೈಲ್‍ನ್ನು ಕಷ್ಟಪಟ್ಟು ತೆಗೆದುಕೊಂಡು ಫೇಸ್‍ಬುಕ್ ಮೊರೆ ಹೋಗಿದ್ದಾರೆ. ಲೆಸ್ಲೀ ಪೋಸ್ಟ್ ಮಾಡಿ ಕೆಲ ಸಮಯದಲ್ಲೇ ಹಲವು ಮಂದಿ ಸಹಾಯಕ್ಕೆ ಧಾವಿಸಿದ್ದಾರೆ. ಸಹಾಯಕ್ಕಾಗಿ ಮೊದಲು ಪೊಲೀಸರು ಆಗಮಿಸಿದ್ದು, ನಂತರ ನೆರೆಹೊರೆಯವರು ಹಾಗು ಸ್ನೇಹಿತರು ಸಾಕಷ್ಟು ಸಂಖ್ಯೆಯಲ್ಲಿ ಲೇಸ್ಲಿ ಮನೆಗೆ ಬಂದಿದ್ದಾರೆ. ಫೇಸ್‍ಬುಕ್ ಲೇಸ್ಲೀ ಪೋಸ್ಟ್ ಸುಮಾರು 3,981 ಜನರು ಸಹಾಯಕ್ಕಾಗಿ ಮಾಡಲು ಮುಂದೆ ಬಂದಿದ್ದಾರೆ.
Advertisement
ನನ್ನ ಒಂದು ಪೋಸ್ಟ್ ನಿಂದ ಹಲವರು ಸಹಾಯಕ್ಕೆ ಆಗಮಿಸಿದ್ದಾರೆ. ಎಲ್ಲರಿಗೂ ನನ್ನ ಧನ್ಯವಾದಗಳು ಇದರಿಂದ ನನಗೆ ತುಂಬಾ ಖುಸಿಯಾಗಿದೆ. ನಿಮಗೆ ಏನಾದರು ತೊಂದರೆ ಬಂದಾಗ ಸಹಾಯ ಕೇಳಿದರೆ, ಸಹಾಯ ಮಾಡಲು ಸದಾ ಸಿದ್ಧವಾಗಿರುತ್ತಾರೆ ಎಂದು ಲೇಸ್ಲೀ ತಮ್ಮ ಫೇಸ್‍ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
Advertisement
Woman Stranded In Backyard Pool Finds Help On Facebook https://t.co/b5UBOzwQcF pic.twitter.com/MYedE08w71
— WBZ | CBS Boston News (@wbz) August 18, 2017
#WBZ at 6: Stranded and trapped in her pool without a phone…how a woman used Facebook to call for help pic.twitter.com/MUGMbVfL2T
— Ryan Kath (@RyanNBCBoston) August 18, 2017