ಸಿಗರೇಟ್‌ನಿಂದ ಸುಟ್ಟು ಸಾಮೂಹಿಕ ಅತ್ಯಾಚಾರ- ಪತಿ, ಆತನ ಸ್ನೇಹಿತರು ಅರೆಸ್ಟ್‌

Public TV
1 Min Read
Couple 3

ಭೋಪಾಲ್: ರಕ್ಷಿಸಬೇಕಾದ ಪತಿ ತನ್ನ ಸ್ನೇಹಿತರಿಗೆ ಪತ್ನಿಯನ್ನು ಒಪ್ಪಿಸಿದ್ದಾನೆ. ಆಕೆಯ ಮೇಲೆ ಆ ನಾಲ್ವರು ಸಾಮೂಹಿಕ ಅತ್ಯಚಾರವೆಸಗಿ ಹಿಂಸೆ ನೀಡಿದ ಆರೋಪದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.

ನಡೆದಿದ್ದೇನು?: ಛತ್ತೀಸ್‍ಗಢ ಮೂಲದ ಈ ಮಹಿಳೆ ಇಂದೋರ್ ಮೂಲದ ವ್ಯಕ್ತಿಯನ್ನು ಮ್ಯಾಟ್ರಿಮೋನಿಯಲ್ ಸೈಟ್‍ನಲ್ಲಿ ಭೇಟಿಯಾದ ನಂತರ ಇಬ್ಬರು ವಿವಾಹವಾಗಿದ್ದರು. ಆದರೆ  ಆತನಿಗೆ ಈಗಾಗಲೇ ಬೇರೆಯವಳೊಂದಿಗೆ ಮದುವೆಯಾಗಿರುವುದು ಬೆಳಕಿಗೆ ಗೊತ್ತಾಗಿದೆ.  ಸಂತ್ರಸ್ತೆ ಹೇಗೋ ಫಾರ್ಮ್‍ಹೌಸ್‍ನಿಂದ ತಪ್ಪಿಸಿಕೊಂಡು ಛತ್ತೀಸ್‍ಗಢದಲ್ಲಿರುವ ತನ್ನ ಪೋಷಕರ ಮನೆಗೆ ಬಂದಿದ್ದಾಳೆ. ಅಲ್ಲಿಗೂ ಸಹ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವ ಹಿಂಬಾಲಿಸಿಕೊಂಡು ಬಂದಿದ್ದ. ಇದನ್ನೂ ಓದಿ: ಶಲ್ಯ ಮುಖಕ್ಕೆ ಕಟ್‌ಕೊಂಡಿನ್ರೀ ಮತ್ ಮಾಸ್ಕ್ ಯಾಕ್ ಹಾಕಬೇಕು: ವ್ಯಕ್ತಿಯ ಕಿರಿಕ್

RAPE STOP

ಅಕ್ಟೋಬರ್ 2021ರ ನಡುವೆ ಇಂದೋರ್‍ನ ಶಿಪ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಫಾರ್ಮ್‍ಹೌಸ್‍ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ನನ್ನ ಪತಿ ತನ್ನನ್ನು ಕ್ರೂರವಾಗಿ ನಡೆಸಿಕೊಂಡಿದ್ದಾನೆ. ಇಷ್ಟೇ ಅಲ್ಲಾ, ಅವನು ತನ್ನ ಸ್ನೇಹಿತರಿಗೆ ನನ್ನನ್ನು ಒಪ್ಪಿಸಿದ್ದ, ಅವರೆಲ್ಲರೂ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ತನ್ನ ಮೇಲೆ ನಡೆದ ಕೃತ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ. ಆಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದ ಸೀರಿಯಲ್ ತಂಡಕ್ಕೆ ಪ್ಯಾಕಪ್ ಹೇಳಿದ ಪೊಲೀಸರು

RAPE CASE

ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗ್ತಿದೆ. ಹಾಗೆಯೇ ಆಕೆಯ ಖಾಸಗಿ ಭಾಗಗಳನ್ನು ಸಿಗರೇಟಿನಿಂದ ಸುಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿದ ಹಿನ್ನೆಲೆ ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರಂತೆ. ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *